ಬೆಳಿಗ್ಗೆ ಎದ್ದ ತಕ್ಷಣ ಈ ಆರು ಕೆಲಸಗಳನ್ನು ಮಾಡಿ..? ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ..! ವಿಡಿಯೋ ನೋಡಿ

Updated: Sunday, December 13, 2020, 08:01 [IST]

ಹೌದು ಜೀವನದಲ್ಲಿ ಪ್ರತಿಯೊಬ್ಬರೂ ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ, ಪ್ರತಿದಿನ ಆಲೋಚನೆ ಮಾಡುತ್ತಿರುತ್ತಾರೆ. ಮತ್ತು ಅಂತಹ ವ್ಯಕ್ತಿಗಳಿಗೆ ಇಂದು ಈ ಲೇಖನದ ಮೂಲಕ ನಾವು ಒಂದು ಒಳ್ಳೆಯ ಮಾಹಿತಿಯನ್ನು ನೀಡಲು ಬಂದಿದ್ದೇವೆ. ಹೌದು ಸ್ನೇಹಿತರೆ ಬೆಳಗ್ಗೆ ಎದ್ದ ತಕ್ಷಣ ನೀವು ಮಾಡುವ ದೈನಂದಿನ ಕೆಲಸದ ಜೊತೆ, ನಾವು ಹೇಳುವ ಈ ಆರು ಕೆಲಸಗಳನ್ನು ಮಾಡಿದ್ದೆ ಆದಲ್ಲಿ, ಜೀವನದಲ್ಲಿ ನೀವು ಕಂಡ ಕನಸುಗಳಿಗೆ ಒಂದು ಅರ್ಥ ಸಿಗುತ್ತದೆ, ಮತ್ತು ನೀವು ಸಾಧನೆ ಮಾಡಿ ನಿಮ್ಮ ಹೆಸರನ್ನು ಶಾಶ್ವತವಾಗಿ ಬರೆದಿಟ್ಟು ಕೊಳ್ಳುವ ಹಾಗೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತಿರಿ.

ಹೌದು ದ ಮಾರ್ನಿಂಗ್ ಮಿರಾಕಲ್ಸ್ ಎನ್ನುವ ಪುಸ್ತಕದಲ್ಲಿ ಒಟ್ಟು ಆರು ಕೆಲಸಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಅವರು, ಮಾಡಲಿಕ್ಕೆ ಹೇಳಿದ್ದಾರೆ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಸೈಲೆಂಟಾಗಿ ಧ್ಯಾನ ಮಾಡಬೇಕಂತೆ, ಹೀಗೆ ಮಾಡಿದರೆ ನಿಮ್ಮ ಆಪೂರ್ತಿ ದಿನ ತುಂಬಾ ಚುರುಕಾಗಿರುತ್ತದಂತೆ. ಎರಡನೆಯದಾಗಿ ನೀವು ಜೀವನದಲ್ಲಿ ಯಾವ ಕೆಲಸ ಮಾಡಿದರೆ, ಹೇಗೆ ಮಾಡಿದರೆ, ಸಾಧನೆ ಮಾಡುತ್ತೀರಾ ಎಂಬುದನ್ನು ಒಂದು ಬಾರಿ ಆಲೋಚನೆ ಮಾಡಬೇಕಂತೆ. ತದನಂತರ ನೀವು ಮನಸ್ಸಿನಲ್ಲಿ ಅಂದುಕೊಳ್ಳುವ ಆ ವಿಚಾರ, ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಗೆ ಹೋಗಿ, ತದನಂತರ ನಿಮ್ಮ ಆ ಕೆಲಸವನ್ನು ಮಾಡಲು ಶಕ್ತಿ ನೀಡುತ್ತದಂತೆ.

ಮೂರನೆಯದಾಗಿ, ನೀವು ಯಾವ ಸಾಧನೆ ಮಾಡಬೇಕು ಎಂಬುದಾಗಿ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಸ್ಥಳದಲ್ಲಿ ಕುಳಿತು ಅದರ ಬಗ್ಗೆ ಒಂದೆರಡು ಬಾರಿ ನಿಮಗೆ ನೀವೇ ಹೇಳಿಕೊಳ್ಳಬೇಕಂತೆ. ನಾಲ್ಕನೆಯದಾಗಿ ದಿನನಿತ್ಯ ವ್ಯಾಯಾಮ ಮಾಡಬೇಕು. ಐದನೆಯದಾಗಿ ಬೆಳಿಗ್ಗೆ ಪುಸ್ತಕವಾಗಲಿ ಅಥವಾ ನ್ಯೂಸ್ಪೇಪರ್ ಆಗಲಿ ಓದಿದರೆ, ನಿಮ್ಮ ಜ್ಞಾನಭಂಡಾರ ಹೆಚ್ಚುತ್ತಾ ನಿಮ್ಮ ಯಶಸ್ಸಿನ ದಾರಿ ತುಂಬಾ ಸುಲಭವಾಗುತ್ತದೆ. ಮತ್ತು ಕೊನೆಯದಾಗಿ ನೀವು ಆ ದಿನ ಏನು ಮಾಡಬೇಕು, ಮತ್ತು ಏನು ಮಾಡಿದಿರಿ, ಎಂಬುದಾಗಿ ಒಂದು ಪುಸ್ತಕದಲ್ಲಿ ಬರವಣಿಗೆ ಮೂಲಕ ಬರೆದುಕೊಳ್ಳುತ್ತಾ ಹೋದರೆ, ನಿಮ್ಮ ತಪ್ಪು ಮತ್ತು ಸರಿ ಕೆಲಸಗಳ ಬಗ್ಗೆ, ನಿಮಗೆ ಅರಿವಿಗೆ ಬಂದು, ಜೀವನದಲ್ಲಿ ಖಂಡಿತಾ ಯಶಸ್ಸು ಕಂಡೆ ಕಾಣುತ್ತೀರಾ, ಎಂಬುದಾಗಿ 'ದ ಮಾರ್ನಿಂಗ್ ಮಿರಾಕಲ್ಸ್' ಎನ್ನುವ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಹಾಗಾಗಿ ಈ ಮಾಹಿತಿ ಓದಿದ ಬಳಿಕ, ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ, ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಧನ್ಯವಾದಗಳು.....