ತನಗೆ ಮಕ್ಕಳ ಕಳ್ಳಿ ಎಂದವರಿಗೆ ಸರಿಯಾಗಿ ತಿರುಗೇಟು ಕೊಟ್ಟ ಬಿಗ್ ಬಾಸ್ ಮೋಕ್ಷಿತಾ ? ಏನು ಹೇಳಿದ್ದಾರೆ ನೋಡಿ ?

ಮೋಕ್ಷಿತಾ ಪೈ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಒಂದು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅಲ್ಲದೆ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೂಡ ಕೊಟ್ಟಿದ್ದಾರೆ ಹಾಗಾದ್ರೆ ಮೋಕ್ಷಿತಾ ಪೈ ಹೇಳಿದ್ದೇನು ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ತುಂಬಾ ನೆಗೆಟಿವ್ ಆಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು ಇದು ಮೋಕ್ಷಿತ ಅವರ ಕುಟುಂಬಕ್ಕೂ ಕೂಡ ತುಂಬಾ ಬೇಸರವನ್ನ ಉಂಟುಮಾಡಿತ್ತು ಎಲ್ಲರಿಗೂ ಗೊತ್ತಿರುವಂತೆ ಕಳೆದ ವಾರ ಎಲಿಮಿನೇಟ್ ಆಗಿದ್ದ ಧನರಾಜ್ ಅವರು ತಮಗೆ ಬಂದಿದ್ದ ಎಲ್ಲಾ ಹಣವನ್ನು ಕೂಡ ಪುತ್ತೂರಿನ ಆಶ್ರಮ ಒಂದಕ್ಕೆ ದಾನ
ಮಾಡಿದ್ದರು ಇದೀಗ ಮೋಕ್ಷಿತಾ ಪೈ ಕೂಡ ಧನರಾಜ್ ಅವರಂತೆ ಬಿಗ್ ಬಾಸ್ ಮನೆಯಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ತಮ್ಮನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ದಾನ ಮಾಡಿದ್ದಾರೆ ಎರಡು ಲಕ್ಷ ಹಣವನ್ನು ಅಂಗವಿಕಲರ ಆಶ್ರಮಕ್ಕೆ ಮೋಕ್ಷಿತ ಪೈ ದಾನ ಮಾಡಿದ್ದಾರೆ ಇದು ನಿಜವಾಗಿಯೂ ಅವರ ಒಳ್ಳೆತನವನ್ನ ತೋರಿಸುತ್ತೆ ಇನ್ನು ಮೋಕ್ಷಿತಾ ಪೈ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರ ಮೇಲೆ ಇದ್ದ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ ಆ ಕೇಸ್ಗೂ ನನಗೂ ಸಂಬಂಧವಿಲ್ಲ ಆ ಪ್ರಕರಣ ಈಗ ಮುಗಿದುಹೋದ ಅಧ್ಯಾಯ ಎಲ್ಲರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ ಎಲ್ಲರ ಜೀವನದಲ್ಲೂ ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ ನನ್ನ ಜೀವನದಲ್ಲೂ
ಅಂತಹ ಘಟನೆ ನಡೆದಿದೆ ಮತ್ತೊಬ್ಬರ ಹೆಸರು ಹಾಳು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ ಅಂತ ಮೋಕ್ಷಿತ ತಿರುಗೇಟು ಕೊಟ್ಟಿದ್ದಾರೆ ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಎಲ್ಲರೂ ಪಾರ್ಟಿ ಮಾಡಿದರೆ ಮೋಕ್ಷಿತ ಸಿಂಪಲ್ಲಾಗಿ ಒಂದು ಕೇಕ್ ಕಟ್ ಮಾಡಿ ಕುಟುಂಬಸ್ಥರೊಂದಿಗೆ ಕಾಲ ಕಳೆದಿದ್ದಾರೆ ಅಲ್ಲದೆ ಆಶ್ರಮಕ್ಕೆ ತೆರಳಿ ತನ್ನ ತಮ್ಮನ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ದಾನ ಮಾಡಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ ( video redit ; Sandal wood Kannada )