ಇನ್ಮುಂದೆ EMI ಕಟ್ಟಿಲ್ಲ ಅಂತ ದಂಡ ಹಾಕೋ ಹಾಗಿಲ್ಲ! RBI ನಿಂದ ಹೊಸ ರೂಲ್ಸ್ ಜಾರಿ !!

ಇನ್ಮುಂದೆ EMI ಕಟ್ಟಿಲ್ಲ ಅಂತ ದಂಡ ಹಾಕೋ ಹಾಗಿಲ್ಲ! RBI  ನಿಂದ ಹೊಸ ರೂಲ್ಸ್ ಜಾರಿ !!

ಇವತ್ತಿನ ದಿನಗಳಲ್ಲಿ ಸಾಲ ಮಾಡುವುದು ಬಹಳ ಸಾಮಾನ್ಯವಾಗಿದೆ. ಮನೆ ನಿರ್ಮಾಣ, ಮದುವೆ, ಮಕ್ಕಳ ವಿದ್ಯಾಭ್ಯಾಸ ಹೀಗೆ ಬೋಧನೆಯ ಎಲ್ಲಾ ಹಂತಗಳಿಗೆ ಬ್ಯಾಂಕ್‌ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಲ ತಗೊಂಡ ಬಳಿಕ, ಪ್ರತಿ ತಿಂಗಳು EMI (ಮಾಸಿಕ ಕಂತು) ಪಾವತಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ಕೆಲವೊಮ್ಮೆ, ಉದ್ಯೋಗ ಕಳೆದುಕೊಳ್ಳುವುದು, ಬಿಸಿನೆಸ್‌ನಲ್ಲಿ ನಷ್ಟ ಉಂಟಾಗುವುದು ಅಥವಾ ಇನ್ನಿತರ ಅನಿರೀಕ್ಷಿತ ಸಮಸ್ಯೆಗಳ ಕಾರಣದಿಂದ EMI ಪಾವತಿಸಲು ಅಸಾಧ್ಯವಾಗಬಹುದು.

ಈ ಸಂದರ್ಭಗಳಲ್ಲಿ ಜನರಿಗೆ "ಜೈಲಿಗೆ ಹಾಕ್ತಾರಾ?" ಅಥವಾ "ಆಸ್ತಿ ಹರಾಜು ಮಾಡ್ತಾರಾ?" ಎಂಬ ಭಯ ಉಂಟಾಗುತ್ತೆ. ಆದರೆ ಈ ಬಗೆಯ ಆತಂಕಕ್ಕೆ ಕಾರಣವಿಲ್ಲ. EMI ಪಾವತಿಸದಿರುವುದರಿಂದ ಯಾರಿಗೂ ನೇರವಾಗಿ ಜೈಲು ಶಿಕ್ಷೆ ಇರಲ್ಲ. ಇದು ಅಪರಾಧವಲ್ಲ, ಹೀಗಾಗಿ ಕ್ರಿಮಿನಲ್ ಕೇಸ್ ಆಗುವುದಿಲ್ಲ. ಚೆಕ್ ಬೌನ್ಸ್ ಆಗಿದ್ರೆ ಮಾತ್ರ ಜೈಲು ಶಿಕ್ಷೆಯ ಸಾಧ್ಯತೆ ಇರುವುದರಿಂದ, EMI ಪಾವತಿಯ ವಿಷಯದಲ್ಲಿ ಹೆಚ್ಚು ಹೆದರಬಾರದದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಪ್ರಕಾರ, ಸಾಲದ EMI ಗಳನ್ನು ಪಾವತಿಸದವರಿಗೆ ಯಾರೂ ಕರೆ ಮಾಡಿ ಬೆದರಿಕೆ ಹಾಕುವಂತಿಲ್ಲ. ಇದು ಬಹಳ ಮುಖ್ಯವಾದ ಅಂಶ. ಹಿಂದೆಲ್ಲಾ ಸಾಲ ವಸೂಲಿಗಾರರು ರಾತ್ರಿ-ಹಗಲೆನ್ನದೆ ಕಾಲ್ ಮಾಡಿ, ಮನೆಗೆ ಬಂದು ಕಿರುಕುಳ ಕೊಡ್ತಾ ಇದ್ರು. ಆದ್ರೆ ಈಗ ಹಾಗಿಲ್ಲ

"ನಮ್ಮ ಆಸ್ತಿ ಹರಾಜಾಗ್ತದಾ?" ಎಂಬ ಪ್ರಶ್ನೆಯೂ ಜನರಲ್ಲಿ ಸಾಮಾನ್ಯ. ಆದರೆ ಬ್ಯಾಂಕುಗಳು ತಕ್ಷಣವೇ ಆಸ್ತಿ ಹರಾಜು ಮಾಡುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಸಾಲ ವಸೂಲಿಗಾರರು ಸಾಲಗಾರರನ್ನು ಬೆದರಿಸುವಂತಿಲ್ಲ. ಹಿಂದಿನಲ್ಲಿದ್ದಂತೆ ರಾತ್ರಿ-ಹಗಲು ಕಾಲ್ ಮಾಡಿ, ಮನೆಗೆ ಬಂದು ಕಿರುಕುಳ ನೀಡುವ ಪದ್ಧತಿ ನಿಷಿದ್ಧವಾಗಿದೆ.

ನೀವು ಎರಡು ಅಥವಾ ಮೂರು EMI ಪಾವತಿಸದಿದ್ದರೆ, ಮೊದಲಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಮಗೆ ನೋಟಿಸ್ ಕಳುಹಿಸಬೇಕು. ವಸೂಲಿ ಮಾಡುವವರು ಗೌರವಪೂರ್ವಕವಾಗಿ ವರ್ತಿಸಬೇಕು. EMI ಪಾವತಿ ವಿಫಲವಾದರೆ, ನಿಮ್ಮ ಅಡಮಾನವಿಟ್ಟ ಆಸ್ತಿಯನ್ನು ಹರಾಜು ಮಾಡುವ ಮೊದಲು ನಿಮ್ಮನ್ನು ಸಂಪರ್ಕಿಸಿ, ನಿಮ್ಮ ಒಪ್ಪಿಗೆ ಪಡೆದು ಪ್ರಕ್ರಿಯೆ ಮುಂದುವರಿಸಬೇಕು.

ಹೆದರಬೇಡಿ—ಸಾಲ ಪಾವತಿಯಲ್ಲಿ ಅಡಚಣೆ ಬಂದರೂ, ಕಾನೂನು ನಿಮ್ಮ ಪರವಿದ್ದೇ ಇರುತ್ತದೆ.