ಯುವತಿ ಎದುರೇ ಮಹಡಿ ಮೇಲೆ ಪ್ಯಾಂಟ್ ಬಿಚ್ಚಿದ ಯುವಕ..! ಬೆಂಗಳೂರಿನ ಈ ಯುವತಿ ಮಾಡಿದ್ದೇನು ಗೊತ್ತಾ..?

Updated: Thursday, November 12, 2020, 19:40 [IST]

ಮಹಡಿಯ ಟೆರೆಸ್ ಮೇಲೆ ನಿಂತುಕೊಂಡು ಯುವತಿಯ ಕಡೆ ಮುಖ ಮಾಡಿ, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ ಮಾಡಿದ್ದ ಯುವಕನ ವಿರುದ್ಧ ಇಲ್ಲೊಬ್ಬ ಯುವತಿ ದೂರು ನೀಡಿ ಅಸಭ್ಯ ವರ್ತನೆ ತೋರಿದ್ದ ಆರೋಪಿಗೆ ಬುದ್ಧಿ ಕಲಿಸಿರುವುದಾಗಿ ಬೆಂಗಳೂರಿನ ಕೋರಮಂಗಲದಲ್ಲಿ ಘಟನೆಯೊಂದು ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಹೌದು ನವೆಂಬರ್ 8ರಂದು ನಗರದ ನಿವಾಸಿ ನೂಪುರ್ ಸರಸ್ವತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಾದ ,ಇನ್ಸ್ಟಾ ದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಒಂದನ್ನ ಮಾಡಿದ್ದರು. ಜೊತೆಗೆ ಯುವಕನ ಫೋಟೋಗಳನ್ನು ಹಂಚಿಕೊಂಡಿದ್ದರು. ನೂಪುರ್ ಅವರು ಘಟನೆಯ ಬಗ್ಗೆ ಕೆಲ ಮಾಹಿತಿ ಕೊಟ್ಟು ಪೋಸ್ಟ್ ಮಾಡಿದ್ದರು. 

Advertisement

ಹೌದು ಇತ್ತೀಚಿಗೆ ನೂಪರ್ ಅವರು ಅಪಾರ್ಟ್ಮೆಂಟ್ ಒಂದನ್ನು ಬದಲಿಸಿದ್ದು, ಇದನ್ನು ಗಮನಿಸಿದ ಪಕ್ಕದ ಬಿಲ್ಡಿಂಗ್ ಯುವಕನೋಬ್ಬ ಇತ್ತೀಚಿಗಷ್ಟೇ ಮಹಡಿ ಮೇಲೆ ನಿಂತುಕೊಂಡು, ಸುಮಾರು ಒಂದು ಗಂಟೆವರೆಗೆ, ದಿಟ್ಟಿಸಿ ಈಕೆಯನ್ನೇ ನೋಡುತ್ತಿದ್ದರಂತೆ, ಹಾಗಂತ ಇದರ ಬಗ್ಗೆ ಪೋಸ್ಟ್ ಮಾಡಿದ ನೂಪುರ್ ಅವರೆ ಹೇಳಿದ್ದು,ಮುಂದೆ  ಏನ್ ಹೇಳಿದರು ಗೊತ್ತಾ? 'ಯುವಕನ ವರ್ತನೆ ನನಗೆ ಮುಜುಗರ ಉಂಟುಮಾಡಿತ್ತು.

 ಅದೇ ಸಮಯದಲ್ಲಿ ನನಗೆ ಎರಡು ಅಂಶಗಳು ತಲೆಗೆ ಹೊಳೆದವು, ಮೊದಲನೆಯದಾಗಿ ಇದನ್ನು ನೋಡಿ ಸುಮ್ಮನಿರಬಾರದು, ಎರಡನೆಯದು ನಾನು ಇರುವ ಮನೆ ಬಗ್ಗೆ ಮಾಹಿತಿ ಆತನಿಗೆ ದೊರಕಬಹುದಾ ಎಂಬ ಭಯದ ಭಾವನೆ ಉಂಟುಮಾಡಿತು. 
Advertisement

ಆತನ ವರ್ತನೆ ನೋಡಿ, ನಾನು ಬೈದೆ, ಆಗ ಆತ ತನ್ನ ಪ್ಯಾಂಟ್ ಕಳಚಿ, ನನ್ನ ಕಡೆ ನಗೆ ಬೀರಿ ಅಸಹ್ಯವಾಗಿ ನೋಡುತ್ತಿದ್ದ' ಎಂಬುದಾಗಿ ಬರೆದುಕೊಂಡಿದ್ದಾರೆ. ನೂಪುರ್ ಅವರು ತದನಂತರ ' ಆತನ ಅವಸ್ಥೆಯನ್ನು ಫೋಟೋ ಮೂಲಕ ಸೆರೆಹಿಡಿಯುವುದಾಗಿ ಹೆದರಿಸಿದೆ ಆಗ ಆತ ತನ್ನ ಪ್ಯಾಂಟನ್ನು ಹಾಕಿಕೊಂಡು ನನ್ನನ್ನು ನೋಡುತ್ತಾ ನಿಂತಿದ್ದ' ಎಂದು ಬರೆದುಕೊಂಡಿದ್ದಾರೆ.

 ಇದೆಲ್ಲಾ ನಡೆದ ಬಳಿಕ ನೂಪುರ್ ಅವರು ಮನೆಯ ಮಾಲೀಕನಿಗೆ, ಸುತ್ತಮುತ್ತ ಪರಿಚಯ ಆಗಿದ್ದ ಜನರಿಗೆ ಈ ವಿಷಯವನ್ನು ತಿಳಿಸಿದರಂತೆ. ತದನಂತರ ನವೆಂಬರ್ 9 ರಂದು ಪೊಲೀಸರಿಗೆ ಕರೆ ಮಾಡಿ ಕೋರಮಂಗಲದಲ್ಲಿ ಈಕೆ ಈತನ ಅಸಭ್ಯ ವರ್ತನೆಯ ಮಾಹಿತಿ ನೀಡಿದ್ದ್ದಾರೆ. 
Advertisement

ಕಾರ್ಯಪ್ರವೃತ್ತರಾದ ಪೊಲೀಸರು, ಅತ್ತ ವಿವೇಕ್ ನಗರದ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿಯ ಪೊಲೀಸರು ಈತನನ್ನು ಗುರುತಿಸಿ ಬಂಧಿಸಿದ್ದಾರೆ ಎಂದು ಕೇಳಿಬಂದಿದೆ. ಜೊತೆಗೆ ನೂಪುರ್ ಅವರು ಈತನ ವಿರುದ್ಧ ದೂರು ಕೂಡ ನೀಡಿದ್ದಾರೆ ಎಂಬುದಾಗಿ ಮಾಧ್ಯಮ ಮೂಲಕ ಈಗಷ್ಟೇ ತಿಳಿದುಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ ಮತ್ತು ಶೇರ್ ಮಾಡಿ...