ಗಂಡ ಹೆಂಡತಿ ಸಂಬಂಧ ಹಾಳಾಗಲು ಈ 9 ತಪ್ಪೇ ಕಾರಣ : ಯಾವುದು ನೋಡಿ ?

ಗಂಡ ಹೆಂಡತಿ ಸಂಬಂಧ ಹಾಳಾಗಲು ಈ ಒಂಬತ್ತು ತಪ್ಪುಗಳೇ ಕಾರಣ ಒಂದು ಪತಿ ಪತ್ನಿ ಸಂಬಂಧ ಮದುವೆಯಾದ ನಂತರ ಪತಿ ಪತ್ನಿಯ ಸಂಬಂಧವು ಚೆನ್ನಾಗಿದ್ದರೆ ಸಂಸಾರವೆಂಬ ದೋಣಿ ದಡ ಸೇರಲು ಸಾಧ್ಯ ಇಲ್ಲವಾದಲ್ಲಿ ಆ ದೋಣಿಯು ನಡುನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಆದರೆ ಈ ಒಂಬತ್ತು ತಪ್ಪುಗಳು ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುತ್ತದೆ ಅವುಗಳ ಬಗ್ಗೆ ತಿಳಿಯಿರಿ ಎರಡು ಸಣ್ಣ ಸಮಸ್ಯೆಗಳ ನಿರ್ಲಕ್ಷ್ಯ ಸಣ್ಣ ಭಿನ್ನಾಭಿಪ್ರಾಯಗಳು ಮೂಡಿದಾಗ ಅದನ್ನು ಮೊಳಕೆಯೊಡೆಯಲು ಬಿಡಬೇಡಿ ಸಣ್ಣಪುಟ್ಟ ಸಮಸ್ಯೆಗಳೆಂದು ನಿರ್ಲಕ್ಷ್ಯ ತೋರದೆ ಆ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಿ ಮೂರು ಒಬ್ಬರನ್ನೊಬ್ಬರು ಲಘುವಾಗಿ ಪರಿಗಣಿಸುವುದು ಪರಸ್ಪರ ಪ್ರಯತ್ನಗಳು ಮತ್ತು ಕೆಲಸ ಕಾರ್ಯಗಳಿಗೆ ಮೆಚ್ಚುಗೆ ಅಥವಾ
ಕೃತಜ್ಞತೆಯನ್ನು ತೋರಿಸದಿರುವುದು ಭಾವನಾತ್ಮಕ ಬಂಧವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಸಣ್ಣ ವಿಷಯವಾದರೂ ಒಬ್ಬರನ್ನು ಒಬ್ಬರು ಬೆಂಬಲಿಸಿ ಪ್ರೋತ್ಸಾಹಿಸುವುದು ಒಳ್ಳೆಯದು ನಾಲ್ಕು ಸಂವಹನದ ಕೊರತೆ ಪರಸ್ಪರ ನಡುವೆ ಉತ್ತಮ ಸಂವಹನ ಇಲ್ಲವಾದಲ್ಲಿ ಅವರ ಬೇಕು ಬೇಡಗಳು ನಿಮಗೆ ಅರ್ಥವಾಗುವುದಿಲ್ಲ ಇದರಿಂದ ತಪ್ಪು ತಿಳುವಳಿಕೆ ಹತಾಶೆ ಮೂಡುತ್ತದೆ ಪರಸ್ಪರ ಮಾತನಾಡಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಾಗ ಉತ್ತಮ ಸಂಬಂಧಕ್ಕೆ ರೂಪುಗೊಳ್ಳುತ್ತದೆ ಸಮಯವನ್ನು ಒಟ್ಟಿಗೆ ಕಳೆಯದಿರುವುದು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯದೆ ಇತರ ವಿಷಯಗಳಿಗೆ ಆದ್ಯತೆ ನೀಡುವುದು ಬಾಂಧವ್ಯವನ್ನು ದುರ್ಬಲಗೊಳಿಸಬಹುದು ಆದರೆ ಇಬ್ಬರು ತಮಗಾಗಿ ಪ್ರತಿದಿನ ಸ್ವಲ್ಪ ಸಮಯವನ್ನು ಮೀಸಲಿಡಬೇಕು ಆಗ
ಇಬ್ಬರ ನಡುವಿನ ಪ್ರೀತಿ ಗಟ್ಟಿಗೊಳ್ಳುತ್ತದೆ ಆರು ರಹಸ್ಯ ಅಥವಾ ಸುಳ್ಳುಗಳು ಅಪ್ರಾಮಾಣಿಕ ಕಥೆಗಳು ಅಥವಾ ಸಣ್ಣಪುಟ್ಟ ಸುಳ್ಳುಗಳು ಇಬ್ಬರ ನಡುವೆ ನಂಬಿಕೆಯನ್ನು ನಾಶಪಡಿಸಿ ಸಂಬಂಧದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಆದ್ದರಿಂದ ಯಾವಾಗಲೂ ಪ್ರಾಮಾಣಿಕವಾಗಿರುವುದು ಉತ್ತಮ ಏಳು ವೈಯಕ್ತಿಕ ನಿರ್ಧಾರ ಒಬ್ಬರು ಮತ್ತೊಬ್ಬರ ವೈಯಕ್ತಿಕ ಅಂತರ ಹಾಗೂ ವೈಯಕ್ತಿಕ ನಿರ್ಧಾರಗಳನ್ನು ಗೌರವಿಸಬೇಕು ವೈಯಕ್ತಿಕ ಗೌಪ್ಯತೆಗಳನ್ನು ಕಾಪಾಡುವುದು ಬಹಳ ಮುಖ್ಯ ಏಕೆಂದರೆ ಪತಿ ಪತ್ನಿಯ ವೈಯಕ್ತಿಕ ಜೀವನ ಬಹಳ ಬೆಲೆಯುಳ್ಳದ್ದು ಎಂಟು ಹೋಲಿಕೆ ಬೇಡ ನಿಮ್ಮ ಸಂಗಾತಿ ಇತರರೊಂದಿಗೆ ಅಳೆಯುವುದು ಬೇಡ ಅವರಿಗೆ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ ಹಾಗಾಗಿ ಯಾರೊಂದಿಗೂ ಹೋಲಿಕೆ ಮಾಡಬೇಡಿ
ಒಂಬತ್ತು ಹೊಡೆದಾಟ ಸಣ್ಣಪುಟ್ಟ ವಿಷಯಗಳಿಗೂ ಜಗಳ ಮಾಡುತ್ತಾ ಅದನ್ನೇ ದೊಡ್ಡ ಹೆಮ್ಮರವಾಗಿ ಬೆಳೆಸುತ್ತಾ ಹೋಗಬಾರದು ಇಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕೂಡಲೇ ಮಾತನಾಡಿ ಬಗೆಹರಿಸಿಕೊಳ್ಳಿ ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .