ಪತ್ನಿಯಿಂದ ವಿಚ್ಛೇದನ ಪಡೆದ ಖುಷಿಯಲ್ಲಿ 40 ಲೀಟರ್ ಹಾಲು ತಂದು ಸ್ನಾನ ಮಾಡಿದ ಪತಿ! ! ನೀವೇನಂತೀರಾ ?

"ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಬಾರಿ ಓಡಿಹೋಗಿದ್ದಳು. ಆದರೂ ನಾನು ಎರಡೂ ಬಾರಿ ಅವಳನ್ನು ಕ್ಷಮಿಸಿದೆ. ನಮ್ಮ ಮಗಳ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅವಳು ಅದೇ ತಪ್ಪನ್ನು ಪುನರಾವರ್ತಿಸುತ್ತಲೇ ಇದ್ದಳು. ನಾನು ಅದನ್ನು ಸಹಿಸಲಾಗಲಿಲ್ಲ. ಅಂತಿಮವಾಗಿ ಪರಸ್ಪರ ಕಾನೂನುಬದ್ಧವಾಗಿ ಬೇರೆ ಬೇರೆ ಆಗುವ ಮಾರ್ಗ ಆರಿಸಿಕೊಳ್ಳಬೇಕಾಯಿತು" ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.
ವಿಚ್ಛೇದನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮಾಣಿಕ್ ಅಲಿ ಅಂಗಡಿಯಿಂದ ನಾಲ್ಕು ಬಕೆಟ್ (ಸುಮಾರು 40 ಲೀಟರ್) ಹಾಲು ತಂದು ಸ್ನಾನ ಮಾಡಿದ್ದಾನೆ. ಸ್ನಾನ ಮಾಡುತ್ತಲೇ ವಿಡಿಯೋ ಕೂಡ ಮಾಡಿದ್ದಾನೆ. "ಇಂದಿನಿಂದ, ನಾನು ಸ್ವತಂತ್ರ... ನನಗೆ ಎಲ್ಲವೂ ಹೊರೆಯಾಗಿತ್ತು... ಈಗ ನಾನು ಅದನ್ನೆಲ್ಲಾ ತೊಳೆದುಕೊಂಡಿದ್ದೇನೆ" ಎಂದು ವಿಡಿಯೋದಲ್ಲಿ ಆತ ಹೇಳಿಕೊಂಡಿದ್ದಾನೆ.
"ಮಗುವಿನ ಸಲುವಾಗಿ ಪತ್ನಿಯನ್ನು ಉಳಿಸಿಕೊಳ್ಳಲು ನಾನು ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ, ಪತ್ನಿ ತನ್ನ ವಿವಾಹೇತರ ಸಂಬಂಧವನ್ನು ಮತ್ತೆ ಮತ್ತೆ ಮುಂದುವರೆಸಿದ್ದರಿಂದ ವಿಚ್ಛೇದನ ಒಪ್ಪಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಈ ಮುನ್ನ ಹೀಗೆ ಮಾಡಿದಾಗ ಸಾಕಷ್ಟು ತಿಳಿವಳಿಕೆ ಹೇಳಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಹಿರಿಯ ಸಮ್ಮುಖದಲ್ಲಿ ರಾಜಿ ಕೂಡ ಮಾಡಿಕೊಳ್ಳಲಾಗಿತ್ತು. ಅದರ ಹೊರತು ನಮ್ಮನ್ನು ತೊರೆದು ಹೋಗಿದ್ದಳು. ಈ ಬಾರಿ ಮಗುವಿನೊಂದಿಗೆ ಮನೆ ತೊರೆದಿದ್ದರಿಂದ ಇದ್ದ ಆಸೆಗಳೆಲ್ಲ ಕಮರಿದ್ದವು. ಕೊನೆಗೆ, ಕಾನೂನಿನ ಮೂಲಕ ಪರಸ್ಪರ ವಿಚ್ಛೇದನ ಆರಿಸಿಕೊಳ್ಳಬೇಕಾಯಿತು. ಔಪಚಾರಿಕವಾಗಿ ಬೇರ್ಪಪಟ್ಟ ನಂತರ, ನಾನು ಹೊಸ ಜನ್ಮವನ್ನು ಪಡೆದಂತೆ ಭಾಸವಾಯಿತು. ಅದಕ್ಕಾಗಿ ಹೊಸ ಜೀವನದ ಆಯ್ಕೆಯ ಗುರುತಿಗಾಗಿ ಸುಮಾರು 40 ಲೀಟರ್ ಹಾಲು ತಂದು ಹಾಲಿನಿಂದ ನನ್ನನ್ನು ನಾನು ತೊಳೆದುಕೊಂಡೆ. ಈಗ ನಾನು ಸಂಸಾರದಿಂದ ಮುಕ್ತಿ ಪಡೆದ ಸ್ವತಂತ್ರ ಹಕ್ಕಿ" ಎಂದು ಮಾಣಿಕ್ ಅಲಿ ತನ್ನ ಮನದ ಮಾತಗಳನ್ನು ಬಹಿರಂಗಪಡಿಸಿದ್ದಾನೆ. ( video redit ;TIME8 Axom )