ಮನೆಯಲ್ಲಿ 2000 ಇನ್ನು ನೋಟು ಇದ್ದರೆ ಏನು ಮಾಡಬೇಕು? ಆರ್‌ಬಿಐ ಹೊಸ ರೂಲ್ಸ್ !!

ಮನೆಯಲ್ಲಿ 2000  ಇನ್ನು ನೋಟು ಇದ್ದರೆ ಏನು ಮಾಡಬೇಕು? ಆರ್‌ಬಿಐ ಹೊಸ ರೂಲ್ಸ್ !!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2023ರ ಮೇ 19ರಂದು ₹2000 ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡಿತ್ತು. ಈ ನೋಟುಗಳು ಇನ್ನೂ ಕಾನೂನುಬದ್ಧ (legal tender) ಆಗಿದ್ದರೂ, ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಲು ಅವಕಾಶ ಇಲ್ಲ. ನೀವು ಇನ್ನು ಮನೆಗೆಲ್ಲಿಯೂ ₹2000 ನೋಟುಗಳನ್ನು ಹೊಂದಿದ್ದರೆ, ಅವುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

₹2000 ನೋಟುಗಳನ್ನು 2016ರ ನವೆಂಬರ್‌ನಲ್ಲಿ ಡಿಮಾನಿಟೈಜೇಶನ್ ನಂತರ ತಾತ್ಕಾಲಿಕವಾಗಿ ಪರಿಚಯಿಸಲಾಯಿತು. ಆದರೆ 2018–19ರಿಂದ ಮುದ್ರಣ ನಿಲ್ಲಿಸಲಾಯಿತು. ಆರ್‌ಬಿಐ ಹೇಳುವಂತೆ, ಈ ನೋಟುಗಳ ಬಳಕೆ ಕಡಿಮೆಯಾಗಿದೆ ಮತ್ತು ಅವು ಹಳೆಯದಾಗುತ್ತಿವೆ. ಈ ನೋಟುಗಳನ್ನು ಹಿಂತೆಗೆದುಕೊಳ್ಳುವುದು 'ಕ್ಲೀನ್ ನೋಟ್ ಪಾಲಿಸಿ'ಯ ಭಾಗವಾಗಿದೆ.

2025ರ ಜುಲೈ 31ರ ತನಕ ಸಾರ್ವಜನಿಕರ ಬಳಿ ₹6,017 ಕೋಟಿ ಮೌಲ್ಯದ ₹2000 ನೋಟುಗಳು ಉಳಿದಿವೆ. ಇದು ಒಟ್ಟು ಮುದ್ರಿತ ನೋಟುಗಳ 98.31% ಹಿಂದಿರುಗಿದಿರುವುದನ್ನು ಸೂಚಿಸುತ್ತದೆ. ಬ್ಯಾಂಕ್‌ಗಳಲ್ಲಿ ನೇರವಾಗಿ ವಿನಿಮಯ ಮಾಡುವ ಅವಕಾಶ 2023ರ ಅಕ್ಟೋಬರ್ 9ರಿಂದ ಸ್ಥಗಿತಗೊಂಡಿದೆ. ಆದರೆ ಆರ್‌ಬಿಐಯ 19 ಶಾಖೆಗಳಲ್ಲಿ ಈ ನೋಟುಗಳನ್ನು ಇನ್ನೂ ವಿನಿಮಯ ಮಾಡಬಹುದು.

ನೀವು ಬೆಂಗಳೂರು, ಮೈಸೂರು, ಹೈದರಾಬಾದ್ ಅಥವಾ ಇತರ ಆರ್‌ಬಿಐ ಶಾಖೆಗಳ ಬಳಿ ಇದ್ದರೆ, ನೇರವಾಗಿ ಭೇಟಿ ನೀಡಿ ₹20,000 ವರೆಗೆ ನೋಟುಗಳನ್ನು ವಿನಿಮಯ ಮಾಡಬಹುದು. ಗುರುತಿನ ದಾಖಲೆ (ಆಧಾರ್/ಪ್ಯಾನ್) ಅಗತ್ಯವಿದೆ. ನೀವು RBI ಶಾಖೆ ಬಳಿ ಇಲ್ಲದಿದ್ದರೆ, ಭಾರತೀಯ ಅಂಚೆ ಮೂಲಕ ನೋಟುಗಳನ್ನು ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಬಹುದು.

₹2000 ನೋಟುಗಳು ಕಾನೂನುಬದ್ಧವಾಗಿದ್ದರೂ, ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವುದು ತಪ್ಪಾಗಿದೆ. ಹೆಚ್ಚಿನ ಮೊತ್ತದ ನೋಟುಗಳನ್ನು ಜಮಾ ಮಾಡಿದರೆ ಆದಾಯ ತೆರಿಗೆ ಇಲಾಖೆಯ ಗಮನ ಸೆಳೆಯಬಹುದು. ಆದ್ದರಿಂದ, ನೋಟುಗಳನ್ನು ಶೀಘ್ರದಲ್ಲೇ ವಿನಿಮಯ ಮಾಡಿಕೊಳ್ಳುವುದು ಉತ್ತಮ. ವಿಳಂಬ ಮಾಡಿದರೆ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು.