ಬಿಗ್‌ಬಾಸ್ 11ರ ರನ್ನರ್ ಅಪ್ ತ್ರಿವಿಕ್ರಮ್‌ಗೆ ಸಿಕ್ಕ ಕ್ಯಾಶ್ ಎಷ್ಟು ?

ಬಿಗ್‌ಬಾಸ್ ಸೀಸನ್ 11 ಶುರುವಾದಾಗ ತ್ರಿವಿಕ್ರಮ್ ನೋಡಿದ ಪ್ರೇಕ್ಷಕರು ಪಕ್ಕಾ ಇವ್ರು ಫೈನಲ್‌ಗೆ ಬರ್ತಾರೆ ಅಂತ ಎಲ್ಲರೂ ಆಗಲೇ ಡಿಸೈಡ್ ಮಾಡಿದ್ದರು. ಅದರಂತೆ ತ್ರಿವಿಕ್ರಮ್ ಫೈನಲ್‌ಗೆ ಬಂದು ಗೆಲ್ಲೋದ್ರಲ್ಲಿ ಜಸ್ಟ್ ಮಿಸ್ ಆಗಿದ್ದಾರೆ. 21ನೇ ದಿನಕ್ಕೆ ಬಿಗ್‌ಬಾಸ್ ಮನೆಗೆ ಬಂದ ಹನುಮಂತು ಗೆದ್ದು ಬೀಗಿದ್ದಾರೆ.
ಹನುಮಂತುಗಿಂತ ತ್ರಿವಿಕ್ರಮ್ ಯಾವುದರಲ್ಲಿ ಕಡಿಮೆಯಾದ್ರು ಅಂತ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕೆಲವರು ತ್ರಿವಿಕ್ರಮ್ ಟಾಸ್ಕ್‌ನಲ್ಲಿ ಸೂಪರ್ ಆಗಿಯೇ ಆಡುತ್ತಿದ್ದರು. ಆದರೆ ಎಂಟರ್‌ಟೈನ್ಮೆಂಟ್‌ನಲ್ಲಿ ಸ್ವಲ್ಒ ಕಡಿಮೆಯಾಯ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇದರ ನಡುವೆ ರನ್ನರ್ ಅಪ್ ತ್ರಿವಿಕ್ರಮ್‌ಗೆ ಸಿಕ್ಕ ಹಣವೆಷ್ಟು ಅಂತ ಎಲ್ಲರೂ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ತ್ರಿವಿಕ್ರಮ್ ವಿನ್ನರ್ ಆಗಬಹುದು ಎಂಬ ನಿರೀಕ್ಷೆ ಇತ್ತು.ರನ್ನರ್ ಅಪ್ ಆದ ತ್ರಿವಿಕ್ರಮ್‌ಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ.
ಇದಲ್ಲದೆ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಉಳಿದುಕೊಂಡಿದ್ದಕ್ಕೆ ವಾರಕ್ಕೆ ಎಷ್ಟು ಮಾತನಾಡಿತ್ತೋ ಅಷ್ಟು ಹಣವನ್ನು ಪಡೆಯಲಿದ್ದಾರೆ . ಇದು ಪ್ರೈಜ್ ಮನಿ ಹೊರತಾಗಿ ಸಿಗುವಂತದ್ದು
ತುಮಕೂರಿನ ಗುಬ್ಬಿಯಲ್ಲಿ ಹುಟ್ಟಿ ಬೆಳೆದವರು ತ್ರಿವಿಕ್ರಮ್. ಬೆಂಗಳೂರಿಗೆ ಬಂದು ತಾಯಿ ಜೊತೆ ವಾಸವಾಗಿದ್ದಾರೆ. ಅವರ ತಂದೆ ಲಾರಿ ಡ್ರೈವರ್ ಆಗಿದ್ದರು. ಅಪಘಾತದಲ್ಲಿ ಅವರ ತಂದೆಯನ್ನು ಕಳೆದುಕೊಂಡಿದ್ದರು ತ್ರಿವಿಕ್ರಮ್. ಈ ಬಗ್ಗೆ ಬಿಗ್‌ಬಾಸ್ ಮನೆಯಲ್ಲೂ ಹೇಳಿಕೊಂಡಿದ್ದರು.