ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ದೇಹ ಸಂಬಂಧ ಮಾಡಿದ ಪುರುಷ..! ಇದೀಗ ಮದುವೆ ಬೇಡವಂತೆ..?

Updated: Wednesday, January 13, 2021, 16:38 [IST]

ಹೌದು ಮಾಧ್ಯಮ ಮೂಲಕ ಈಗಷ್ಟೇ ನಮಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕಳೆದ ವರ್ಷ ಯುವತಿಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಪುರುಷನೊಬ್ಬ, ದೇಹ ಸಂಬಂಧ ಮಾಡಿ ಬಳಿಕ ಮದುವೆ ಬೇಡ ಎಂದಿರುವ ಘಟನೆ ಅತ್ತ ರಾಜಸ್ಥಾನದ, ಜೋಧ್ ಪುರ್ ದಲ್ಲಿ ನಡೆದಿದ್ದು, ಎಂಗೇಜ್ಮೆಂಟ್ ಆಗಿದ್ದ ಈತನ ಭಾವಿಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ. 

ಕಳೆದ ವರ್ಷ ಜೋಧಪುರದ ಯುವತಿ ಯುವಕನಿಗೆ, ಮನೆಯವರ ಮೂಲಕ ಎಂಗೇಜ್ಮೆಂಟ್ ಮಾಡಿಸಲಾಗಿತ್ತು ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ಕೊರೋನಾ ಬಂದ ಕಾರಣಕ್ಕಾಗಿ, ಮದುವೆಯನ್ನು ಮುಂದೂಡಿದ್ದಾರೆ. ಇದೇ ವೇಳೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಬಾವಿ ಪತ್ನಿಯನ್ನ ಯುವಕ ಭೇಟಿ ಮಾಡಿ, ರೆಸಾರ್ಟ್ ರೂಮೊಂದನ್ನು ಬುಕ್ ಮಾಡಿಸಿಕೊಂಡು, ಯುವತಿಯ ಜೊತೆ, ಕಳೆದ ನವೆಂಬರ್ ತಿಂಗಳಲ್ಲಿ ದೇಹ ಸಂಬಂಧಮಾಡಿದ್ದಾನೆ. 

ಇದಾದನಂತರ ಮದುವೆ ನಿಶ್ಚಯವಾಗಿದ್ದ ಯುವತಿಗೆ ನಿನ್ನನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿ ಶಾಕ್ ನೀಡಿದ್ದಾನೆ.  

ಮತ್ತು ಇವರಿಬ್ಬರ ಈ ವಿಚಾರವಾಗಿ ಇಬ್ಬರ ಮನೆಯವರು ಮಾತನಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮನನೊಂದ ಯುವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು ನೀಡಿದ್ದಾಳೆ ಎಂದು ತಿಳಿದುಬಂದಿದೆ. ಹಾಗೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಗಂಭೀರ ಆರೋಪ ಕೂಡ ಈಕೆ ಮಾಡಿದ್ದಾಳೆ ಎನ್ನಲಾಗಿದೆ..