ಪುರುಷರು ತಮಗಿಂತ ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರನ್ನೇ ಯಾಕೆ ಇಷ್ಟಪಡುತ್ತಾರೆ ಗೊತ್ತಾ..?

Updated: Friday, October 16, 2020, 12:32 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, 21ನೇ ಶತಮಾನದಲ್ಲಿ ಸಾಕಷ್ಟು ಯುವಕರು ತಮಗಿಂತ ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ ಎಂಬುದು. ಮತ್ತು ಬಾಳಸಂಗಾತಿ ಮಾಡಿಕೊಳ್ಳಲು ರೆಡಿ ಇರುತ್ತಾರೆ ಎಂಬುದಾಗಿ ಸಂಶೋಧನೆಯಲ್ಲಿ ಕೇಳಿಬಂದಿದೆ. ಇದೇ ಉದ್ದೇಶದಿಂದ ಕೆಲ ಯುವಕರನ್ನು ಪ್ರಶ್ನೆ ಮಾಡಿದ್ದು, ಯಾವ ಕಾರಣಕ್ಕೆ ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರು ಇಷ್ಟವಾಗುತ್ತಾರೆ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಹೌದು ಈ ಯುವಕರು ಹೇಳಿದ ಹಾಗೆ ತಮಗಿಂತ ಮಹಿಳೆಯರಲ್ಲಿ ಹೆಚ್ಚಿನ ವಯಸ್ಸು ಅಂತರವಿದ್ದಲ್ಲಿ, ಮೊದಲನೇಯದಾಗಿ ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರನ್ನು ಮದುವೆಯಾಗಲು ಮತ್ತು ಇಷ್ಟಪಡಲು ಕಾರಣವೇನೆಂದರೆ,  

Advertisement

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ನಿಕ್ ಜೋನಸ್ ವಯಸ್ಸು 26 ಮತ್ತು ಅವನು ಮದುವೆ ಆದ ಪ್ರಿಯಾಂಕ್ ಚೋಪ್ರಾ ವಯಸ್ಸು  36. ಅವನಿಗಿಂತ 10 ವರ್ಷ ದೊಡ್ಡವಳನ್ನು ಮದುವೆ ಆದ .ಬಾಲಿವುಡ್ ತಾರೆಗಳಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಾಲಿವುಡ್‌ನಲ್ಲಿ ಹೆಚ್ಚು ಮಾತನಾಡುವ ದಂಪತಿಗಳಲ್ಲಿ ಒಬ್ಬರು. ಅರ್ಜುನ್ ಕಪೂರ್ ವಯಸ್ಸು 35 ಮತ್ತು ಮಲೈಕಾ ಅರೋರಾ ವಯಸ್ಸು 46 ವರ್ಷ

ಮೊದಲಿಗೆ ,ಇಂಥಹ ಮಹಿಳೆಯರಲ್ಲಿ ಸಾಕಷ್ಟು ಅನುಭವದ ಪ್ರಮಾಣವಿರುತ್ತದಂತೆ, ಮತ್ತು ತುಂಬಾ ಪ್ರಬುದ್ಧಗಳಾಗಿರುತ್ತಾರೆ. ಜೀವನದಲ್ಲಿ ಒಂದು ವೇಳೆ ಇಂತಹ ಮಹಿಳೆಯರನ್ನು ಮದುವೆಯಾದರೆ ತಮ್ಮ ಪಾಲುದಾರರ ಮೇಲೆ ಎಂದಿಗೂ ಅವಲಂಬಿತವಾಗದೆ, ತಾವೇ ತಮ್ಮ ವೃತ್ತಿಯನ್ನು ನೋಡಿಕೊಂಡು ಜೀವನ ನಡೆಸುತ್ತಾರೆ. ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಎರಡನೆಯ ವ್ಯಕ್ತಿ ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರನ್ನು ಇಷ್ಟಪಡುವುದರಿಂದ ತುಂಬಾ ಲಾಭವಿದೆ ಎನ್ನುತ್ತಾರೆ.

Advertisement

 

ಹೌದು ಜೀವನದಲ್ಲಿಎಂಥಹದ್ದೇ ಕಷ್ಟದ ಸಮಸ್ಯೆ ಎದುರಾದರೂ ,ಒಂದು ಬಾರಿ ಸೋತರೂ , ಅದನ್ನು ಅಲ್ಲಿಗೆ ಬಿಡದೆ , ಮರಳಿ ಯತ್ನವ ಮಾಡಿ, ಗೆಲುವು ಸಾಧಿಸುವಲ್ಲಿ ಈ ಮಹಿಳೆಯರು ತುಂಬಾ ಮುಂದಿರುತ್ತಾರಂತೆ ಜೊತೆಗೆ ಬುದ್ಧಿವಂತರಾಗಿರುತ್ತಾರೆ ಎಂದು ಹೇಳಿದ್ದಾರೆ. ಮತ್ತು ಕಿರಿ ವಯಸ್ಸಿನ ಮಹಿಳೆಯರ ಹಾಗೆ ಒಂದು ಸೋಲಿಗೆ ಸುಸ್ತಾಗಿ ಬೀಳುವುದನ್ನು, ಈ ಮಹಿಳೆಯರು ಮಾಡುವುದಿಲ್ಲ. ಒಂದು ವೇಳೆ ತಮ್ಮ ಗಂಡ ಹಿಂಜರಿದರು, ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರು ಯಾವಾಗಲೂ ಪ್ರೋತ್ಸಾಹ ನೀಡಿ ಗೆಲುವಿನ ತುತ್ತತುದಿಗೆ ತಂದು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ ಎಂದು ಯುವಕ ಹೇಳಿದ್ದಾನೆ.ಮತ್ತು ಇನ್ನೊಬ್ಬ ವ್ಯಕ್ತಿ ಹೇಳುತ್ತಾನೆ, ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರಿಗೆ ಸಮಯ ಮತ್ತು ಮೌಲ್ಯದ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಜೊತೆಗೆ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾರೆ. 

Advertisement

ಜೀವನದಲ್ಲಿ ಸಂದರ್ಭಗಳಿಗೆ ತಕ್ಕ ಹಾಗೆ ಜೀವನ ನಡೆಸುತ್ತಾರೆ. ಕಿರಿ ವಯಸ್ಸಿನ ಮಹಿಳೆಯರ ಹಾಗೆ ಮಾಡುವುದಿಲ್ಲ. ತಮ್ಮ ಗಂಡಂದಿರನ್ನು ಎಂದಿಗೂ ಕಷ್ಟಕ್ಕೆ ಸಿಲುಕಿಕೊಳ್ಳದ ಹಾಗೆ ನೋಡಿಕೊಳ್ಳುತ್ತಾರೆ. ತುಂಬಾ ಪ್ರಬಲವಂತರಾಗಿ ಧೈರ್ಯವಂತರಾಗಿರುತ್ತಾರೆ ಎಂದು ಹೇಳಿದ್ದಾರೆ. ಈಗಿನ ಕೆಲ ಹುಡುಗ-ಹುಡುಗಿಯರಿಗೆ ವಯಸ್ಸಿನ ಸಂಖ್ಯೆ ಕೇವಲ ಒಂದು ಸಂಖ್ಯೆಯಷ್ಟೇ, ಪ್ರೀತಿ ಪ್ರೇಮ ಎಂದುಕೊಂಡು ಮೈಮರೆತು ಕಾಮ ಎನ್ನುವ ಬೆಂಕಿಗೆ ಆಹುತಿಯಾಗಿ, ಸಾಕಷ್ಟು ಹುಡುಗಿಯರು ಕೂಡ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ.

ಈ ಮೇಲಿನ ಎಲ್ಲಾ ಪಾಯಿಂಟ್ಗಳನ್ನು ಒಮ್ಮೆ ತೂಕ ಮಾಡಿ ನೋಡಿ,ಯಾಕೆ ಹೆಚ್ಚು ವಯಸ್ಸಿನ ಅಂತರವಿರುವ ಮಹಿಳೆಯರು ಯುವಕರಿಗೆ ಇಷ್ಟವಾಗುತ್ತಾರೆ ಎಂಬುದು ನಿಮಗೂ ಕೂಡ ತಿಳಿಯುತ್ತದೆ.ಮತ್ತು ಮೇಲಿನ ಎಲ್ಲಾ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು....