ಹಕ್ಕಿ ರೋಗ ಯಾವ ರೀತಿ ಬರುತ್ತೆ ಗೊತ್ತ ..! ಚಿಕನ್ ಹೀಗೆ ಮಾಡಿ ತಿನ್ನಿ ಇಲ್ಲಾ ಅಂದ್ರೆ...?

Updated: Friday, January 15, 2021, 14:25 [IST]

ನಮ್ಮಲ್ಲಿ ಸಾಕಷ್ಟು ಮಂದಿಗೆ ಚಿಕನ್ ಅಂದರೆ ಪಂಚಪ್ರಾಣ. ಆದರೆ ಚಿಕನ್ ಬಗ್ಗೆ ತಿಳಿಯಲೇಬೇಕಾದ ಮಾಹಿತಿ  ಏನು ಅಂತಾ ತಿಳಿಯುವುದಕ್ಕಾಗಿ ಸಂಪೂರ್ಣವಾಗಿ ನಾವು ತಿಳಿಸುವ ಈ ಕ್ರಮವನ್ನು ತಪ್ಪದೆ ಪಾಲಿಸಿ.

ಇದರಿಂದಾಗಿ ಚಿಕನ್ ನಿಂದ ಉಂಟಾಗುವಂತಹ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳಬಹುದು. ಚಿಕನ್ ಬಗ್ಗೆ ಸಾಕಷ್ಟು ವದಂತಿಗಳು ನಾವು ಇದೀಗ ಕೇಳುತ್ತಲೇ ಇದ್ದೇವೆ ಆದರೂ ಕೂಡ ಚಿಕನ್ ಪ್ರಿಯರು ಚಿಕನ್ ತಿನ್ನುವುದನ್ನು ಬಿಡುವುದಿಲ್ಲ ಹಾಗಾಗಿ ನಾವು ಇದಕ್ಕಾಗಿ ಒಂದೊಳ್ಳೆ ಉತ್ತಮ ಕ್ರಮವನ್ನು ಪಾಲಿಸಬಹುದು. ಇಂದಿನ ವಾತಾವರಣಕ್ಕೆ ತಕ್ಕಂತೆ ಯಾವ ಬಗೆಯಲ್ಲಿ ಚಿಕನ್ ಅನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎಂಬುದನ್ನು ತಿಳಿಯಿರಿ.

  

Advertisement

ಚಿಕನ್ ಅಂದರೆ ಇದರಲ್ಲಿ ವೈರಸ್ ಬ್ಯಾಕ್ಟೀರಿಯಾ ಇದ್ದೇ ಇರುತ್ತದೆ ಹಾಗೂ ಚಿಕನ್ ತಿನ್ನುವಾಗ ಅದನ್ನು ಸರಿಯಾಗಿ ಬೇಯಿಸದೆ ತಿನ್ನದೇ ಇದ್ದಾಗ ನಮಗೆ ಅದರಿಂದ ಅನಾರೋಗ್ಯ ಸಮಸ್ಯೆ ಉಂಟಾಗಬಹುದು. ಆದಕಾರಣ ಚಿಕನ್ ಪ್ರಿಯರು ಚಿಕನ್ ತಿನ್ನುವಾಗ ನೆನಪಿಟ್ಟುಕೊಳ್ಳಿ, ಚಿಕನ್ ಅನ್ನು ಸರಿಯಾಗಿ ಬೇಯಿಸಿ ತಿನ್ನುವುದು ಅವಶ್ಯಕವಾಗಿ ಇರುತ್ತದೆ. ಇಲ್ಲವಾದಲ್ಲಿ ನಾನಾ ತರಹದ ಅನಾರೋಗ್ಯ ಸಮಸ್ಯೆಗಳಿಂದ ಮುಂದಿನ ದಿವಸಗಳಲ್ಲಿ ನೀವು ಬಳಲ ಬೇಕಾಗುತ್ತದೆ.

ಓವನ್ ಚಿಕನ್ :
ಹೌದು ಚಿಕನ್ ನಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು ಅದರಲ್ಲಿ ಓವನ್ ಚಿಕನ್ ಅನ್ನು ಬೇಯಿಸುವುದಕ್ಕೆ ಈ ಕ್ರಮವನ್ನ ಪಾಲಿಸುತ್ತಾರೆ ಈ ಓವನ್ ನಲ್ಲಿ ಚಿಕನ್ ಸುಮಾರು 170 ಡಿಗ್ರಿ ಅಲ್ಲಿ ಬೇಯುತ್ತದೆ ಆದರೆ ತಜ್ಞರು ಹೇಳುವ ಪ್ರಕಾರ ಚಿಕನ್ ಅನ್ನು ಓವನ್ ನಲ್ಲಿ ಬೇಯಿಸುವಾಗ ಅದರ ಮೇಲ್ಭಾಗ ಮಾತ್ರ ಚೆನ್ನಾಗಿ ಬೇಯುತ್ತದೆ. ಆದಕಾರಣ ಚಿಕನ್ ಮೇಲ್ಭಾಗ ಬೇಯುವುದರಿಂದ ಒಳಭಾಗದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯ ನಾಶವಾಗಿರುವುದಿಲ್ಲ. ಹೌದು ಓವನ್ ಚಿಕನ್ ಕೂಡ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಪರಿಣಿತರು ತಿಳಿಸುತ್ತಿದ್ದಾರೆ.

ತಂದೂರಿ ಚಿಕನ್ :
ಈ ಖಾದ್ಯವನ್ನು ತಯಾರಿಸುವ ಚಿಕನ್ ಅನ್ನು ಸುಮಾರು ನೂರೈವತ್ತರಿಂದ ಇನ್ನೂರು ಡಿಗ್ರಿ ಉಷ್ಣಾಂಶದಲ್ಲಿ ಗ್ರಿಲ್ ಮಾಡುತ್ತಾರೆ. ಆದರೆ ತಂದೂರಿ ಚಿಕನ್ ನಲ್ಲಿಯೂ ಕೂಡ ಹೊರ ಭಾಗದಲ್ಲಿ ಮಾತ್ರ ವೈರಸ್ ನಾಶವಾಗಿರುತ್ತದೆ ಒಳಪದರದಲ್ಲಿ ಸರಿಯಾಗಿ ನಡೆಯದಿರುವ ಕಾರಣ ತಂದೂರಿ ಚಿಕನ್ ಕೂಡ ಕೆಲವೊಂದು ಸಂದರ್ಭಗಳಲ್ಲಿ ಆರೋಗ್ಯಕ್ಕೆ ಸೇಫ್ ಅಲ್ಲ ಎಂದು ಹೇಳಲಾಗಿದೆ.

 

ಇನ್ನೂ ಚಿಕನ್ ಅನ್ನು ಸೇವಿಸುವ ಕ್ರಮ ಅಂದರೆ ಚಿಕನ್ ಅನ್ನು ಯಾವಾಗ ಎಪ್ಪತ್ತು ಡಿಗ್ರಿ ಉಷ್ಣಾಂಶದಲ್ಲಿ ಪೂರ್ಣವಾಗಿ ಬೇಯಿಸಿ ತಿನ್ನುತ್ತಾರೆ. ಆಗ ಚಿಕನ್ ನಿಂದ ಉಂಟಾಗುವಂತಹ ಹಲವು ಬಗೆಯ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಯಾವಾಗ ಚಿಕನ್ ಅನ್ನು ಪರಿಪೂರ್ಣವಾಗಿ ಎಪ್ಪತ್ತು ಡಿಗ್ರಿ ಉಷ್ಣಾಂಶದಲ್ಲಿ ಬೇಯಿಸಲಾಗುತ್ತದೆ. ಆಗ ಚಿಕನ್ ನಲ್ಲಿ ಇರುವಂತಹ ವೈರಸ್ ಆಗಲಿ ಅಥವಾ ಬ್ಯಾಕ್ಟೀರಿಯಾಗಳಿಂದ ಪೂರ್ಣವಾಗಿ ನಾಶವಾಗುತ್ತದೆ. ಚಿಕನ್ ನಮ್ಮ ದೇಹಕ್ಕೆ ಸೇಫ್ ಆಗಿರುತ್ತದೆ. ಚಿಕನ್ ನಿಂದ ಮಾಡಿದ ಚಿಕನ್ ಕರಿ ಅಥವಾ ಗ್ರೇವಿ ಇಂತಹ ಖಾದ್ಯಗಳು ಆರೋಗ್ಯವನ್ನು ಹಾಳು ಮಾಡುವುದಿಲ್ಲ.