ಮದುವೆ ಅದ ಮೇಲೆ ನಿಮ್ಮ ಹೆಂಡತಿಯನ್ನು ಹೀಗೆ ನೋಡಿಕೊಂಡರೆ ನಿಮ್ಮ ಬಾಳು ಹಾಲು ಜೇನಿನಂತೆ ಇರುತ್ತೆ

1. ಹೆಣ್ಣನ್ನೂ ಮೊದಲು ಗೌರವಿಸಿ.
2.ಅವಳ ನೋವಿಗೆ ಸ್ಪಂದಿಸಿ.
3.ಹೆಣ್ಣು ಕೇವಲ ಮನೆಯಲ್ಲಿ ಇರುವವಳು,ಕೆಲಸ,ಮಕ್ಕಳು ಎಂದು ಅಸಡ್ಡೆ ತೋರದೆ, ಅವಳಿಗೂ ಒಂದು ಮನಸಿದೆ ಎಂದು ತಿಳಿದು ಅವಳೊಂದಿಗೆ ಖುಷಿಯಾಗಿ ಸಹಾಯಹಸ್ತ ವಾಗಿ ಜೊತೆಗಿರಿ,ಅಥವಾ ಒಂದೆರಡು ನಗುವಿನ ಮಾತುಗಳನ್ನು ಆಡಿದ್ದಾರೆ ಅಷ್ಟೆ ಸಾಕು.
3.ತವರು ಮನೆಯ ನೆನಪು ಬಾರದಂತೆ ನೋಡಿಕೊಳ್ಳಿ.
4.ಮದುವೆ ಆದಮೇಲೆ ಗಂಡನೇ ಎಲ್ಲಾ ಹಾಗಾಗಿ ಎಷ್ಟೆ busy ಇದ್ದರೂ ಸ್ವಲ್ಪ ಸಮಯ ಅವಳಿಗೂ ಕೊಡಿ.
5. ಯಾರ ಮುಂದೆಯೂ ಹೆಂಡತಿಯನ್ನು ಕೀಳಾಗಿ ನೋಡುವುದು, ಅಥವಾ ಬೈಯುದು ,ಹೊಡೆಯುವುದು,ತೆಗಳುವುದು ಮಾಡಬೇಡಿ.
6.ನಿಮ್ಮಿಬ್ಬರ ಜಗಳವೆನ್ನಿದರು ನಿಮ್ಮ ಮಧ್ಯ ಇರಲಿ.ಯಾರೊಂದಿಗೂ ಹಂಚಿಕೊಳ್ಳಬೇಡಿ.
7.ನಿಮ್ ಸಮಸ್ಯೆಗೆ ಮೂರನೇ ವ್ಯಕ್ತಿ ಬಾರದಂತೆ ನೋಡಿಕೊಳ್ಳಿ.
8. ಯಾರ ಮುಂದೇನು ಹೆಂಡತಿಯನ್ನು ಬಿಟ್ಟುಕೊಡ ಬೇಡಿ..
9.ಯಾವುದೇ ವಿಷಯವನ್ನು ಸಮಾದಾನವಾಗಿ ತಿಳಿಹೇಳಿ ,ಯಾಕೆಂದರೆ ನೀವು ಹಾಗೂ ನಿಮ್ಮ ಮನೆಯವರು ಎಲ್ಲರೂ ಅವಳಿಗೆ ಹೊಸಬರು ಹಾಗಾಗಿ ಎಲ್ಲಾವನ್ನು ತಿಳಿಹೇಳಿ.
10.ಹೆಣ್ಣು ಬರಿ ಭೋಗದ ವಸ್ತುವಲ್ಲ ಎನ್ನುವುದು ಮೊದಲು ಮನದಟ್ಟು ಮಾಡಿಕೊಳ್ಳಿ .
11.ನಿಮ್ಮ ಎಲ್ಲಾ ನಿರ್ಧಾರಗಳಿಗೆ ನಿಮ್ಮ ಹೆಂಡತಿಯ ಅಭಿಪ್ರಾಯ ತಿಳಿದುಕೊಳ್ಳಿ.
12.ಹಾಗೂ ಹಣ, ವ್ಯವಹಾರ ,ಮನೆ ,ಮಕ್ಕಳು ,ತಪ್ಪು ,ಸರಿ ,ಯಾವುದೇ ನಿರ್ಧಾರದಲ್ಲೂ ಹೆಂಡತಿಯನ್ನು ಕಡೆಗಣಿಸಬೇಡಿ.
13 . ಈ ಕೊನೆಯ ಮಾತು ನೆನಪಲ್ಲಿ ಇಡೀ "ಗಂಡು ಎನ್ನುವ ಗರ್ವ,ಹಾಗೂ ದರ್ಪ ಇದೆರಡನ್ನು ಬದಿಗೊತ್ತಿ . ಪ್ರೀತಿಯಿಂದ ಹೆಣ್ಣಿನ ಮನ ಗೆಲ್ಲಬೇಕು.
ಹೆಣ್ಣು ಬಯಸುವುದು ಪ್ರೀತಿ,ಕರುಣೆ,ಅಕ್ಕರೆ,ಹಾಗೂ ಕಾಳಜಿ.
ಹಾಗಾಗಿ ಹೆಂಡತಿಯಾದವಳು ಗುಲಾಮಳಲ್ಲ ಎಂದು ಅರ್ಥೈಸಿಕೊಂಡು ನೋಡಿಕೊಳ್ಳಿ.
ಹೆಣ್ಣು ನಮ್ಮನೆಲ್ಲ ಪೋಷಿಸುವವಳು,ಅವಳನ್ನು ಶೋಷಿಸಬೇಡಿ❤️????