ಸಿಗಂದೂರ್ ದೇವಸ್ಥಾನದಲ್ಲಿ ತಟ್ಟೆ ಕಾಸಿಗೆ ಕಿತ್ತಾಟ..! ಎಲ್ಲೆಡೆ ವಿಡಿಯೋ ವೈರಲ್..! ವಿಡಿಯೋ ನೋಡಿ

Updated: Saturday, October 17, 2020, 11:42 [IST]

ಹೌದು ನಿನ್ನೆಯಿಂದಲೇ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ನಾಡಿನ ಪ್ರಸಿದ್ಧ ದೇವಸ್ಥಾನ ಸಿಗಂದೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಒಂದು ಘಟನೆ ನಡೆದಿದೆ ಎಂದು ಕೇಳಿ ಬಂದಿದ್ದು, ದೇವಸ್ಥಾನದ ಆವರಣದಲ್ಲೇ ಸ್ಥಳೀಯರ ಮೇಲೆ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರ ಸಹೋದರ ಸುಬ್ರಾಯ ಭಟ್ಟರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹೌದು ಶುಕ್ರವಾರ ಬೆಳಗ್ಗೆಯಿಂದಲೇ ಈ ಗಲಾಟೆ ಆರಂಭವಾಗಿದ್ದು ಸಂಜೆ ತನಕ ನಡೆದ ನಂತರ ಪೊಲೀಸರು ಬಂದು ಇವರ ದೃಶ್ಯವನ್ನು ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ, ತದನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಈ ವಿಡಿಯೋ ಎಲ್ಲೆಡೆ ತುಂಬಾ ವೈರಲ್ ಆಗಿದೆ.  

Advertisement

ಅಷ್ಟಕ್ಕೂ ಈ ಪ್ರಕರಣ ಏನು ಗೊತ್ತಾ? ಹೌದು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಮತ್ತು ಅರ್ಚಕ ಶೇಷಗಿರಿ ಭಟ್ ಅವರ ನಡುವೆ ಆಂತರಿಕ ಕಲಹ ಉಂಟಾಗಿದ್ದು, ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಚಂಡಿಕಾಹೋಮ ನಡೆಸಲು ದೇವಸ್ಥಾನ ಮಂಡಳಿಯವರು ಅವಕಾಶ ನೀಡದಿದ್ದ ಕಾರಣಕ್ಕೆ, ಶೇಷಗಿರಿ ಭಟ್ ಅವರ ಕುಟುಂಬ ಮೌನವೃತ ಆರಂಭಿಸಿತ್ತು ಎಂದು ಕೇಳಿಬಂದಿದೆ. ತದನಂತರ ದೇವಸ್ಥಾನದ ಪಕ್ಕದಲ್ಲಿರುವ ಟೀ ಅಂಗಡಿಯ ಮಾಲೀಕ ದೇವಪ್ಪಗೌಡ ಅವರು ದೇವಸ್ಥಾನಕ್ಕೆ ಬಂದು ಸುಮಾರು ಹನ್ನೆರಡುವರೆ ಹೊತ್ತಿಗೆ ಪೂಜೆ ಮಾಡಿಸಲು ಬಂದಿದ್ದು, ಅದೇ ವೇಳೆ ಶೇಷಗಿರಿ ಭಟ್ ಮತ್ತು ದ್ಯಾವಪ್ಪಗೌಡ ಅವರ ನಡುವೆ ಮಾತಿನ ಚಕಮಕಿ ಉಂಟಾಗಿ ಜಗಳಕ್ಕೆ ದಾರಿಮಾಡಿಕೊಟ್ಟಿದೆ ಎಂದು ಕೇಳಿಬಂದಿದೆ.  

Advertisement

ತದನಂತರ ಸುಬ್ರಾಯ ಭಟ್ಟರು, ಮೈಮೇಲೆ ದೇವರು ಬಂದಂತೆ ವರ್ತಿಸಿದ್ದು, ದ್ಯಾವಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇಳಿಬಂದಿದೆ. , ದೇವಸ್ಥಾನದ ಸಿಬ್ಬಂದಿ ಮಹೇಶ್‌, ವಿಮಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಕಚೇರಿ ಕಿಟಕಿ ಗಾಜು ಒಡೆದಿದ್ದಾರೆ. ಈ ಎಲ್ಲಾ ಘಟನೆ ಪೊಲೀಸರ ಎದುರೇ ನಡೆದಿದ್ದು, ಪೊಲೀಸರು ಹಲ್ಲೆ ತಪ್ಪಿಸುವ ಬದಲು ಘಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. , ದೇವಸ್ಥಾನದ ಸಿಬ್ಬಂದಿ ಮಹೇಶ್‌, ವಿಮಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಕಚೇರಿ ಕಿಟಕಿ ಗಾಜು ಒಡೆದಿದ್ದಾರೆ. ಈ ಎಲ್ಲಾ ಘಟನೆ ಪೊಲೀಸರ ಎದುರೇ ನಡೆದಿದ್ದು, ಪೊಲೀಸರು ಹಲ್ಲೆ ತಪ್ಪಿಸುವ ಬದಲು ಘಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.   

Advertisement

ಸದ್ಯ ದ್ಯಾವಪ್ಪಗೌಡ ಅವರು ಮೊದಲೇ ಅಂಗವಿಕಲರಾಗಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನಮಗೆ ಸಿಕ್ಕಿದೆ. ಮತ್ತು ಈ ಘಟನೆಯ ದೃಶ್ಯವನ್ನು ಸೆರೆಹಿಡಿದಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದು, ಸಾಕಷ್ಟು ಜನರ ಆಕ್ರೋಶಕ್ಕೆ ವ್ಯಕ್ತವಾಗಿದೆ. ಮತ್ತು ನವರಾತ್ರಿ ಪೂಜೆ ಸಮಯದಲ್ಲಿ ನಾಡಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಈ ರೀತಿ ನಡೆದದ್ದನ್ನು ನೋಡಿ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯ ವಿಡಿಯೋ ನೀವು ಕೂಡ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ನಮ್ಮ ಕಮೆಂಟ್ ಬಾಕ್ಸ್ ಕಮೆಂಟ್ ಮಾಡಿ ಜೊತೆಗೆ ಶೇರ್ ಮಾಡಿ. ಮತ್ತು ಇನ್ನು ಕೆಲವರು ಈ ಗಲಾಟೆ ತಟ್ಟೆ ಕಾಸಿಗೆ ಈ ನಡೆದದ್ದು ಎಂಬುದಾಗಿ ಕೇಳಿಬರುತ್ತಿವೆ. ಈ ವಿಷಯ ತಿಳಿದ ಬಳಿಕ ಅದು ಕೂಡ ಹೆಚ್ಚು ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಎಂದು ಕೇಳಲಾಗುತ್ತಿದೆ.. 

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”