ಮಜಾ ಟಾಕೀಸ್ ದಿಢೀರ್ ಮುಕ್ತಾಯ !! ಶೋ ಬಂದಾಗಲು ಅಸಲಿ ಕಾರಣ ಇಲ್ಲಿದೆ !!

ಸೃಜನ್ ಲೋಕೇಶ್ ನೇತೃತ್ವದ ‘ಮಜಾ ಟಾಕೀಸ್’ ಇದೇ ವಾರಾಂತ್ಯದಲ್ಲಿ ಮುಕ್ತಾಯವಾಗಲಿದೆ. ಇದೇ ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿವೆ.‘ಮಜಾ ಟಾಕೀಸ್’ ಗ್ರ್ಯಾಂಡ್ ಫಿನಾಲೆ ಇದೇ ವೀಕೆಂಡ್ನಲ್ಲಿ ಪ್ರಸಾರವಾಗಲಿದೆ. ಮೇ 31 ಶನಿವಾರ ಹಾಗೂ ಜೂನ್ 1 ಭಾನುವಾರ ರಾತ್ರಿ 9 ಗಂಟೆಗೆ ‘ಮಜಾ ಟಾಕೀಸ್’ ಗ್ರ್ಯಾಂಡ್ ಫಿನಾಲೆ ಟೆಲಿಕಾಸ್ಟ್ ಆಗಲಿದೆ.ಈ ಬಾರಿ ‘ಮಜಾ ಟಾಕೀಸ್’ ಕಾರ್ಯಕ್ರಮ ಬಹುಬೇಗ ಎಂಡ್ ಆಗುತ್ತಿದೆ. ‘ಮಜಾ ಟಾಕೀಸ್’ ಬೇಗ ಮುಕ್ತಾಯವಾಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನ ಕಲರ್ಸ್ ಕನ್ನಡ ವಾಹಿನಿಯಾಗಲಿ, ‘ಮಜಾ ಟಾಕೀಸ್’ ತಂಡವಾಗಲಿ ಬಾಯ್ಬಿಟ್ಟಿಲ್ಲ.
ವಾರಾಂತ್ಯ ಬಂದರೆ ಸಾಕು.. ಸೃಜನ್ ಲೋಕೇಶ್ ಹಾಗೂ ಯೋಗರಾಜ್ ಭಟ್ ‘ಮಜಾ ಟಾಕೀಸ್’ ಮೂಲಕ ಕನ್ನಡಿಗರಿಗೆ ಕಾಮಿಡಿ ಇಂಜೆಕ್ಷನ್ ಕೊಡುತ್ತಿದ್ದರು. ಆದ್ರೀಗ, ‘ಮಜಾ ಟಾಕೀಸ್’ ಎಂಡ್ ಆಗುತ್ತಿದೆ. ‘ಮಜಾ ಟಾಕೀಸ್’ಗೆ ಇದೇ ವಾರಾಂತ್ಯ ಶುಭಂ ಬೋರ್ಡ್ ಬೀಳಲಿದೆ.
ಆದರೆ, ಈ ಬಾರಿ ನಿರೀಕ್ಷಿಸಿದಷ್ಟು ಟಿಆರ್ಪಿ ‘ಮಜಾ ಟಾಕೀಸ್’ ಶೋಗೆ ಬಂದಿಲ್ಲ. ಕಡಿಮೆ ಟಿಆರ್ಪಿ ಬರುತ್ತಿರುವ ಕಾರಣ ‘ಮಜಾ ಟಾಕೀಸ್’ ಶೋನ ಎಂಡ್ ಮಾಡಲಾಗುತ್ತಿದ್ಯಾ? ಗೊತ್ತಿಲ್ಲ!ಮುಂಚೆ ‘ಮಜಾ ಟಾಕೀಸ್’ನಲ್ಲಿ ಅಪರ್ಣಾ, ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ, ತರಂಗ ವಿಶ್ವ, ರೆಮೋ ಮುಂತಾದವರು ಇದ್ದರು. ಆದರೆ, ಈ ಬಾರಿ ಕುರಿ ಪ್ರತಾಪ್ ಜೊತೆಗೆ ತುಕಾಲಿ ಸಂತು, ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ರಾಘವೇಂದ್ರ ಸೇರಿದಂತೆ ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಹಾಸ್ಯ ಕಲಾವಿದರ ದಂಡೇ ಇದೆ. ಇತ್ತೀಚೆಗಷ್ಟೇ ‘ಮಜಾ ಟಾಕೀಸ್’ ಶೋಗೆ ಮುತ್ತು ಮಣಿ ಖ್ಯಾತಿಯ ತರಂಗ ವಿಶ್ವ ಗುಡ್ ಬೈ ಹೇಳಿದರು. ಇದೀಗ ‘ಮಜಾ ಟಾಕೀಸ್’ ಕ್ಲೋಸ್ ಆಗುತ್ತಿದೆ. ಇನ್ನೊಂದು ಮುಖ್ಯ ಕಾರಣ ಇಂದ್ರಜಿತ್ ಲಂಕೇಶ್ ಅವರನ್ನು ಕೈ ಬಿಟ್ಟದ್ದು ದೊಡ್ಡ ಹೊಡೆತ ಅಂತ ಹೇಳಬಹುದು ಮಜಾ ಟಾಕೀಸ್’ ಶೋನಲ್ಲಿ ಈ ವಾರ ದೊಡ್ಡಣ್ಣ, ಚಿಕ್ಕಣ್ಣ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ಪ್ರೇಕ್ಷಕರನ್ನು ರಂಜಿಸೋ ಕೆಲಸ ಮಾಡಲಿದ್ದಾರೆ. ಕೆಲವು ಫನ್ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಈ ಪೋಸ್ಟರ್ಗೆ ‘ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಅಂದರೆ ಈ ಶೋ ಪೂರ್ಣಗೊಳ್ಳೋದು ಖಚಿತವಾಗಿದೆ.
ನಿಮ್ಮ ಪ್ರಕಾರ ಈ ಶೋ ಮುಗಿಸಿದ್ದು ಸರಿಯಾ ಅಥವಾ ಮುಂದುವರೆಸ ಬೇಕಾಗಿತ್ತಾ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ