ಹುಬ್ಬಳ್ಳಿಯಲ್ಲಿ ಕೊರೊನಾ ಲಸಿಕೆ ಪಡೆದವರ ಅನುಭವ ಹೀಗಿತ್ತು..! ವಿಡಿಯೋ ನೋಡಿ

Updated: Sunday, January 17, 2021, 13:28 [IST]

ಹುಬ್ಬಳ್ಳಿಯಲ್ಲಿ ಮೊದಲ ಹಂತದಲ್ಲಿ ಲಸಿಕಾಕರಣಕ್ಕೆ ಪ್ರಥಮ ಫಲಾನುಭವಿಯಾಗಿ ಗುರುತಿಸಿದ, ಕಿಮ್ಸ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಬಳ್ಳಾರಿ, ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ.ನಾರಾಯಣ ಹೆಬಸೂರ ಅವರಿಗೆ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಕೋವಿಡ್ ಶೀಲ್ಡ್ ಲಸಿಕೆ ನೀಡಲಾಯಿತು.  

ಕಿಮ್ಸ್ ನಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಹೊರಗುತ್ತಿಗೆ ನೌಕರ ಶ್ರೀನಿವಾಸ ಬಳ್ಳಾರಿಯವರು, ಕಳೆದ ಎಂಟು  ತಿಂಗಳುಗಳಿಂದ ಪ್ರಾಣವನ್ನೂ ಲೆಕ್ಕಿಸದೆ, ಕೊರೊನಾ ವಿರುದ್ಧ ಹೋರಾಡಿದ್ದಾರೆ. ಇದೀಗ ಮೊದಲ ಹಂತದಲ್ಲಿಯೇ ಲಸಿಕೆ ನೀಡಲು ಗುರುತಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.. ಹಾಗೇನೇ ಈ ವೈದ್ಯರ ವಿಭಾಗದಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಕಿಮ್ಸ್ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಕ ಡಾ.ನಾರಾಯಣ ಹೆಬಸೂರ ಅವರು ಮಾತನಾಡಿ, ಲಸಿಕೆಯು ಕೊರೊನಾ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಂಪೂರ್ಣ ಪೂರಕವಾಗಿದೆ.   

ಕರ್ತವ್ಯ ನಿರ್ವಹಿಸುತ್ತಿರುವ ಮಾತೃ ಸಂಸ್ಥೆಯಲ್ಲಿಯೇ ಲಸಿಕೆ ಪಡೆದಿರುವುದು ಹೆಮ್ಮೆ ಮೂಡಿಸಿದೆ ಎಂದಿದ್ದಾರೆ.. ಹಾಗೇನೇ ನಿಮಗೂ ಕೂಡ ಇದರ ಬಗ್ಗೆ ಹೆಚ್ಚಿನದಾಗಿ ಮಾಹಿತಿ ತಿಳಿದಿದ್ದಲ್ಲಿ ನಮಗೆ ತಿಳಿಸಿ, ಹಾಗೆ ಈ ಮೇಲಿನ ಎಲ್ಲಾ ಮಾಹಿತಿಯನ್ನ ಶೇರ್ ಮಾಡಿ ವಿಡಿಯೋ ನೋಡಿ ಧನ್ಯವಾದಗಳು..