ಫೋನ್ ಪೇ, ಗೂಗಲ್ ಪೇ, ಪೇಟಿಎಂನಲ್ಲೇ ನಿಮಗೆ ತಕ್ಷಣ ಸಾಲ ಸಿಗುತ್ತೆ !! ಇಲ್ಲಿದೆ ವಿವರ

ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭವಾಗಲಿದೆ. ಈಗಾಗಲೇ ಪಾವತಿಯ (payment) ವಿಧಾನವಾಗಿ ಜನಪ್ರಿಯವಾದ ಯುಪಿಐ (UPI) ಬಳಸಿ ಇನ್ನು ಮುಂದೆ ನೇರವಾಗಿ ಸಾಲ (loan) ಪಡೆಯುವ ಅವಕಾಶ ಲಭ್ಯವಾಗಲಿದೆ.
ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm) ಸೇರಿದಂತೆ ಎಲ್ಲಾ ಪ್ರಮುಖ ಯುಪಿಐ ಆ್ಯಪ್‌ಗಳಿಂದಲೇ ಈ ಸೇವೆ ಪಡೆಯಬಹುದಾಗಿದೆ.ಎನ್‌ಪಿಸಿಐ (National Payments Corporation of India) ಅಧಿಕೃತವಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಯುಪಿಐ ಆ್ಯಪ್‌ಗಳ ಮೂಲಕ ಗ್ರಾಹಕರಿಗೆ ಸಾಲ ನೀಡಲು ಅನುಮತಿ ನೀಡಿವೆ.
ಈ ಹೊಸ ವ್ಯವಸ್ಥೆ 2025ರ ಆಗಸ್ಟ್ 31 ರಿಂದ ಪ್ರಾರಂಭವಾಗಲಿದ್ದು, ಅದರಿಂದ ವ್ಯವಹಾರ ಮತ್ತು ಸಾಮಾನ್ಯ ಜನತೆಗೆ ಹೆಚ್ಚು ಸೌಲಭ್ಯ ಸಿಗಲಿದೆ.
ಈ ಹೊಸ ಲೋನ್ ವ್ಯವಸ್ಥೆಯು ವಿವಿಧ ರೀತಿಯ ಸಾಲಗಳಿಗೆ ಅನ್ವಯಿಸುತ್ತದೆ. ಫಿಕ್ಸ್ಡ್ ಡೆಪಾಸಿಟ್ (Fixed Deposit) ಮೇಲೆ ಲೋನ್, ಬಂಗಾರದ ಮೇಲೆ ಸಾಲ (Gold Loan), ಮನೆ ಅಥವಾ ಭೂಮಿ ಆಧಾರಿತ ಆಸ್ತಿ ಲೋನ್ (Home Loan), ಶೇರು ಹಾಗೂ ಬಾಂಡ್ ಆಧಾರಿತ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲಗಳು ಇದರಲ್ಲಿ ಒಳಗೊಳ್ಳುತ್ತವೆ
ಯುಪಿಐ ಆ್ಯಪ್‌ಗಳಲ್ಲಿ ನಿಮ್ಮ ಲೋನ್ ಲಿಂಕ್ ಮಾಡುವ ವಿಧಾನ ಬಹಳ ಸರಳವಾಗಿದೆ. ನಿಮ್ಮ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯಿಂದ ಲೋನ್ ಪಡೆದ ನಂತರ, ಫೋನ್ ಪೇ ಅಥವಾ ಪೇಟಿಎಂ ಅಂಥ ಯುಪಿಐ ಆ್ಯಪ್‌ಗಳಲ್ಲಿ ಲಾಗಿನ್ ಆಗಿ ಲೋನ್ ಲಿಂಕ್ ಮಾಡಬಹುದು. ಅನುಮತಿ ದೊರೆತ ಬಳಿಕ, ನೀವು ಪ್ರತಿದಿನ ರೂ.10,000 ವರೆಗೆ ಹಣ ತೆಗೆದುಕೊಳ್ಳಬಹುದು. ತಿಂಗಳಿಗೆ ರೂ.50,000 ವರೆಗೆ ವ್ಯಾಪಾರ ಅಥವಾ ಖರೀದಿಗೆ ಉಪಯೋಗಿಸಬಹುದು
ಇದರಿಂದ ಪೇಪರ್‌ಲೆಸ್ (paperless), ಕ್ಯಾಶ್‌ಲೆಸ್ (cashless) ಲೋನ್ ಪ್ರಕ್ರಿಯೆ ಸಾಧ್ಯವಾಗುತ್ತದೆ. ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲದೆ, ಆ್ಯಪ್‌ನಲ್ಲಿಯೇ ಎಲ್ಲ ಕಾರ್ಯಗತಗೊಳಿಸಬಹುದಾಗಿದೆ. ಈ ಸೇವೆ ಗ್ರಾಮೀಣ ಭಾಗದವರಿಗೂ ಉಪಯುಕ್ತವಾಗಿದ್ದು, ರೈತರು ಕಿಸಾನ್ ಕಾರ್ಡ್ ಮೂಲಕ ನೇರವಾಗಿ ಪಾವತಿಗಳನ್ನು ನಡೆಸಬಹುದು.
ಅದರಲ್ಲಿಯೂ ಲಾವಾದೇವಿಗಳ ಮೇಲೆ ನಿರ್ಬಂಧಗಳಿರುತ್ತವೆ. ಲೋನ್ ಯಾವ ಉದ್ದೇಶಕ್ಕಾಗಿ ಸಿಕ್ಕಿದೆಯೋ, ಅದೇ ಉದ್ದೇಶಕ್ಕೆ ಮಾತ್ರ ಉಪಯೋಗಿಸಬಹುದಾಗಿದೆ.ಉದಾಹರಣೆಗೆ, ವೈದ್ಯಕೀಯ ಲೋನ್ ಪಡೆದುಕೊಂಡು ಅದನ್ನು ಬಂಗಾರದ ಖರೀದಿಗೆ ಬಳಸಲಾಗದು. ಪ್ರತಿದಿನ 20 ವ್ಯವಹಾರಗಳ ನಿಯಮವಿದೆ ಹಾಗೂ ರೂ.1 ಲಕ್ಷ ಮಿತಿಯನ್ನು ಉಳಿಸಲಾಗಿದೆ.
ಈ ಹೊಸ ವ್ಯವಸ್ಥೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ತ್ವರಿತ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ. ಹೊಸ ತಂತ್ರಜ್ಞಾನ, ಸರಳ ಪ್ರಕ್ರಿಯೆ ಹಾಗೂ ಡಿಜಿಟಲ್ ವಿತರಣೆಯ ಸಹಾಯದಿಂದ ಲೋನ್ ಪಡೆಯುವುದು ಹೆಚ್ಚು ಸುಲಭವಾಗಲಿದೆ.