ಇನ್ಮೇಲೆ ಗೃಹ ಲಕ್ಷ್ಮಿ 2000 ಹಣ ಬರಲ್ಲ! ಹೊಸ ರೂಲ್ಸ್!!

ಇತ್ತೀಚೆಗೆ ಕರ್ನಾಟಕದ ಬಹುಚರ್ಚಿತ ಗ್ರಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು-ಮೂರು ತಿಂಗಳಿಂದ ಹಲವಾರು ಮಹಿಳೆಯರು ತಮ್ಮ ಖಾತೆಗೆ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು ₹2000 ಹಣವನ್ನು ಮಹಿಳಾ ಮುಖ್ಯಸ್ಥೆಯ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ನಿರಂತರ ವಿಳಂಬಗಳು ಮಹಿಳೆಯರಲ್ಲಿ ಗೊಂದಲ ಮತ್ತು ನಿರಾಶೆ ಉಂಟುಮಾಡಿವೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಸರ್ಕಾರ ಈಗ ಈ ಮೊತ್ತವನ್ನು ₹2000 ರಿಂದ ₹1000ಕ್ಕೆ ಇಳಿಸುವ ತೀರ್ಮಾನ ಕೈಗೊಂಡಿದೆ ಎಂಬ ಸುದ್ದಿ ವೈರಲ್ ಆಗಿದೆ. ಹಣಕಾಸು ಕೊರತೆಯ ಕಾರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವದಂತಿಗಳು ಹರಡುತ್ತಿವೆ. ಆದರೆ ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ವಿರೋಧ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮಹಿಳೆಯರು ಈ ಯೋಜನೆಯ ಹಣವನ್ನು ತಮ್ಮ ದಿನನಿತ್ಯದ ಖರ್ಚುಗಳಿಗೆ ಅವಲಂಬಿಸಿಕೊಂಡಿರುವುದರಿಂದ, ಹಣದ ಇಳಿಕೆ ಅಥವಾ ವಿಳಂಬವು ಅವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವರು ಮೈಕ್ರೋ ಫೈನಾನ್ಸ್ ಸಾಲಗಳನ್ನು ಈ ಹಣದ ಭರವಸೆಯ ಮೇಲೆ ತೆಗೆದುಕೊಂಡಿರುವುದರಿಂದ, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸದ್ಯಕ್ಕೆ ಸರ್ಕಾರದ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಂತ್ರಿಕ ಕಾರಣಗಳಿಂದಾಗಿ ಹಣ ಬಿಡುಗಡೆ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಬಾಕಿ ಇರುವ ಕಂತುಗಳನ್ನು ಹಂತ ಹಂತವಾಗಿ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದೆ. ಆದರೂ, ಯೋಜನೆಯ ಭವಿಷ್ಯ ಮತ್ತು ಹಣದ ಪ್ರಮಾಣದ ಕುರಿತು ಸ್ಪಷ್ಟತೆ ನೀಡುವಂತೆ ಮಹಿಳೆಯರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.