ಇನ್ಮುಂದೆ ಇಂತಹವರ BPL ಕಾರ್ಡ್ ರದ್ದು !! ಸರ್ಕಾರ ಆದೇಶ

ಇನ್ಮುಂದೆ ಇಂತಹವರ BPL ಕಾರ್ಡ್ ರದ್ದು !! ಸರ್ಕಾರ ಆದೇಶ

ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳ ಮೂಲಕ ಸರ್ಕಾರದಿಂದ ಉಚಿತವಾಗಿ ಪಡಿತರ ಧಾನ್ಯಗಳನ್ನ ಪಡೆದುಕೊಳ್ಳುತ್ತಿರುವವರಿಗೆ ಒಂದು ಶಾಕಿಂಗ್ ಸುದ್ದಿಯನ್ನ ನೀಡಿದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ನೀಡಲಾಗುವ ಉಚಿತ ಪಡಿತರ ಯೋಜನೆಯ ಲಾಭವನ್ನ ಸಾಕಷ್ಟು ಜನರು ದುರುಪಯೋಗವನ್ನ ಮಾಡಿಕೊಳ್ಳುತ್ತಿದ್ದಾರೆ ಹೌದು ಸ್ನೇಹಿತರೆ ಸಾಕಷ್ಟು ಕುಟುಂಬದವರು ಸರ್ಕಾರದಿಂದ ಉಚಿತವಾಗಿ ಪಡಿತರ ಧಾನ್ಯವನ್ನ ಪಡೆದುಕೊಂಡು ಅದನ್ನ ಹೆಚ್ಚಿನ ಹಣಕ್ಕೆ ಮಾರಾಟವನ್ನ ಮಾಡುತ್ತಿದ್ದಾರೆ.

 ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತವಾಗಿ ಅಕ್ಕಿಯನ್ನ ಪಡೆದುಕೊಂಡು ಅದನ್ನ ಹೆಚ್ಚಿನ ಬೆಲೆಗೆ ಸಾಕಷ್ಟು ಜನರು ಮಾರಾಟವನ್ನ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಯೋಜನೆಯನ್ನ ಜನರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಸದ್ಯ ಈ ಕುರಿತಂತೆ ಆದೇಶವನ್ನು ಹೊರಡಿಸಿರುವ ರಾಜ್ಯ ಸರ್ಕಾರ ಯಾವ ಕುಟುಂಬದವರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಉಚಿತ ಅಕ್ಕಿಯನ್ನ ಮಾರಾಟ ಮಾಡುತ್ತಾರೋ ಅಂತಹ ಕುಟುಂಬದವರ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗುತ್ತದೆ ಅಂತ ಆದೇಶವನ್ನು ಹೊರಡಿಸಿದೆ.

ಅಷ್ಟೇ ಮಾತ್ರವಲ್ಲದೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸುತ್ತೋಲೆ ಪತ್ರವನ್ನ ಅಂಟಿಸಲಾಗಿದೆ. ಇನ್ನು ಮುಂದೆ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನ ಹೊಂದಿರುವವರು ಹಣದ ಆಸೆಗೆ ಪಡಿತರ ಧಾನ್ಯಗಳನ್ನ ಮಾರಾಟ ಮಾಡಿದರೆ ಅವರ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಗ್ಗೂಡಿಕೊಂಡು ಹಸಿದವರಿಗೆ ಅನ್ನ ಸಿಗಬೇಕು ಅನ್ನುವ ಕಾರಣಕ್ಕೆ ಉಚಿತವಾಗಿ ಪಡಿತರ ಧಾನ್ಯಗಳನ್ನ ನೀಡುತ್ತಿದೆ.

ಆದರೆ ಹೊಟ್ಟೆ ತುಂಬಿದವರು ಆ ಧಾನ್ಯಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನ ಹೊಂದಿರುವವರು ಪಡಿತರ ಧಾನ್ಯಗಳನ್ನ ಮಾರಾಟ ಮಾಡುತ್ತಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಅಧಿಕಾರಿಗಳನ್ನ ಕೂಡ ನೇಮಕ ಮಾಡಲಾಗಿದೆ. ಯಾರು ಉಚಿತವಾಗಿ ಸಿಗುವ ಪಡಿತರ ಧಾನ್ಯಗಳನ್ನ ಮಾರಾಟ ಮಾಡುತ್ತಾರೋ ಅಂತವರ ಕಾಡುಗಳನ್ನ ರದ್ದು ಮಾಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ.