ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ 2 ಮಾತು ಮರೆಯಬೇಡಿ? ನೋಡಿ

ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ 2 ಮಾತು ಮರೆಯಬೇಡಿ? ನೋಡಿ

ಈ ಭೂಮಿಯ ಮೇಲೆ ಮನುಷ್ಯರು ಪುಣ್ಯದ ಕೆಲಸಗಳ ಜೊತೆಗೆ ಪಾಪದ ಕೆಲಸಗಳನ್ನು ಸಹ ಮಾಡಿದ್ದಾರೆ. ಅವರು ಮಾಡಿದ ಕೆಲಸಗಳಿಗೆ ತಕ್ಕ ಫಲ ಅವರಿಗೆ ಇಲ್ಲೇ ಸಿಗುತ್ತದೆ. ನಾವು ನಮ್ಮ ಜೀವನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುತ್ತೇವೆ, ನಾವು ಮಾಡಿದ ಒಳ್ಳೆ ಕೆಲಸಗಳಿಗೆ ಒಳ್ಳೆಯ ಪ್ರತಿಫಲ ಸಿಕ್ಕರೆ, ಇನ್ನು ನಾವು ಬೇರೆಯವರಿಗೆ ಕೆಟ್ಟದ್ದು ಮಾಡಿದ್ದಾರೆ ಇನ್ನು ಅದಕ್ಕೆ ತಕ್ಕ ಪ್ರತಿಫಲ ಸಹ ನಮಗೆ ಸಿಕ್ಕೇ ಸಿಗುತ್ತದೆ. ಒಬ್ಬರು ನನ್ನನ್ನು ತುಂಬಾ ನಂಬಿ ಅವರಿಗೆ ನಾವು ಮೋಸ ಮಾಡಿ ಅವರ ನಂಬಿಕೆಗೆ ದ್ರೋಹವಾಗಿದ್ದರೆ ಒಂದಲ್ಲ ಒಂದು ದಿನ ನನಗೂ ಸಹ ಇದೇ ರೀತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.


ಕೆಲವರು ಬಾಯಿಬಿಟ್ಟರೆ ಸುಳ್ಳುಗಳನ್ನು ಹೇಳುತ್ತಾರೆ ಈ ರೀತಿ ಸುಳ್ಳುಗಳ ಸಾಮ್ರಾಜ್ಯ ಕಟ್ಟಿದರು ಸಹ ಅದು ತುಂಬಾ ದಿನಗಳ ಕಾಲ ಉಳಿಯುವುದಿಲ್ಲ. ಏಕೆಂದರೆ ಸತ್ಯಕ್ಕೆ ಇರುವ ಶಕ್ತಿ ಸುಳ್ಳಿಗೆ ಇಲ್ಲ ಸತ್ಯ ಒಂದಲ್ಲ ಒಂದು ರೀತಿ ತನ್ನ ದಾರಿಯನ್ನು ಹುಡುಕುತ್ತದೆ. ಹಾಗೆ ಸತ್ಯ ಎಲ್ಲರ ಮುಂದೆ ಒಂದಲ್ಲ ಒಂದು ದಿನ ಬಯಲಾಗುತ್ತದೆ. ನಾವು ಬೇರೊಬ್ಬರಿಗೆ ಕೇಳು ಬಯಸಿದರೆ ಇನ್ನೊಬ್ಬರು ನಮಗೆ ಕೇಳು ಬಯಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೌದು ನಮ್ಮ ಸುತ್ತಮುತ್ತಲಿರುವ ಜನರು ಸಹ ಚೆನ್ನಾಗಿ ಬಾಳಿ ಬದುಕಲಿ ಎಂದು ನಾನು ಬಯಸಿದರೆ ಒಂದಲ್ಲ ಒಂದು ದಿನ ನಮ್ಮ ಒಳ್ಳೆಯತನಕ್ಕೆ ಆ ದೇವರು ಫಲ ಕೊಡುತ್ತಾನೆ.    


ಇನ್ನು ಉತ್ತಮವಾದ ಜೀವನವನ್ನು ನಡೆಸಲು ಚಾಣಕ್ಯ ನೀತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಯಾವುದೇ ತೊಂದರೆ ಇಲ್ಲದೆ ಅದ್ಭುತವಾದ ಹಾಗೆ ಸಂತೋಷವಾದ ಜೀವನವನ್ನು ನಮದಾಗಿಸಿಕೊಳ್ಳಬಹುದು. ಚಾಣಕ್ಯನ ಆ ಎರಡು ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ, ನಮ್ಮ ಜೀವನ ಬಹಳ ಅದ್ಭುತವಾಗಿರುತ್ತದೆ.


ಸುಳ್ಳು ಹೇಳಿ ಸಂಬಂಧವನ್ನು ಕೆಡಿಸಿಕೊಳ್ಳುವ ಬದಲು ನಿಜ ಹೇಳಿ ತಿಳಿಸಬೇಕು. ಏಕೆಂದರೆ ಸತ್ಯ ಒಂದಲ್ಲ ಒಂದು ದಿನ ಎಲ್ಲರ ಮುಂದೆ ಬಂದೆ ಬರುತ್ತದೆ. ಸಹಾಯ ಮಾಡಿ ಅದು ಯಾವ ಲಾಭದ ಯೋಜನೆ ಇಲ್ಲದೆ. ಹೊಂದಿಕೊಂಡು ಬಾಳಿರಿ ಅದು ಯಾವ ಅನುಮಾನ ಇಲ್ಲದೆ. ಜೀವನ ನಡೆಸುವುದನ್ನು ಕಲಿಯಿರಿ ಅದು ಯಾವ ಅಹಂಕಾರ ಇಲ್ಲದೆ.

ಜೀವನದಲ್ಲಿ ಮುಂದೆ ಬರುವ ವ್ಯಕ್ತಿ ಯಾರಿಗೂ ಹಾನಿ ಮಾಡಲು ಬಯಸುವುದಿಲ್ಲ. ಮತ್ತು ಬೇರೊಬ್ಬರಿಗೆ ಕೆಟ್ಟದ್ದು ಬಯಸುವ ವ್ಯಕ್ತಿ ಯಾವತ್ತು ದೊಡ್ಡವನಾಗುವುದಿಲ್ಲ ಹಾಗೆ ಮುಂದೆ ಬರುವುದಿಲ್ಲ. ಚಾಣಕ್ಯನ ಈ ಮಾತುಗಳನ್ನು ನೆನಪಲ್ಲಿ ಇಟ್ಟುಕೊಂಡು ಜೀವನ ನಡೆಸಿದರೆ ನಮ್ಮ ಜೀವನ ಸುಖಮಯವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.