ಚಾಣಕ್ಯನ ಪ್ರಕಾರ ಇಂಥಹ ಹುಡುಗಿ ಸಿಕ್ಕರೆ ಹಿಂದೆ ಮುಂದೆ ನೋಡದೆ ಮದುವೆಯಾಗಬಹುದಂತೆ..!

Updated: Monday, October 12, 2020, 22:36 [IST]

ಜೀವನದಲ್ಲಿ ಮದುವೆ ಎನ್ನುವುದು ಒಂದು ವಿಶಿಷ್ಟ ಘಟ್ಟ ಎಂದು ಹೇಳಲಾಗುತ್ತದೆ. ಮದುವೆಯಾಗುವ ಯುವತಿ ಹೇಗಿರುತ್ತಾರೋ, ಅವರ ಗುಣ ಎಂತಹದು, ಎಂದು ಸಾಕಷ್ಟು ಯುವಕರು ಈಗಿನ ದಿನಮಾನಗಳಲ್ಲಿ ಯೋಚಿಸುವುದು ಸಹಜ. ಈಗಿನ ಪುರುಷರ ಇಂತಹ ಅನುಮಾನಗಳಿಗೆ ಮತ್ತು ಇವರ ಪ್ರಶ್ನೆಗಳಿಗೆ ಚಾಣಕ್ಯನ ಪ್ರಕಾರ ಉತ್ತರ ಈ ಲೇಖನದ ಮೂಲಕ ಸಿಗಬಹುದು. ಮತ್ತು ಚಾಣಕ್ಯ ಅವರು ಹೇಳುವ ಹಾಗೆ ಎಂತ ಹುಡುಗಿಯನ್ನು ಮದುವೆಯಾದರೆ ಜೀವನ ಸುಖಕರವಾಗಿರುತ್ತದೆ. ಮತ್ತು ಇಂತಹ ಗುಣ ಇರುವ ಹುಡುಗಿ ಸಿಕ್ಕಿದರೆ ಬೇಗನೆ ಮದುವೆಯಾಗಿ ಎಂದು ಹೇಳಿದ್ದಾರೆ..   

Advertisement

ಹೌದು ಮದುವೆಯಾಗುವ ಸ್ತ್ರೀಯರಲ್ಲಿ ಮೊದಲಿಗೆ, ನಿರುದ್ಯೋಗಿಗಳಾಗಿದ್ದು ತಮ್ಮ ಮನೆಯವರ ಬಗ್ಗೆಯೂ ಮತ್ತು ಸಮಾಜದ ಬಗ್ಗೆ ತಿಳುವಳಿಕೆ ಇದ್ದರೆ ಅಂತ ಹುಡುಗಿಯರನ್ನು ಮದುವೆಯಾಗಬಹುದು ಎಂದು ಚಾಣಕ್ಯ ಅವರು ಹೇಳಿದ್ದಾರೆ. ಎರಡನೆಯದಾಗಿ ಹಿರಿಯರಿಗೂ ಮತ್ತು ಕಿರಿಯರಿಗೂ ಸಮಾನವಾದ ಗೌರವ ನೀಡುತ್ತಾರೋ ಅಂತಹವರನ್ನು ಮದುವೆಯಾಗಬಹುದಂತೆ. ಮೂರನೆಯದಾಗಿ ಯಾವ ಸ್ತ್ರೀ ತಮ್ಮ ಮನೆಯವರ ಹಣಕಾಸಿನ ಬಗ್ಗೆ ಯೋಚನೆ ಮಾಡಿ, ಕುಟುಂಬದಲ್ಲಿ ಉಳಿತಾಯ ಮಾಡಿ ,ಆರ್ಥಿಕ ಸಮಸ್ಯೆ ಎದುರಾಗದಂತೆ ಜೀವನ ನಡೆಸುತ್ತಾರೊ ಅಂತ ಹುಡುಗಿಯರನ್ನು ಮದುವೆಯಾಗಬಹುದಂತೆ.

  

Advertisement

ಯಾವ ಸ್ತ್ರೀ ಸಂಸ್ಕೃತಿ ಮತ್ತು ಪಾರಂಪರಿಕ ವೈಶಿಷ್ಟ್ಯ  ಹೊಂದಿರುತ್ತಾರೋ, ಅಂತಹ ಹುಡುಗಿಯರನ್ನು ಮದುವೆಯಾಗಬಹುದು ಎಂದಿದ್ದಾರೆ. ಮತ್ತು ಯಾವ ಸ್ತ್ರೀ ಒಳ್ಳೆಯ ಸಲಹಾಕಾರರಾಗಿರುತ್ತಾರೋ, ಮತ್ತು ಕೆಟ್ಟ ಸಮಯವನ್ನು ಹೇಗೆ ಎದುರಿಸಬೇಕು ಎಂದು ತಿಳಿದುಕೊಂಡಿರುತ್ತಾರೆ ಅಂತ ಹುಡುಗಿಯರನ್ನು ವಿವಾಹವಾಗುವುದು ಸೂಕ್ತ ಎನ್ನುತ್ತಾರೆ ಚಾಣಕ್ಯ. ಜೊತೆಗೆ ಎಲ್ಲಾ ಸಂಬಂಧಗಳಿಗೆ ಬೆಲೆ ಕೊಡುತ್ತಾರೋ ಮತ್ತು ಯಾವ ಸಂಬಂಧಗಳನ್ನು ಕಳೆದುಕೊಳ್ಳದಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಗುಣ ಹೊಂದಿರುತ್ತಾರೋ, ಅಂತ ಸ್ತ್ರೀಯರನ್ನು ವಿವಾಹವಾಗುವುದು ಶ್ರೇಷ್ಠ ಎಂದು ಹೇಳಲಾಗುತ್ತಿದೆ. 

 

Advertisement

ಮತ್ತು ಯಾವ ಹೆಣ್ಣುಮಕ್ಕಳು ಮರ್ಯಾದೆಯಿಂದ ಇರುತ್ತಾರೋ, ಮತ್ತು ಎಂಥಹ ಸಮಯ ಬಂದರೂ ತಮ್ಮ ಪರಿವಾರ ಬಿಟ್ಟುಕೊಡದೆ, ಎಲ್ಲಾ ಸಮಸ್ಯೆಗಳಿಗೆ ಮುಂದೆ ಬಂದು ಬಗೆಹರಿಸುವ ಧೈರ್ಯ ಹೊಂದಿದ  ಹೆಣ್ಣುಮಕ್ಕಳು ನಿಮಗೆ ಸಿಕ್ಕಿದ್ದಲ್ಲಿ ಬೇಗನೆ ಮದುವೆಯಾಗಿ ಎಂದು ಚಾಣಕ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಮೇಲಿನ ಮಾಹಿತಿ ಎಲ್ಲಾ ನಮಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದ್ದು, ಚಾಣಕ್ಯನ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಎಲ್ಲರಿಗೂ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು..