ಈ ಗುಟ್ಟನ್ನು ಯಾವ ಗಂಡನು ತನ್ನ ಹೆಂಡತಿಗೆ ಹೇಳಲ್ಲ !!ಹೇಳಿದರೆ ಅಪಾಯ ತಪ್ಪಿದಲ್ಲ

ಈ ಗುಟ್ಟನ್ನು ಯಾವ ಗಂಡನು ತನ್ನ ಹೆಂಡತಿಗೆ ಹೇಳಲ್ಲ !!ಹೇಳಿದರೆ ಅಪಾಯ ತಪ್ಪಿದಲ್ಲ

ಮದುವೆ ಎಂದರೆ ಪವಿತ್ರವಾದ ಒಂದು ಬಂಧನ. ಇದು ನಂಬಿಕೆ, ಪ್ರೀತಿ ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿರುವ ಜೀವನಪಥ. ಆದರೆ ಇಂದಿನ ಕಾಲದಲ್ಲಿ ಅನೇಕ ದಂಪತಿಗಳು ಪರಸ್ಪರ ಎಲ್ಲವನ್ನು ಹಂಚಿಕೊಳ್ಳುವುದಿಲ್ಲ. ವಿಶೇಷವಾಗಿ ಗಂಡಸರು ತಮ್ಮ ಹಳೆಯ ಜೀವನದ ಕೆಲವು ಅಧ್ಯಾಯಗಳನ್ನು ರಹಸ್ಯವಾಗಿಟ್ಟುಕೊಳ್ಳುತ್ತಾರೆ. ಹೆಂಡತಿಗೆ ತಿಳಿಸಿದರೆ ಸಂಬಂಧದಲ್ಲಿ ಬಿರುಕು ಬೀಳಬಹುದು ಎಂಬ ಭಯದಿಂದ ಅವರು ಸುಮ್ಮನಾಗುತ್ತಾರೆ.

ಮದುವೆಗೆ ಮೊದಲು ಕೆಲವರು ವಿವಾಹಿತ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿರುತ್ತಾರೆ. ಆಕೆಯನ್ನು ತಮ್ಮ "ಡ್ರೀಮ್ ಗರ್ಲ್" ಎಂದುಕೊಂಡಿರುತ್ತಾರೆ. ಆದರೆ ಆ ಬಾಂಧವ್ಯ ಪಾಪವೋ ಪ್ರೀತಿಯೋ ಎನ್ನುವುದು ಅವರಿಗೆ ಸ್ಪಷ್ಟವಾಗುವುದಿಲ್ಲ. ಅದನ್ನು ಹೆಂಡತಿಗೆ ಹೇಳಲು ಧೈರ್ಯವಿಲ್ಲ, ಏಕೆಂದರೆ ಅವಳ ಕಣ್ಣಲ್ಲಿ ಗೌರವ ಕಳೆದುಕೊಳ್ಳಬಹುದು ಎಂಬ ಭಯ.

ಇನ್ನೂ ಕೆಲವರು ತಮ್ಮ ನಿಜವಾದ ಲೈಂ  *ಗಿ ಕ ಗುರುತನ್ನು ಮರೆಮಾಡಿಕೊಂಡೇ ಮದುವೆಯಾಗುತ್ತಾರೆ. ಅವರೊಳಗಿನ ಭಿನ್ನತೆ ಅಸಮಾಧಾನ ಮತ್ತು ದೂರವನ್ನು ತರುತ್ತದೆ. "ಅವಳು ನನ್ನನ್ನು ಅರ್ಥ ಮಾಡಿಕೊಳ್ಳಲಾರಳೇನು" ಎಂಬ ಭಯದಿಂದ ಅವರು ಮೌನವಾಗುತ್ತಾರೆ.

ಮದುವೆಗೆ ಮೊದಲು ಕಚೇರಿಯ ಸಹೋದ್ಯೋಗಿಯ ಜೊತೆ ಪ್ರೀತಿ ಅಥವಾ ಫ್ಲರ್ಟ್ ಮಾಡಿದ್ದ ಗಂಡಸರು, ಅದನ್ನು "ಜಸ್ಟ್ ಫ್ರೆಂಡ್" ಎಂದು ಹೆಂಡತಿಗೆ ಹೇಳುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಆ ನೆನಪುಗಳು ಇನ್ನೂ ಜೀವಂತವಾಗಿರುತ್ತವೆ.

ಮದುವೆ ಎಂಬ ಕಲ್ಪನೆ ಇಷ್ಟವಿಲ್ಲದ ಕೆಲವರು ಕುಟುಂಬದ ಒತ್ತಾಯಕ್ಕೆ ಮದುವೆಯಾಗುತ್ತಾರೆ. ಅವರಿಗೆ ಈ ಬಂಧನ ಪ್ರೀತಿಯ ಸಂಬಂಧವಾಗಿಯೇ ಅಲ್ಲ, ಕೇವಲ ಬಂಧನವಾಗಿಯೇ ಕಾಣುತ್ತದೆ. ಮನಸ್ಸಿನಲ್ಲಿ ಅವರು ಇನ್ನೂ ಸ್ವಾತಂತ್ರ್ಯ ಬಯಸುತ್ತಾರೆ.

ಹಣದ ಚಟ, ಮದ್ಯಪಾನ ಅಥವಾ ಜೂಜಿನಂತಹ ದುರ್ಬಲತೆಗಳಲ್ಲಿ ಕೆಲವರು ಸಿಲುಕುತ್ತಾರೆ. ಅದನ್ನು ಹೆಂಡತಿಗೆ ಹೇಳುವುದಿಲ್ಲ, ಏಕೆಂದರೆ "ಅವಳು ನನ್ನನ್ನು ನಂಬುವುದಿಲ್ಲ" ಎಂಬ ಭಯ. ಆದರೆ ಈ ರಹಸ್ಯವೇ ದಾಂಪತ್ಯದ ನಂಬಿಕೆಗೆ ದೊಡ್ಡ ಹೊಡೆತ ನೀಡುತ್ತದೆ.

ನಿಜವಾದ ಸಂಬಂಧ ಎಂದರೆ ಗಂಡ-ಹೆಂಡತಿಯನ್ನು ಕಟ್ಟಿ ಹಿಡಿಯುವುದು ಕೇವಲ ಪ್ರೀತಿಯಲ್ಲ, ಅದು ನಂಬಿಕೆ. ರಹಸ್ಯಗಳು ಎಷ್ಟು ಸಣ್ಣದಾದರೂ ಅವು ಮನಸ್ಸಿನ ಅಂತರವನ್ನು ಹೆಚ್ಚಿಸುತ್ತವೆ. ಮದುವೆ ಅಂದರೆ ಕೇವಲ ಒಟ್ಟಿಗೆ ಬದುಕುವುದು ಅಲ್ಲ, ಒಬ್ಬರ ಮುಂದೆ ಒಬ್ಬರು ನಿಜವಾಗಿ ಆಗಿರುವ ಧೈರ್ಯ