ಎಂಪೈರ್ ಹೋಟೆಲ್ ಕಬಾಬ್ ತಿಂತಿರಾ? ಆಹಾರ ಇಲಾಖೆಯಿಂದ ಶಾಕಿಂಗ್ ವರದಿ!!

ಬೆಂಗಳೂರು: ಮಾಂಸಾಹಾರ ಪ್ರಿಯರಿಗೆ ಶಾಕ್ ನೀಡುವ ವರದಿ ಹೊರಬಿದ್ದಿದೆ. ನಗರದ ಪ್ರಸಿದ್ಧ ಎಂಪೈರ್ ಹೋಟೆಲ್‌ಗಳಲ್ಲಿ ತಯಾರಾಗುವ ಚಿಕನ್ ಕಬಾಬ್ ಸೇವನೆಗೆ ಯೋಗ್ಯವಲ್ಲ ಎಂಬ ಆತಂಕಕಾರಿ ಮಾಹಿತಿ ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
ಕೃತಕ ಬಣ್ಣ ಬಳಕೆ ಪತ್ತೆ
ಹೆಬ್ಬಾಳ, ಶಿವಾಜಿನಗರ, ಬಸವನಗುಡಿ, ಮಹದೇವಪುರ, ಆನಂದರಾವ್ ಸರ್ಕಲ್ ಮತ್ತು ಬೊಮ್ಮನಹಳ್ಳಿಯ ಎಂಪೈರ್ ಶಾಖೆಗಳಲ್ಲಿ ತಯಾರಾಗುವ ಕಬಾಬ್‌ಗಳಲ್ಲಿ ಸಿಂಥೆಟಿಕ್ ಫುಡ್ ಕಲರ್ ಬಳಕೆಯು ಪತ್ತೆಯಾಗಿದೆ. ಲ್ಯಾಬ್ ಪರೀಕ್ಷೆಯಲ್ಲಿ ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುವುದು ದೃಢಪಟ್ಟಿದೆ.
ಆಹಾರ ಇಲಾಖೆಯ ತಪಾಸಣೆ
ಆಹಾರ ಇಲಾಖೆ ಈ ಶಾಖೆಗಳಿಂದ ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಒಳಪಡಿಸಿತು. ಪರೀಕ್ಷೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದ ಸೇವನೆಗೆ ಯೋಗ್ಯವಲ್ಲ ಎಂಬ ಸ್ಪೋಟಕ ಮಾಹಿತಿ ಹೊರಬಂದಿದೆ. ಈ ವರದಿ ಮಾಂಸಾಹಾರ ಸೇವಕರಲ್ಲಿ ಆತಂಕ ಉಂಟುಮಾಡಿದೆ. ಸಾರ್ವಜನಿಕರಿಗೆ ಎಚ್ಚರಿಕೆ
ಈ ವರದಿಯ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಬಾಬ್ ಸೇವಿಸುವಾಗ ಜಾಗರೂಕರಾಗಬೇಕೆಂದು ಸಲಹೆ ನೀಡಿದೆ. ಆಹಾರ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ತಪಾಸಣೆಗಳು ನಡೆಯಲಿವೆ ಎಂದು ಇಲಾಖೆ ತಿಳಿಸಿದೆ.