ಮಧ್ಯರಾತ್ರಿ ಊರನ್ನು ಕಾಲಿ ಮಾಡಿದ ಊರಿನ ಜನ!! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತಿರ ?

ನಮ್ಮ ದೇಶದಲ್ಲಿ ಬಗೆರಿಸಕಾಗಿರುವಂತ ಎಷ್ಟೋ ಘಟನೆಗಳು ನಡೆದಿವೆ ಅದೇ ತರ ಈ ಜಾಗದಲ್ಲೂ ಕೂಡ ಒಂದು ಘಟನೆ ನಡೆದಿದೆ ಆದರೆ ಇದರ ರಹಸ್ಯ ಮಾತ್ರ ಯಾರಿಗೂ ಗೊತ್ತಿಲ್ಲ ಅಂತ ಒಂದು ಸ್ಥಳದ ಬಗ್ಗೆ ತಿಳಿಸಿಕೊಡ್ತೀನಿ ಈ ಘಟನೆಯು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕುಲ್ದಾರ ಅನ್ನೋ ಗ್ರಾಮದಲ್ಲಿ ನಡೆದಿದೆ ಒಂದು ಕಾಲದಲ್ಲಿ ಜನಗಳಿಂದ ತುಂಬಿ ತುಳುಕಾಡುತಿದ್ದಂತ ಈ ಒಂದು ಹಳ್ಳಿ ಇವತ್ತಿನ ದಿನಗಳಲ್ಲಿ ಬರಿ ಒಂದು ದೆವ್ವಗಳ ವಾಸಸ್ಥಾನವಾಗಿದೆ.
ಇವತ್ತಿನ ದಿನಗಳಲ್ಲಿ ಇಲ್ಲಿ ಯಾರು ಕೂಡ ವಾಸ ಮಾಡ್ತಾ ಇಲ್ಲ. 600 700 ವರ್ಷಗಳಿಂದ ಈ ಗ್ರಾಮದಲ್ಲಿದ್ದಂತಹ ಮನೆಗಳು ಇವತ್ತು ಪಾಳು ಬಿದ್ದಿವೆ ಅದರಲ್ಲೂ ಸೂರ್ಯ ಮುಳುಗಮೇಲಂತೂ ಈ ಕಡೆ ತಲೆ ಹಾಕೋ ಏರಿಯಾ ಯಾರು ಮಾಡಲ್ಲ ಯಾಕಂದ್ರೆ ಕತ್ತಲಾದಮೇಲೆ ಇಲ್ಲಿ ವಿಚಿತ್ರ ವಿಚಿತ್ರ ಶಬ್ದಗಳು ಕೇಳಿ ಬರ್ತವಂತೆ ಅಂದ್ರೆ ಯಾರೋ ಕಿರ್ಚಾಡೋತರನೋ ಯಾರೋ ಅಳ್ತಿರೋ ತರನೋ ಏನೇನೋ ವಿಚಿತ್ರ ಅನುಭವಗಳು ಆಗ್ತವಂತೆ ಈತರ ಶಬ್ದಗಳು ಬರೋದ್ರಿಂದ ಈಕಡೆ ಯಾರು ಕೂಡ ಕತ್ತಲಾದಮೇಲೆ ತಲೆ ಹಾಕೋದೇ ಇಲ್ಲ ಈ ಊರಲ್ಲಿ ಸುಮಾರು 1500 ರಿಂದ 1600 ಜನ ವಾಸ ಮಾಡ್ತಿದ್ರು ಅಂತ ಹೇಳಲಾಗುತ್ತೆ
ಆದರೆ ಒಂದೇ ರಾತ್ರಿಲ್ಲಿ ಅಷ್ಟು ಜನ ಯಾಕೆ ಊರನ್ನ ಖಾಲಿ ಮಾಡಿಕೊಂಡು ಹೋದ್ರು ಈ ಊರನ್ನ ಯಾಕೆ ಬಿಟ್ಟುೋದ್ರು ಅನ್ನೋದೇ ಎಲ್ಲರಲ್ಲೂ ಕಾಡುತ್ತಿರುವ ಒಂದು ಪ್ರಶ್ನೆ ಇದಕ್ಕೆ ಹಲವಾರು ಜನರು ಹಲವಾರು ಕಾರಣಗಳನ್ನ ಕೊಡ್ತಾರೆ ಅದೇನಂದ್ರೆ ಆಗ ಅಲ್ಲೊಬ್ಬ ಸಲೀಂ ಸಿಂಗ್ ಅಂತ ಒಬ್ಬ ಕ್ರೂರ ಮಂತ್ರಿ ಇದ್ನಂತೆ ಅವನಿಂದಲೇ ಆ ಊರು ಖಾಲಿ ಆಗೋಯ್ತು ಅಂತ ಎಲ್ಲರೂ ಹೇಳ್ತಾರೆ ಅದೇನು ಕಾರಣ ಅಂದ್ರೆ ಸಲೀಂ ಸಿಂಗ್ ಎಂಬ ಕ್ರೂರ ಮಂತ್ರಿ ಒಂದಿನ ಆ ಹಳ್ಳಿಲಿ ಒಂದು ಸುಂದರವಾದ ಹುಡುಗಿನ ನೋಡ್ತಾನೆ ಅವಳನ್ನ
ಅನುಭವಿಸಲೇಬೇಕು ಅಂತ ಡಿಸೈಡ್ ಕೂಡ ಮಾಡ್ತಾನೆ ಇದನ್ನ ಯಾರಾದರೂ ತಡೆಯಕೆ ಬಂದ್ರೆ ಇಡೀ ಊರನ್ನೇ ಸ್ಮಶಾಣವನ್ನಾಗಿ ಮಾಡ್ತೀನಿ ಅಂತ ಇಡೀ ಊರಿಗೆ ವಾರ್ನಿಂಗ್ ಕೊಡ್ತಾನೆ ಅವನ ಕ್ರೂರತನವನ್ನು ಗೊತ್ತಿದ್ದಂತ ಆ ಊರಿನ ಗ್ರಾಮಸ್ಥರು ನೀವು ಇವತ್ತು ನೀವು ಮನೆಗೆ ಹೋಗಿ ನಾಳೆ ಬೆಳಕು ಬಿಡು ಅಷ್ಟರೊಳಗಡೆ ಈ ಹುಡುಗಿನ ನಿನ್ನ ಮನೆಗೆ ತಂದು ಬಿಡ್ತೀವಿ ನಾವೇ ಅಂತ ಸಮಾಧಾನ ಮಾಡ್ತಾರೆ ಅವನು ಸಮಾಧಾನ ಪಡ್ಕೊಂಡು ಅವನ ಮನೆ ಹಾಗೆ ಅವನು ವಾಪಸ್ ಹೋಗ್ತಾನೆ ಆದರೆ ಬೆಳಕು ಬಿಡು ಅಷ್ಟರ ಒಳಗಡೆ ಆ ಊರಿನ ಜನ ಆ ಹುಡುಗಿನ ಕರ್ಕೊಂಡು ಊರನ್ನ ಖಾಲಿ ಮಾಡಿಕೊಂಡು ಹೋಗಿರತಾರೆ ಆ ಊರಿನ ಜನ ಆ ಊರನ್ನ ಖಾಲಿ ಮಾಡಿಕೊಂಡು ಹೋಗೋಕೆ ಈತರದ್ದು ಒಂದು ಕಾರಣ ಕೂಡ ಜನ ಕೊಡ್ತಾರೆ ಇನ್ನು ಕೆಲವರ ಪ್ರಕಾರ ಈ ಊರಲ್ಲಿ ಬ್ರಿಟಿಷರ ಕಾಲದಲ್ಲಿ ತುಂಬಾನೇ ಬರಗಾಲ ಬಂದಿತ್ತಂತೆ ಅದ್ದರಿಂದ ಅಲ್ಲಿನ ಜನರು ವ್ಯವಸಾಯ ಮಾಡಕ್ಕೆ ನೀರಿಲ್ಲ ಅಂತ ಊರನ್ನ ಖಾಲಿ ಮಾಡಿಕೊಂಡು ಹೋದ್ರು ಅಂತ ಹೇಳ್ತಾರೆ ಆದರೆ ಆ ಊರಿನ ಪಕ್ಕದಲ್ಲಿ ಒಂದು ದೊಡ್ಡ ಕೆರೆ ಇದೆ ಇವತ್ತಿಗೂ ಕೂಡ ಅಲ್ಲಿ ನೀರು ತುಂಬಿ ತುಳುಗುತಾ ಇದೆ ಅಂತದರಲ್ಲಿ ಅಲ್ಲಿ ಬರಗಾಲ ಬರುತ್ತಾ ಬರಗಾಲ ಬರುತ್ತಂತ ಆ ಊರಿಂಜನ ಖಾಲಿ ಮಾಡಿಕೊಂಡು ಹೋಗಕೆ ಸಾಧ್ಯನೇ ಇಲ್ಲ ಅಂತ ಇನ್ನ ಕೆಲವೊಂದಿಷ್ಟು ಜನರ
ವಾದವಾಗಿದೆ ಹಾಗಾದರೆ ಈ ಗ್ರಾಮದಲ್ಲಿ ನಿಜವಾಗಲೂ ಸಮಸ್ಯೆ ಇರೋದಾದರೂ ಏನು ಈ ಗ್ರಾಮದಲ್ಲಿ ಏನಾದರೂ ದೆವ್ವ ಇರಬಹುದಾ ಅಂತ ತಿಳ್ಕೊಳ್ಳೋಕೋಸ್ಕರ ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿ ಕಡೆಯಿಂದ ಒಂದು ಟೀಮ್ ಬರುತ್ತೆ ಆ ಟೀಮ್ನ ನಾಯಕ ಗೌರವ್ ತಿವಾರಿ ಅವರಆಗಿರ್ತಾರೆ ಈ ಗೌರವ್ ತಿವಾರಿ ಮತ್ತು ಅವರ ಪ್ಯಾರಾನಾರ್ಮಲ್ ಎಕ್ಸ್ಪರ್ಟ್ ಟೀಮ್ ಒಂದುದಿನ ಆ ಗ್ರಾಮದಲ್ಲೇ ಉಳಿತ್ತಾರೆ ಅವರಿಗೆ ವಿಚಿತ್ರ ಶಬ್ದ ಶಬ್ದಗಳೆಲ್ಲ ಕೇಳಕ್ಕೆ ಶುರುವಾಗುತ್ತೆ ಅಂದ್ರೆ ಯಾರೋ ಅಳ್ತಿರೋ ಹಾಗೋ ಹಾಗೆ ಯಾರೋ ಕಿರಚಾಡ್ತಿರೋ ಶಬ್ದಗಳೆಲ್ಲ ಕೇಳಿಬರ್ತವೆ ಹಾಗೆ ವಿಚಿತ್ರ ಅನುಭವಗಳು ಅವರ ಟೀಮಿಗೆ ಆಗುತ್ತೆ ಅವರು ಮಾರನೇ ದಿನ ಬೆಳಿಗ್ಗೆ ಎದ್ದು ಅಲ್ಲಿಂದ ಹೊರಡುತಾರೆ ಅಲ್ಲಿಂದ ಹೊರಟು ಬಂದು ಈ ಗ್ರಾಮದಲ್ಲಿ ನಿಜವಾಗಲೂ ದೆವ್ವ ಇದೆ ಅಂತ ಬಂದು ವರದಿನ ಕೊಡ್ತಾರೆ ಅವತ್ತಿಂದ ಆ ಗ್ರಾಮಕ್ಕೆ ದೆವ್ವಗಳ ಗ್ರಾಮ ಅಂತ ಇನ್ನು ಪ್ರಚಾರ ಸಿಗುತ್ತೆ ಈ ಜಾಗಕ್ಕೆ ಜನ ದೇಶ ವಿದೇಶಗಳಿಂದ ಭೇಟಿ ಕೊಡ್ತಾರೆ ಹಾಗೆ ಇವತ್ತಿನ ದಿನಗಳಲ್ಲಿ ಈ ಜಾಗ ಒಂದು ಟೂರಿಸಂ ಪ್ಲೇಸ್ ಕೂಡ ಆಗಿದೆ. ಆದರೂ ಸಂಜೆ ಆದಮೇಲೆ ಇಲ್ಲಿ ಜನ ಹೋಗೋಕೆ ಭಯಪಡ್ತಾರೆ. ಈ ಜಾಗವು ಜೈಪುರದಿಂದ ಸುಮಾರು 587 km ದೂರದಲ್ಲಿದೆ. ನೀವು ಕೂಡ ಈ ಟೂರಿಸ್ಟ್ ಪ್ಲೇಸ್ಗೆ ಹೋಗಿ ಬರಬಹುದು ( video credit : WOW KARNATAKA )