ಆರ್‌ಬಿಐ ನಿಂದ ಬಂಗಾರ ಖರೀದಿಗೆ ಬ್ರೇಕ್ !! ಇನ್ಮುಂದೆ ಹತ್ತು ಗ್ರಾಂ ಗೆ ₹70,000ಕ್ಕೆ ಚಿನ್ನ ಸಿಗುತ್ತೆ ?

ಭಾರತದ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ ತೆಗೆದುಕೊಂಡಿರುವ ಚಿನ್ನ ಖರೀದಿಗೆ ಬ್ರೇಕ್ ಎಂಬ ನಿರ್ಧಾರ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ. ಜಗತ್ತಿನ ಅನೇಕ ಕೇಂದ್ರ ಬ್ಯಾಂಕುಗಳು—ಚೀನಾದಿಂದ ಪೋಲೆಂಡ್ ವರೆಗೆ—ಚಿನ್ನವನ್ನು ಭರದಿಂದ ಖರೀದಿಸುತ್ತಿರುವಾಗ, ಭಾರತ ಮಾತ್ರ ತನ್ನ ಚಿನ್ನದ ಖರೀದಿಗೆ ತಾತ್ಕಾಲಿಕ ವಿರಾಮ ನೀಡಿದೆ. 2025ರ ಹಣಕಾಸು ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ, ಆರ್ಬಿಐ ತನ್ನ ಚಿನ್ನದ ಮೀಸಲಿಗೆ ಯಾವುದೇ ಹೆಚ್ಚಳ ಮಾಡಿಲ್ಲ. ಕಳೆದ ಎರಡು ತಿಂಗಳಿಂದ ಒಂದು ಗ್ರಾಂ ಚಿನ್ನವೂ ಖರೀದಿಸದಿರುವುದು ಈ ನಿರ್ಧಾರವನ್ನು ಇನ್ನಷ್ಟು ಗಮನಾರ್ಹವಾಗಿಸುತ್ತದೆ.
ಈ ನಿರ್ಧಾನದ ಹಿಂದೆ ಇರುವ ಪ್ರಮುಖ ಕಾರಣವೆಂದರೆ ಚಿನ್ನದ ಬೆಲೆ ಇಳಿಯುವ ಮುನ್ಸೂಚನೆ. ಕಳೆದ ಐದು ವರ್ಷಗಳಲ್ಲಿ ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಯುದ್ಧಗಳ ಕಾರಣದಿಂದ ಚಿನ್ನದ ಬೆಲೆ ಶೇಕಡಾ 80ರಷ್ಟು ಏರಿಕೆಯಾಗಿದೆ. ಆದರೆ ಈಗ ಜಗತ್ತು ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನಲೆಯಲ್ಲಿ ಚಿನ್ನದ ಬೆಲೆ ಇಳಿಯುವ ನಿರೀಕ್ಷೆ ವ್ಯಕ್ತವಾಗಿದೆ. ಸಿಟಿ ಫಿಫ್ತ್ ರಿಸರ್ಚ್, ಮೋತಿಲಾಲ್ ಓಸ್ಕಾಲ್ ಸೆಕ್ಯೂರಿಟೀಸ್ ಮತ್ತು ಐಸಿಐಸಿಐ ಬ್ಯಾಂಕ್ ಮುಂತಾದ ಸಂಸ್ಥೆಗಳು ಚಿನ್ನದ ಬೆಲೆ ಔನ್ಸ್‌ಗೆ $3445ರಿಂದ ಇಳಿಯಲಿದೆ ಎಂದು ಭವಿಷ್ಯ ನುಡಿದಿವೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ನಿರೀಕ್ಷೆಯೂ ಈ ಇಳಿಕೆಗೆ ಕಾರಣವಾಗಬಹುದು.
ಇದರಿಂದಾಗಿ ಆರ್ಬಿಐ ತಾತ್ಕಾಲಿಕವಾಗಿ ಚಿನ್ನದ ಖರೀದಿಗೆ ಬ್ರೇಕ್ ಹಾಕಿದ್ದು, ಬೆಲೆ ಇಳಿದ ನಂತರ ಮತ್ತೆ ಖರೀದಿಗೆ ಮುಂದಾಗಬಹುದು ಎಂಬ ತಂತ್ರವನ್ನು ಅನುಸರಿಸುತ್ತಿದೆ. ಈ ತಾತ್ಕಾಲಿಕ ತಂತ್ರದ ಜೊತೆಗೆ, ಆರ್ಬಿಐ ದೀರ್ಘಕಾಲೀನ ತಂತ್ರವನ್ನೂ ರೂಪಿಸಿಕೊಂಡಿದೆ—ಅದು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಚಿನ್ನದ ಸಂಗ್ರಹವನ್ನು ಹೆಚ್ಚಿಸುವುದು. ಕಳೆದ ಐದು ವರ್ಷಗಳಲ್ಲಿ ಆರ್ಬಿಐ ತನ್ನ ಚಿನ್ನದ ಸಂಗ್ರಹವನ್ನು ಸುಮಾರು ಮೂರನೇ ಒಂದರಷ್ಟು ಹೆಚ್ಚಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನ ಹತ್ತು ಗ್ರಾಂ ಗೆ 70000 ಗೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ
ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಖರೀದಿಯಿಂದ ದೂರ ಉಳಿದು ಬೆಲೆ ಕುಸಿತಕ್ಕಾಗಿ ಕಾದು ಆಮೇಲೆ ಖರೀದಿ ಮಾಡುವುದು. ಈಗ ಆರ್ಬಿಐ ಇದನ್ನೇ ಮಾಡ್ತಾ ಇದೆ. ಇದರ ನಡುವೆಯೇ ಜಗತ್ತಿನಲ್ಲಿ ಡಾಲರ್ನ ಪ್ರಾಬಲ್ಯ ನಿಧಾನವಾಗಿ ಕಡಿಮೆ ಆಗ್ತಾ ಇದೆ. 2016 ರಲ್ಲಿ ಜಾಗತಿಕ ವಿದೇಶಿ ಮಿಸಲುಗಳಲ್ಲಿ ಡಾಲರ್ನ ಪಾಲು ಶೇಕಡ 65.4 ರಷ್ಟು ಇದ್ದರೆ 2024 ರಲ್ಲಿ ಅದು ಶೇಕಡ 57.8 ಕ್ಕೆ ಇಳಿದಿದೆ. ಚೀನಾದಂತಹ ದೇಶಗಳು ಅಮೆರಿಕದ ಸರ್ಕಾರಿ ಬಾಂಡ್ಗಳನ್ನ ಮಾರಾಟ ಮಾಡುತ್ತಿವೆ
ಇದಕ್ಕೆ ಪೂರಕವಾಗಿ, ಇಂಗ್ಲೆಂಡ್ನಲ್ಲಿ ಇರಿಸಿದ್ದ ಚಿನ್ನವನ್ನು ಭಾರತ ವಾಪಸ್ ತರಿಸಿಕೊಂಡು ದೇಶೀಯವಾಗಿ ಸಂಗ್ರಹಿಸುತ್ತಿದೆ. ರಷ್ಯಾ-ಉಕ್ರೈನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ವಿದೇಶಿ ಮೀಸಲುಗಳ ಮೇಲೆ ಹೇರಲಾದ ನಿರ್ಬಂಧಗಳು ಇತರ ರಾಷ್ಟ್ರಗಳಿಗೆ ಪಾಠವಾಗಿದ್ದು, ತಮ್ಮ ಆಸ್ತಿಗಳನ್ನು ದೇಶೀಯವಾಗಿ ಇರಿಸಿಕೊಳ್ಳುವ ಪ್ರವೃತ್ತಿಗೆ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಡಾಲರ್‌ನ ಪ್ರಾಬಲ್ಯವೂ ನಿಧಾನವಾಗಿ ಕುಸಿಯುತ್ತಿದೆ. 2016ರಲ್ಲಿ ಜಾಗತಿಕ ವಿದೇಶಿ ಮೀಸಲುಗಳಲ್ಲಿ ಡಾಲರ್‌ನ ಪಾಲು ಶೇಕಡಾ 65.4ರಷ್ಟಿದ್ದರೆ, 2024ರಲ್ಲಿ ಅದು ಶೇಕಡಾ 57.8ಕ್ಕೆ ಇಳಿದಿದೆ. ಚೀನಾದಂತಹ ದೇಶಗಳು ಅಮೆರಿಕದ ಸರ್ಕಾರಿ ಬಾಂಡ್‌ಗಳನ್ನು ಮಾರಾಟ ಮಾಡುತ್ತಿರುವಾಗ, ಭಾರತ ಮಾತ್ರ ಜಾಣ್ಮೆಯಿಂದ ತನ್ನ ಹೂಡಿಕೆಯನ್ನು ಸ್ಥಿರವಾಗಿ ನಿರ್ವಹಿಸುತ್ತಿದೆ—ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆ ಮುಂದುವರಿಸಿ, ಜೊತೆಗೆ ಚಿನ್ನದ ಸಂಗ್ರಹವನ್ನೂ ಹೆಚ್ಚಿಸುತ್ತಿದೆ.
ಪ್ರಸ್ತುತ, ಆರ್ಬಿಐ ಬಳಿ 876.18 ಮೆಟ್ರಿಕ್ ಟನ್ ಚಿನ್ನವಿದ್ದು, ಇದರ ಮೌಲ್ಯ ಸುಮಾರು $73.5 ಬಿಲಿಯನ್. ಜಗತ್ತಿನ ಟಾಪ್ 10 ಚಿನ್ನದ ಸಂಗ್ರಹದ ರಾಷ್ಟ್ರಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. ಅಮೆರಿಕ, ಜರ್ಮನಿ, ಇಟಲಿ, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಏಷ್ಯಾದಲ್ಲಿ ಚೀನಾ, ಭಾರತ ಮತ್ತು ಜಪಾನ್ ಪ್ರಮುಖ ಸ್ಥಾನ ಪಡೆದಿವೆ.
ಒಟ್ಟಿನಲ್ಲಿ, ಆರ್ಬಿಐ ತಾತ್ಕಾಲಿಕವಾಗಿ ಚಿನ್ನದ ಖರೀದಿಗೆ ಬ್ರೇಕ್ ಹಾಕಿದರೂ, ಇದು ದೀರ್ಘಕಾಲೀನ ತಂತ್ರದ ಭಾಗವಾಗಿದೆ. ಚಿನ್ನದ ಬೆಲೆ ಇಳಿದಾಗ ಖರೀದಿಸುವ ಮೂಲಕ ಹೆಚ್ಚು ಲಾಭ ಪಡೆಯುವ ಉದ್ದೇಶವಿದೆ. ಜಗತ್ತಿನ ಕೇಂದ್ರ ಬ್ಯಾಂಕುಗಳು ಡಾಲರ್‌ನಿಂದ ದೂರ ಸರಿದು ಚಿನ್ನದತ್ತ ಮುಖ ಮಾಡುತ್ತಿರುವ ಈ ಐತಿಹಾಸಿಕ ಕಾಲಘಟ್ಟದಲ್ಲಿ, ಭಾರತ ತನ್ನದೇ ಆದ ವಿಶಿಷ್ಟ ಧಾರಿಯನ್ನು ರೂಪಿಸಿಕೊಂಡಿದೆ.