ಮದುವೆಗೂ ಮುನ್ನ ಹುಡುಗ ಹುಡುಗಿ ಶಾರೀರಿಕ ಸಂಬಂಧ ಬೆಳೆಸುವುದು ಎಷ್ಟು ಸರಿ !!

ಮದುವೆಗೂ ಮುನ್ನ ಹುಡುಗ ಹುಡುಗಿ  ಶಾರೀರಿಕ ಸಂಬಂಧ ಬೆಳೆಸುವುದು ಎಷ್ಟು ಸರಿ !!

ಮದುವೆ ಮುನ್ನ ಶಾರೀರಿಕ ಸಂಬಂಧ  ಮಾಡುವುದು ಒಳ್ಳೆಯದ ಕೆಟ್ಟದ ನೋಡಿ ಸ್ನೇಹಿತರೆ ಬಾಯಾರಿಕೆ ಹಸಿವು ಮತ್ತು ನಿದ್ರೆ ಇವು ಪ್ರಕೃತಿಯ ಸಹಜವಾದ ಕ್ರಿಯೆ ಹಾಗೆಯೇ ವಯಸ್ಸಕ ಗಂಡು ಮತ್ತು ಹೆಣ್ಣಿಗೆ ವಯೋಸಹಜವಾಗಿ ಅಗತ್ಯವಿರುವ ಪ್ರೀತಿ ಪ್ರೇಮ ಮತ್ತು ಕಾಮ ಇವು ಸಹ ಪ್ರಕೃತಿಯ ಸಹಜವಾದ ಕ್ರಿಯೆ ಇದನ್ನು ಮದುವೆಯೇ ಎಂಬ ನಾಗರಿಕ ಸಮಾಜದ ಕಟ್ಟುಪಾಡುಗಳೊಂದಿಗೆ ಕುಟುಂಬದ ಗುರು ಹಿರಿಯರ ಮಾರ್ಗದರ್ಶನದಲ್ಲಿ ಮಾಡುವ ಒಂದು ಸೂಕ್ತವಾದ ಕೌಟುಂಬಿಕ ವ್ಯವಸ್ಥೆ ಮದುವೆಯಾದ ಮೇಲೆ ಕಾಮ ಮೂರು ತಿಂಗಳು ಮೋಹ ಆರು ತಿಂಗಳು ಪ್ರೀತಿ ಪ್ರೇಮ ಕೊನೆವರೆಗೂ ಇರಬೇಕು ಹೌದು

 ಸನಾತನ ಧರ್ಮದ ಪ್ರಕಾರ ಮದುವೆಯಾಗುವ ಮೂಲ ಉದ್ದೇಶ ಹೆಣ್ಣು ಮತ್ತು ಗಂಡಿನ ಮಿಲನ ಮತ್ತು ಮಕ್ಕಳನ್ನು ಪಡೆಯುವುದು ಪ್ರತಿಯೊಬ್ಬ ಪುರುಷನು ತನ್ನ ಸ್ವಂತ ಹೆಂಡತಿಯೊಂದಿಗೆ ಮತ್ತು ಪ್ರತಿಯೊಬ್ಬ ಮಹಿಳೆ ತನ್ನ ಸ್ವಂತ ಗಂಡನೊಂದಿಗೆ ಮಾತ್ರ   ಶಾರೀರಿಕ ಸಂಬಂಧವನ್ನು ಹೊಂದಿರಬೇಕು ಅವಿವಾಹಿತ ಜನರು ಶಾರೀರಿಕ ಸಂಬಂಧ ತೊಡಗಿದಾಗ ಅವರು ದೇವರ ಉತ್ತಮ ಉಡುಗೊರೆಯಾದ ಶಾರೀರಿಕ ಸಂಬಂಧ  ಅಪವಿತ್ರಗೊಳಿಸುತ್ತಿದ್ದಾರೆ ಮದುವೆ ಆದಮೇಲೆ

ಒಂದು ಹೆಣ್ಣಿಗೆ ಗಂಡನೆ ಸರ್ವಸ್ವ ಗಂಡನಿಗೂ ಕೂಡ ಇದೇ ಅನ್ವಯ ಆಗುತ್ತದೆ ಒಂದು ವೇಳೆ ನಿಮಗೆ ಗಂಡನ ಮೇಲೆ ಪ್ರೀತಿ ಭಾವನೆಗಳಿರದಿದ್ದರೆ ಕಾನೂನುಬದ್ಧವಾಗಿ ಡೈವೋರ್ಸ್ ಕೊಟ್ಟು ಮತ್ತೆ ಉಳಿದದ್ದನ್ನು ಮಾಡಿ ಹೊರತು ಹಾಗೆಯೇ ಬೆನ್ನಿಗೆ ಚೂರಿ ಇರಿದರೆ ಇದು ಸರಿಯಲ್ಲ ಮಾಂಗಲ್ಯ ಭಾಗ್ಯದ ಬೆಲೆ ಪವಿತ್ರವಾದದ್ದು ಅಷ್ಟಕ್ಕೂ ಸುಖ ಸಂಸಾರವಿದ್ದರೆ ಬೇಡದ ಹೇಸಿಗೆಯ ಹೊಲಸಿನ ಹುಡುಕಾಟಕ್ಕೆ ಏಕೆ ದೇಹದ ದಾಹ ಏನಿದ್ದರೂ ಹೊತ್ತು ಮುಳುಗುವ ತನಕ ಕಾಮದ ಕ್ರೀಡೆಯ ಮೇಲೆ ನಿಂತ ಸಂಬಂಧ ಕ್ಷಣಿಕ ಮಾತ್ರ ಕಾಮದ ಸಾಗರದೊಳು ಹಾರಿದರೆ ಉಸಿರು ಕಟ್ಟಿ ಸಾಯುತ್ತೀರಿ ನೀವು ಬಿತ್ತಿದ ವಿಷ ನಿಮ್ಮನೆ ಕೊಲ್ಲುವುದು ಕೊನೆಗೆ ಇರುವುದೊಂದೇ ಬದುಕು ಹೇಸಿಗೆಯ ಎಂಜಲು ತಿನ್ನುವ ಅಯೋಗ್ಯ ಕೆಲಸ ಮಾಡಬೇಡಿ ಸಮಾಧಾನದಿಂದ ಕುಳಿತು ಯೋಚನೆ ಮಾಡಿ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಗಂಡನೆ ಹೆಣ್ಣಿಗೆ ಭೂಷಣ ತಾಳಿಯೇ ಹೆಣ್ಣತನಕ್ಕೆ ಕಳೆ ಅದಕ್ಕೆ ದಯಮಾಡಿ ಕಳಂಕ ತರಬೇಡಿ ಇದು ಗಂಡಸರಿಗೂ ಲಾಗುವಾಗುತ್ತೆ ಹೀಗಾಗಿ ಮದುವೆಯಾಗುವಾಗಲೇ ಆದಷ್ಟು ತಮಗೆ ಹೊಂದಾಣಿಕೆ ಆಗುವ ಅಥವಾ ಸಮರ್ಪಕವಾದ ವ್ಯಕ್ತಿಯನ್ನು ಆಯ್ಕೆ

ಮಾಡಿಕೊಳ್ಳಬೇಕು ಪರಸ್ಪರ ಅಭಿರುಚಿ ಆಸಕ್ತಿ ವ್ಯಕ್ತಿತ್ವ ಇವುಗಳಿಗೆ ಹೊಂದುವಂತಹ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದದ್ದು ಅತ್ಯಂತ ಅವಶ್ಯಕ ಅದನ್ನು ಬಿಟ್ಟು ವಿವಾಹದ ಒಂದು ಚೌಕಟ್ಟಿನಲ್ಲಿ ಇದ್ದುಕೊಂಡು ಹೊರಗಿನ ಸಂಬಂಧಗಳಿಗೆ ಕೈಚಾಚಬಾರದು ಅದು ಯಾರಿಗೂ ಸಹ ಒಳಿತನ್ನು ಉಂಟುಮಾಡುವುದಿಲ್ಲ ಗಂಡ ಹೆಂಡತಿ ಅವರ ಕುಟುಂಬಗಳು ಮಕ್ಕಳು ಹೀಗೆ ಎಲ್ಲರೂ ಸಹ ಅನೈತಿಕ ಸಂಬಂಧಗಳಿಗೆ ಬಲಿಪಶುಗಳಾಗುವುದು ಶತಸಿದ್ದ ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮೊದಲು ಸ್ತ್ರೀ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಠ ವಿವಾಹದ ನಂತರವಾದರೂ ನಮ್ಮಂತೆ ನಡೆದುಕೊಳ್ಳಲೆಂದು ಬಯಸುತ್ತೇವೆ