ಸಾರ್ ನನ್ ಫ್ರೆಂಡ್ಸ್ ಎಲ್ಲಾ ಹೇಗಿದ್ದಾರೆ ಸಾರ್ ಎಂದ ಮಹಿಳೆ..! ಕರಳು ಕಿತ್ತು ಬರುವಂತಿದೆ ಈಕೆಯ ಕಾಳಜಿ ವಿಡಿಯೋ

Updated: Sunday, January 17, 2021, 15:55 [IST]

ನಿನ್ನೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಅತಿದೊಡ್ಡ ಶಾಕ್ ಸುದ್ದಿಯೊಂದು ಹೊರ ಬಿದ್ದಿದ್ದು, ಧಾರವಾಡದ ಹತ್ತಿರ ದಾವಣಗೆರೆಯ ಸ್ಕೂಲ್ ಗೆಳತಿಯರ ಆಕ್ಸಿಡೆಂಟ್ ವಿಚಾರ ತಿಳಿದು ಎಲ್ಲರೂ ಕಣ್ಣೀರು ಹಾಕಿದರು. ಹೌದು ಸ್ನೇಹಿತರೆ ಎಲ್ ಕೆಜಿಯಿಂದ ಎಲ್ಲರೂ ಒಂದೇ ಸ್ಕೂಲ್ನಲ್ಲಿ ಓದಿದ್ದು, ದಾವಣಗೆರೆಯ ಈ 16 ಹೆಣ್ಣುಮಕ್ಕಳು ಒಟ್ಟಿಗೆ ಸೇರಿ ಗೋವಾಕ್ಕೆ ಗೆಳತಿಯರೊಡನೆ ಪ್ರವಾಸಕ್ಕೆಂದು ಹೊರಟಿದ್ದರು. ಬಳಿಕ ಜವರಾಯನ ರೀತಿಯೇ ಟಿಪ್ಪರ್ ಬಂದು, ಇವರ ಟೆಂಪೋಗೆ ಆಘಾತ ಮಾಡಿತು. ಮತ್ತು ಆಕ್ಸಿಡೆಂಟ್ ಸ್ಥಳದಲ್ಲಿಯೇ ಒಟ್ಟು 13 ಜನ ಮೃತಪಟ್ಟರು.  

ಈ ವಿಷಯ ತಿಳಿಯುತ್ತಿದ್ದಂತೆ, ಇಡೀ ರಾಜ್ಯದ ಜನತೆ ಶಾಕ್ ಆಗಿದ್ದು, ಎಲ್ಲರಿಗೂ ಕಣ್ಣೀರು ಬಂದಿದ್ದಂತೂ ನಿಜ. ದೇವರೇ ಯಾಕಿಷ್ಟು ನೀನು ಕ್ರೂರಿ ಎಂಬ ಮಾತುಗಳು ಕೂಡ ಕೇಳಿಬಂದವು, ಈ ಹೆಣ್ಣುಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ, ಸ್ವರ್ಗಕ್ಕೆ ಇವರೆಲ್ಲರೂ ಹೋಗಿ ಸೇರಲಿ ಎಂದು ಸ್ಮರಿಸಿದರು. ಮತ್ತು ಇದೇ ಅಪಘಾತದಲ್ಲಿ ಬದುಕುಳಿದ ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಗೆಳತಿಯರ ಬಗ್ಗೆ ವಿಚಾರ ಮಾಡುವ ರೀತಿ ನೋಡಿದರೆ ಕರುಳು ಕಿತ್ತು ಬರುವಂತಿದೆ. ಮತ್ತು ಸ್ನೇಹಕ್ಕೆ ಇರುವ ಶಕ್ತಿ ಬಗ್ಗೆಯೂ ಕೂಡ ತಿಳಿಯುತ್ತದೆ.  

ಹೌದು ಆಸ್ಪತ್ರೆ ಸಿಬ್ಬಂದಿಗೆ ಈ ಮಹಿಳೆ,' ನನ್ ಫ್ರೆಂಡ್ಸ್ ಎಲ್ಲಾ ಹೇಗಿದ್ದಾರೆ ಸಾರ್' ಎಂಬುದಾಗಿ ವಿಚಾರಿಸುತ್ತಾಳೆ. ಈ ರೀತಿ ಮಾತುಗಳನ್ನು ಕೇಳಿದ ಕೂಡಲೇ ನೋಡುಗರಿಗೆ ಕಣ್ಣಿರು ತರಿಸುತ್ತಿದೆ, ನೀವು ಕೂಡ ಬಂದು ಬಾರಿ ಮಹಿಳೆ ತನ್ನ ಗೆಳತಿಯರ ಬಗ್ಗೆ ವಿಚಾರಿಸಿದ ವಿಡಿಯೋ ನೋಡಿ, ಹಾಗೇನೇ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ...