ನಿರಂತರ ಅತ್ಯಾಚಾರ ಮಾಡಿದ ಅಣ್ಣತಮ್ಮ..! ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

Updated: Monday, January 11, 2021, 18:54 [IST]

ಸಹೋದರರಿಬ್ಬರ ಲವ್ ಜಿಹಾದ್ ಜೊತೆ ಲವ್-ಸೆ*ಕ್ಸ್ ದೋಖಾಗೆ ಯುವತಿಯೊಬ್ಬಳು ಸಿಲುಕಿದ್ದು, ಮೊದಲು ಅಣ್ಣ, ಬಳಿಕ ತನ್ನ ತಮ್ಮನಿಂದಲೂ ಕೂಡ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಕೇಳಿಬಂದಿದೆ. ಅಣ್ತಮ್ಮರ ಈ ಕೀಚಕ ಕೃತ್ಯಕ್ಕೆ ಬಲಿಯಾಗಿದ್ದು, ಇದೀಗ ನರಕಯಾತನೆ ಅನುಭವಿಸಿದ ಸಂತ್ರಸ್ತೆಯೇ ಈಗ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಹೌದು  ಸಹೋದರರಿಬ್ಬರು ಕೂಡ ಅತ್ಯಾಚಾರ ಮಾಡಿದ್ದಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆಯು ಇವರು ಬಲವಂತ ಮಾಡುತ್ತಿದ್ದಾರೆ, ಎಂದು ಹೇಳಿ 19 ವರ್ಷದ ಯುವತಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ  ದೂರು ಕೊಟ್ಟಿದ್ದಾಳೆ ಎನ್ನಲಾಗಿದೆ.     

Advertisement

ಶಬೀರ್ ಅಹಮದ್ (28) ಹಾಗೂ ಈತನ ತಮ್ಮ ಮೊಹಮದ್ ರಿಲ್ವಾನ್ ಆರೋಪಿಗಳು ಎಂದು ಹೇಳಲಾಗಿದ್ದು, ಶಬೀರ್​ನಿಂದ ಮೋಸಕ್ಕೆ ಒಳಗಾದ ಸಂತ್ರಸ್ತೆ ಬಳಿ ಬಂದ ಮೊಹಮರ್​ ರಿಲ್ವಾನ್. "ನನ್ನ ಅಣ್ಣ ನಿನಗೆ ಮೋಸ ಮಾಡಿದ್ದಾನೆ. ಇನ್ನುಮುಂದೆ, ಆತ ನಿನ್ನ ತಂಟೆಗೆ ಬರಲ್ಲ.." ಎಂದು ಹೇಳಿ, ಆಕೆಯ ವಿಶ್ವಾಸ ಪಡೆದುಕೊಂಡು, ಲವ್ವಿ ಡವ್ವಿ ಶುರು ಮಾಡಿದ. ಅಲ್ಲದೆ, ಸಂತ್ರಸ್ತೆಯನ್ನು ಮದುವೆ ಆಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ತನ್ನ ವರಸೆಯನ್ನೇ ಪೂರ ಬದಲಿಸಿದ್ದಾನೆ ಎನ್ನಲಾಗಿ ಕೇಳಿಬಂದಿದೆ...     

Advertisement

ಅಷ್ಟಕ್ಕೂ ಏನಿದು ಘಟನೆ?: ಸಿ.ಕೆ.ಅಚ್ಚುಕಟ್ಟು ನಿವಾಸಿಯಾಗಿರುವ ಸಂತ್ರಸ್ತ ಯುವತಿ 2018ರಲ್ಲಿ ನಗರದ ಸ್ಪಾವೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಆಗಾಗ ಬರುತ್ತಿದ್ದ ಶಬೀರ್ ಆಕೆಯನ್ನು ಪರಿಚಯಿಸಿಕೊಂಡು, ತಾನು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್​ನ ಮಾಲೀಕನೆಂದು ನಂಬಿಸಿದ್ದ. ನಂತರ ಯುವತಿಯನ್ನು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ಸ್ವಾಗತಕಾರಿಣಿ ನೌಕರಿಗೆ ಸೇರಿಸಿದ್ದ. ಕೆಲ ಸಮಯದ ಬಳಿಕ ಯುವತಿಗೆ ಕರೆ ಮಾಡಿದ ಶಬೀರ್, ಉದ್ಯೋಗದ ವಿಚಾರವಾಗಿ ಮಾತನಾಡಬೇಕು ಎಂದು ಬ್ರಿಗೇಡ್ ರಸ್ತೆಯಲ್ಲಿರುವ ಓಯೋ ಟೌನ್​ಹೌಸ್​ಗೆ ಯುವತಿಯನ್ನು ಕರೆಸಿಕೊಂಡಿದ್ದ.     

Advertisement

ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. 'ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುತ್ತೇನೆ. ನಿನ್ನ ಪಾಲಕರನ್ನು ಬದುಕಲು ಬಿಡಲ್ಲ. ನಿನ್ನ ಮೇಲೆ ಯಾಸಿಡ್ ಹಾಕುವೆ' ಎಂದು ಬೆದರಿಸಿದ್ದ. ಇದೇ ರೀತಿ ಬೆದರಿಸಿ 2019ರವರೆಗೆ ನನ್ನ ಮೇಲೆ ಶಬೀರ್ 4 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಜೊತೆಗೆ ಆತನ ತಮ್ಮನಿಂದಲೂ ಅತ್ಯಾಚಾರ: ನಾನು ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲಿ ಉಸ್ತುವಾರಿ ಆಗಿದ್ದ ಶಬೀರ್​ನ ಸಹೋದರರಾದ ಮೊಹಮದ್ ರಿಲ್ವಾನ್ ಕೂಡ , 2019ರ ಫೆಬ್ರವರಿಯಲ್ಲಿ ನನ್ನ ಬಳಿ ಬಂದು, 'ನಿನಗೆ ನನ್ನ ಅಣ್ಣ ಅನ್ಯಾಯ ಮಾಡಿದ್ದಾನೆ. 

ಆತ ಇನ್ಮುಂದೆ ನಿನ್ನ ತಂಟೆಗೆ ಬರುವುದಿಲ್ಲ ಎಂದು ಆಶ್ವಾಸನೆ ಕೊಟ್ಟು, ಸ್ನೇಹ ಬೆಳೆಸಿಕೊಂಡಿದ್ದ. ಅಲ್ಲದೆ ನನ್ನ ಬಳಿ ಪ್ರೇಮ ನಿವೇದನೆ ಮಾಡಿ ಮದುವೆ ಆಗುವುದಾಗಿ ನಂಬಿಸಿ ಆತನೂ ಹಲವು ಬಾರಿ ಅತ್ಯಾಚಾರ ಎಸಗಿದ. ಪದೇಪದೆ ನನ್ನ ಮನೆಗೆ ಬಂದು ನನ್ನ ಪಾಲಕರ ಬಳಿ ನಯವಾಗಿ ಮಾತನಾಡಿ ವಿಶ್ವಾಸ ಗಿಟ್ಟಿಸಿಕೊಳ್ಳಲೂ ಯತ್ನಿಸಿ, ಹಾಗೂ ನನ್ನನ್ನು ಮದುವೆ ಆಗುವುದಾಗಿ ಹೇಳಿ 1.50 ಲಕ್ಷ ರೂ. ಸಾಲ ಪಡೆದಿದ್ದ. ಪಾಲಕರಿಗೆ ಇಷ್ಟ ಇಲ್ಲದಿದ್ದರೂ ನನ್ನ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿದ್ದರು. ಕಳೆದ ನ.20ರಂದು ಆರ್.ಟಿ.ನಗರದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಅದರಂತೆ 2021ರ ಜ.21ರಂದು ವಿವಾಹ ನಿಶ್ಚಯವಾಗಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ, ಇದೀಗ ಆತ ನಾಪತ್ತೆಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಮತಾಂತರಕ್ಕೆ ಒತ್ತಾಯ: ನೀನು ದುಬೈಗೆ ಬಂದರೆ ನಿನಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದಿದ್ದ ರಿಲ್ವಾನ್, ನನ್ನ ಪಾಸ್​ಪೋರ್ಟ್, ಫೋಟೋಗಳು ಹಾಗೂ ಹಾಳೆಗಳ ಮೇಲೆ ಸಹಿ ಹಾಕಿಸಿಕೊಂಡಿದ್ದ.   

Advertisement
 

ಬಳಿಕ ಏಕಾಏಕಿ, ನೀನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದ. ಸಾಲದ್ದಕ್ಕೆ ನನ್ನ ಹಣೆಯಲ್ಲಿದ್ದ ಕುಂಕುಮವನ್ನು ಬಲವಂತವಾಗಿ ಅಳಿಸಿದ್ದ. ಇಷ್ಟೆಲ್ಲಾ ಆದ ನಂತರ ಇದೀಗ ಆರೋಪಿ ರಿಲ್ವಾನ್, ಮೊಬೈಲ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಪರಿಚಿತರ ಬಳಿ ವಿಚಾರಿಸಿದಾಗ ಆತನಿಗೆ ಕಳೆದ ಸೆ.14ರಂದು ಬೇರೆ ಹುಡುಗಿ ಜತೆ ವಿವಾಹವಾಗಿದೆ ಎಂಬುದು ತಿಳಿದು ಬಂದಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆರೋಪಿ ಶಬೀರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ತಮ್ಮ ಮೊಹಮದ್​ ರಿಲ್ವಾನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ... ಎಂದು ಮಾಧ್ಯಮ ಮೂಲಕ ಈಗಷ್ಟೇ ತಿಳಿದುಬಂದಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...