ನೈಟಿ ಹಾಕುವ ಮಹಿಳೆಯರು ಮಾತ್ರ ನೋಡಿ..! ಈ ಊರಿನ ವಿಶೇಷತೆ ಹೀಗೂ ಇದೆಯಾ ಅನ್ಸುತ್ತೆ..?

Updated: Sunday, October 11, 2020, 16:57 [IST]

ಹೌದು ಭಾರತ ದೇಶ ಎಂಬುದು ಸ್ವತಂತ್ರ ದೇಶ, ಇಲ್ಲಿ ಯಾರು ಬೇಕಾದರೂ ತಮಗಿಷ್ಟದ ಬಟ್ಟೆಗಳನ್ನು ಧರಿಸಬಹುದು, ಮತ್ತು ಎಂಥಹ ಬಟ್ಟೆಗಳನ್ನ ಹಾಕಿಕೊಂಡರೂ ಯಾರೂ ಕೂಡ ಪ್ರಶ್ನೆ ಮಾಡುವ ಹಕ್ಕಿಲ್ಲ. ಬದಲಿಗೆ ಹೆಣ್ಣುಮಕ್ಕಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಬಟ್ಟೆ ಹಾಕಿಕೊಂಡರೆ,ಆ ರೀತಿ ಮಹಿಳೆಯರು ನಡೆದುಕೊಂಡರೆ, ಮತ್ತು ಗೌರವವಿಲ್ಲದೆ ಅಸಹ್ಯವಾಗಿ ಬಟ್ಟೆಗಳನ್ನು ಧರಿಸಿ ಅಸಭ್ಯವರ್ತನೆ ಮಾಡಿದರೆ, ಅವರ ವಿರುದ್ಧ ತಿರುಗಿ ಬೀಳುವುದು ಮಾಮೂಲಿ ಇದೆ.  

Advertisement

ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಈಗ ಇನ್ನೊಂದು ಹೊಸ ವಿಷಯ ತಿಳಿದುಬಂದಿದ್ದು, ಈ ಮಾಹಿತಿಯನ್ನು ನೈಟಿ ಹಾಕುವ ಮಹಿಳೆಯರು ತಪ್ಪದೆ ಕೊನೆಯವರೆಗೂ ಓದಿ ತದನಂತರ ನಿಮ್ಮ ಅನಿಸಿಕೆ ನಮಗೆ ತಿಳಿಸಿ. ಹೌದು ಆಂಧ್ರಪ್ರದೇಶದ ,ಪಶ್ಚಿಮ ಗೋದಾವರಿ ಜಿಲ್ಲೆಯ, ತೋಕಲಪಲ್ಲಿ ಎನ್ನುವ ಗ್ರಾಮದ ಮಹಿಳೆಯರು ನೈಟಿಗಳನ್ನು ಹಾಕಿಕೊಂಡು ರಸ್ತೆಗೆ ಬರಬಾರದಂತೆ, ಮತ್ತು ಮನೆಯಿಂದ ಹೊರಬಂದು ನೈಟಿ ಹಾಕಿಕೊಂಡು ತಿರುಗಾಡಿದರೆ ಅವರಿಗೆ ಎಂತಹ ಶಿಕ್ಷೆ ಕೊಡುತ್ತಾರೆ ಗೊತ್ತಾ ಈ ಗ್ರಾಮದವರು.  

Advertisement

ಹೌದು ಈ ಊರಿನ ಹೆಂಗಸರು ಕೇವಲ ರಾತ್ರಿ ಸಮಯದಲ್ಲಿ ನೈಟಿಗಳನ್ನು ಮನೆಯಲ್ಲಿದ್ದಾಗ ಮಾತ್ರ ಹಾಕಿಕೊಂಡು, ತದನಂತರ ಬೆಳಗಿನ ಜಾವದ ಸಮಯದಲ್ಲಿ ನೈಟಿಗಳಲ್ಲಿ ಕಾಣಿಸಿಕೊಳ್ಳದಿರುವ ಹಾಗಿರಬೇಕಂತೆ. ಇದು ಈ ಊರಿನ ನಿಯಮ ಎಂದು ಕೇಳಿಬಂದಿದೆ. ಹೌದು ಇಲ್ಲಿಯ ಗ್ರಾಮಸ್ಥರು ಈ ಹೊಸ ನಿಯಮವನ್ನು ಜಾರಿಗೆ ಮಾಡಿದ್ದು, ಗ್ರಾಮದ ಅಭಿವೃದ್ಧಿಗಾಗಿ ಈ ರೀತಿ ಜಾರಿಗೊಳಿಸಿದ್ದಾರೆ ಎಂದು ಕೇಳಿಬಂದಿದೆ. ಮತ್ತು ನೈಟಿ ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಕಂಡುಬಂದ ಮಹಿಳೆಯರಿಗೆ 2000 ರೂಪಾಯಿ ದಂಡ ಕೂಡ ವಿಧಿಸುತ್ತಾರಂತೆ.  

Advertisement

 ಮತ್ತು ಈ ವಿಷಯ ತಿಳಿಸಿದವರಿಗೆ ಒಂದು ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೂ ಮೂರು ಬಾರಿ ಇದೇ ರೀತಿ ತಪ್ಪು ಮಾಡಿ ದಂಡ ವಿಧಿಸಿಕೊಂಡ ಮಹಿಳೆಯರಿಗೆ ಊರಿಂದ ಬಹಿಷ್ಕಾರ ಕೂಡ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಹಾಗಾಗಿ ಒಂದು ಬಾರಿ ತಪ್ಪುಮಾಡಿ ಸಿಕ್ಕಿಬಿದ್ದವರು ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ನಿಯಮಗಳನ್ನು ಮುರಿಯುವುದಿಲ್ಲ ಎಂದು ಊರಿನ ಗ್ರಾಮಸ್ಥರು ವಿಷಯ ಹಂಚಿಕೊಂಡಿದ್ದಾರಂತೆ. ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.ನೈಟಿ ಹಾಕಿಕೊಳ್ಳುವ ಹೆಂಗಸರು ಇದು ಸರಿನಾ ತಪ್ಪಾ ಎಂದು ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು..