11 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಚಿತೆಯಲ್ಲಿ ಮಲಗಿಬಿಟ್ರು..! ಮನಕಲಕುವಂತಿದೆ ಈ ಜೋಡಿಯ ಕಥೆ.!

Updated: Wednesday, November 11, 2020, 18:57 [IST]

ಹೌದು ಇದೆ ನವೆಂಬರ್ 22 ರಂದು ಕಂಕಣ ಕಟ್ಟಿ, ಧಾರೆ ಎರೆಯಬೇಕಿದ್ದ ಈ ಜೋಡಿಗೆ ಇಂದೇ ಕಂಕಣ ಕಟ್ಟಿದ್ರು. ಅಗ್ನಿ ಕುಂಡದ ಸುತ್ತಾ ಸಪ್ತಪದಿ ತುಳಿಯಬೇಕಿದ್ದ ಜೋಡಿ, ಅಗ್ನಿ ಸ್ಪರ್ಶಕ್ಕೆ ತುತ್ತಾಗುತ್ತಿರೋದನ್ನ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರೀ ವೆಡ್ಡಿಂಗ್ ಮೋಜಿಗೆ ಬಿದ್ದು ಹಸೆ ಮಣೆ ಏರಬೇಕಿದ್ದ, ನವ ವಧು ವರರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮೊನ್ನೆ ತಲಕಾಡಿನ ಜಲಧಾಮ ರೆಸಾರ್ಟ್ ಬಳಿ  ನದಿ ಮಧ್ಯೆ ನಡೆದಿತ್ತು    

ಪ್ರೀ ವೆಡ್ಡಿಂಗೆ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿಕೊಂಡ ಪರಿಣಾಮ, ನವ ವಧು-ವರರಿಬ್ಬರು ಸಾವನ್ನಪ್ಪಿದರು. ಮೈಸೂರಿನ ಕ್ಯಾತಮಾರನಹಳ್ಳಿಯ ಚಂದ್ರು (28)ಮತ್ತು ಶಶಿಕಲಾ (21) ಎಂಬುವವರು ಸಾವನ್ನಪ್ಪಿದ ದುರ್ದೈವಿಗಳು. ಅವರಿಬ್ಬರ ಅಂತ್ಯ ಸಂಸ್ಕಾರಕ್ಕೆ ಜನಸ್ತೋಮವೇ ಹರಿದು ಬಂದಿತ್ತು. ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಇವರಿಗೆ ಹಿಂಗಾಯ್ತಾಲ್ಲ ಅಂತ ಬಂಧುಗಳು, ಸ್ನೇಹಿತರು ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಕಿತ್ತುಬರುವಂತಿತ್ತು.  

Advertisement

ಮೈಸೂರಿನಿಂದ ಫೋಟೋಶೂಟ್‍ಗಾಗಿ ಮುಡುಕುತೊರೆಗೆ ಆಗಮಿಸಿದ್ದ ಜೋಡಿ, ನದಿ ನೋಡಿದ ಮೇಲೆ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು. ಹೀಗಾಗಿ ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಹತ್ತಿದ ಶಶಿಕಲಾ, ಕೆಲಕಾಲ ನಿಂತುಕೊಂಡೇ ಇದ್ದರು. ನಂತರ ಕುಳಿತುಕೊಳ್ಳಲು ಹೋದಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದ್ದು, ತೆಪ್ಪ ಏಕಾಏಕಿ ಮಗುಚಿದೆ. ಪರಿಣಾಮ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ.ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ   

Advertisement

ಕನಸನ್ನ ಸೆರೆಹಿಡಿದಿಟ್ಟುಕೊಳ್ಳಲು ಪ್ರೀ ವೆಡ್ಡಿಂಗ್ ಮೋಜಿಗೆ, ಹೋದ ಈ ಜೋಡಿಗಳು, ಬಾರದ ಲೋಕಕ್ಕೆ ಪಯಣ ಬೆಳೆಸುತ್ತಿರೋದು ದುರಂತ. ಅರಮನೆ ಮುಂಭಾಗ ಕೊನೆಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಲ್ಲಿ ನಿನ್ನ ಕೈ ಬಿಡೋದಿಲ್ಲ ಅಂತ, ಚಂದ್ರು ಅವರು  ಶಶಿಕಲಾ ಅವರ ಕೈ ಹಿಡಿದಿದ್ದಾರೆ,      

ಹೌದು ಈತ ಕೊಟ್ಟ ಮಾತಿನಂತೆಯೇ ಶಶಿಕಲಾರವರ ಕೈ ಬಿಡದೇ ಬಾರದ ಲೋಕಕ್ಕೆ ಹೆಜ್ಜೆ ಹಾಕಿದ್ದಾನೆ. ಈ ಮನಕಲುಕುವ ಇವರ ಸಾವಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು,? ನಮಗೆ ಕಾಮೆಂಟ್ ಮಾಡಿ ತಿಳಿಸಿ,ಜೊತೆಗೆ ಯಾರು ಈ ತರ ತಪ್ಪು ಮಾಡದಿರುವ ಹಾಗೆ ಹೆಚ್ಚಿನ ಮಟ್ಟದಲ್ಲಿ ಶೇರ್ ಮಾಡಿ ಎಲ್ಲರಿಗೂ ಜಾಗೃತಿ ಮೂಡಿಸಿ ಧನ್ಯವಾದಗಳು..