ಯಾರಿಗೂ ಕಾಣಲ್ಲ ಅಂದ್ಕೊಂಡು ಬಸ್‌ಸ್ಟ್ಯಾಂಡ್‌ನಲ್ಲೇ ಅದನ್ನು ಶುರು ಹಚ್ಕೊಂಡ ಪ್ರೇಮಿಗಳು !! ಆದರೆ ಆಗಿದ್ದೆ ಬೇರೆ !

ಯಾರಿಗೂ ಕಾಣಲ್ಲ ಅಂದ್ಕೊಂಡು ಬಸ್‌ಸ್ಟ್ಯಾಂಡ್‌ನಲ್ಲೇ  ಅದನ್ನು ಶುರು ಹಚ್ಕೊಂಡ ಪ್ರೇಮಿಗಳು !!  ಆದರೆ ಆಗಿದ್ದೆ ಬೇರೆ !

ಸಮಾಜದಲ್ಲಿ ವ್ಯಕ್ತಿಗಳ ನಡವಳಿಕೆ ಮತ್ತು ಖಾಸಗಿತನದ ಬಗ್ಗೆ ಚರ್ಚೆ ಹುಟ್ಟುಹಾಕುವಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಹಗಲು ಹೊತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಪ್ರೇಮದಾಟದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳು ಹೇಗೆ ವರ್ತಿಸಬೇಕು ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ.

ಸೋಶಿಯಲ್ ಮೀಡಿಯಾ ಬಂದ ನಂತರ, ವ್ಯಕ್ತಿಯ ಖಾಸಗಿತನ ಎಂಬುದು ಒಂದು ಹಾಸ್ಯವಿಷಯವಾಗಿ ಪರಿಣಮಿಸಿದೆ. ಮೊದಿನ ಕಾಲದಲ್ಲಿ ಪಾರ್ಕ್‌ಗಳು, ಸಿನಿಮಾ ಥಿಯೇಟರ್‌ಗಳು ಮುಂತಾದ ಸ್ಥಳಗಳಲ್ಲಿ ಪ್ರೇಮಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರೂ, ಅದು ಕೆಲವೇ ಜನರಿಗೆ ಗೊತ್ತಾಗುತ್ತಿತ್ತು. ಆದರೆ ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ, ಯಾವುದೇ ಘಟನೆ ಕ್ಷಣಮಾತ್ರದಲ್ಲಿ ಜಗತ್ತಿಗೆ ತಿಳಿಯುವಂತಾಗಿದೆ.

ಇದಕ್ಕೆ ಉದಾಹರಣೆಯಾಗಿ, ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋವನ್ನು ಉಲ್ಲೇಖಿಸಬಹುದು. ಈ ವಿಡಿಯೋ ಯಾವ ರಾಜ್ಯದದು, ಯಾವ ಸಮಯದದು ಎಂಬ ಮಾಹಿತಿ ಸ್ಪಷ್ಟವಿಲ್ಲ. ಆದರೆ, ವಿಡಿಯೋದಲ್ಲಿ ಯುವ ಜೋಡಿ ಬಸ್‌ಸ್ಟ್ಯಾಂಡ್‌ನಲ್ಲಿ ನೇರವಾಗಿ ಪ್ರೇಮದಾಟದಲ್ಲಿ ತೊಡಗಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾದವು. ಬಿಳಿ ಬಣ್ಣದ ಮಲಯಾಳಿ ಸೀರೆಯುಟ್ಟು ಬಂದ ಯುವತಿಯನ್ನು ಹುಡುಗ ಚುಂಬಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ.

ಆರಂಭದಲ್ಲಿ ಯುವತಿ ಸ್ವಲ್ಪ ಪ್ರತಿರೋಧ ತೋರಿಸಿದರೂ, ನಂತರ ತಾನೂ ಪ್ರೇಮದಾಟದಲ್ಲಿ ತೊಡಗುತ್ತಾಳೆ. ಈ ಜೋಡಿಗೆ ಯಾರಾದರೂ ನೋಡಬಹುದು ಎಂಬ ಭಯವೇ ಇಲ್ಲದಂತೆ ಕಾಣುತ್ತದೆ. ಕೆಲ ಕ್ಷಣಗಳ ಕಾಲ ಅವರು ಬಸ್‌ಸ್ಟ್ಯಾಂಡ್‌ನಲ್ಲಿಯೇ ಕಿಸ್‌ ಮಾಡಿಕೊಳ್ಳುತ್ತಾ ಚಕ್ಕಂದವಾಡುತ್ತಾರೆ. ಈ ಸಮಯದಲ್ಲಿ ಅಲ್ಲಿದ್ದ ಜನರು ತಮ್ಮದೇ ಕೆಲಸದಲ್ಲಿ ತೊಡಗಿದ್ದರೂ, ಈ ದೃಶ್ಯಗಳು ಒಬ್ಬ ವ್ಯಕ್ತಿಯ ಕ್ಯಾಮೆರಾದಲ್ಲಿ ಸೆರೆಯಾಗಿ, ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಹರಡಿದವು.
ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು, 'ಈಗಿನ ಜನರೇಷನ್‌ಗೆ ಏನಾಗಿದೆ' ಎಂದು ಪ್ರಶ್ನೆ ಮಾಡಿದ್ದಾರೆ. 'ಇವರಿಗೆ ಪ್ರೀತಿ ಮಾಡಲು ಜಾಗವೇ ಸಿಗದಂತಾಗಿಬಿಟ್ಟಿದೆ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಸಾರ್ವಜನಿಕ ಸ್ಥಳದಲ್ಲಿ ಇಂಥ ಕೆಲಸವನ್ನು ಮಾಡುವುದು ಸರಿಯಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ವಾತಾವರಣವು ತುಂಬಾ ಕೆಟ್ಟದಾಗುತ್ತಿದೆ' ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ನಡವಳಿಕೆಯ ಮಿತಿಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, ಖಾಸಗಿಯ ಮತ್ತು ಸಾರ್ವಜನಿಕ ಜೀವನದ ಗಡಿಗಳನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ.