ನಿಜವಾದ ಪ್ರೀತಿಯ ಆರು ಲಕ್ಷಣಗಳು !! ಇದು ನಿಮ್ಮಲ್ಲಿ ಇದೆಯಾ ?
ನಿಜವಾದ ಪ್ರೀತಿಯ ಆರು ಗುರುತುಗಳು
ಪ್ರೀತಿ ಎಂದರೆ ಅದು ತುಂಬಾ ಪವಿತ್ರವಾದ ಭಾವನೆ. ನಿಜವಾದ ಪ್ರೀತಿ ಪಡೆಯುವುದು ಸುಲಭವಲ್ಲ. ಬರೀ ಬಾಡಿ ಫಿಗರ್, ರೊಮ್ಯಾಂಟಿಕ್ ಮಾತುಗಳು ಅಥವಾ ಪಾರ್ಟ್ನರ್ ಜೊತೆ ಸೆಕ್ಸ್ ಮಾಡುವುದು, ಅವರನ್ನು ಟಚ್ ಮಾಡುವುದು ಇವೆಲ್ಲ ಕ್ಷಣಿಕ. ಇಂದಿನ ಕಾಲದಲ್ಲಿ ಕಾಮದ ಆಸೆ, ಕಾಮದ ಹಸಿವನ್ನೇ ಪ್ರೀತಿ ಎಂದು ಅಂದುಕೊಳ್ಳುತ್ತಾರೆ. ಆದರೆ ನಿಜವಾದ ಪ್ರೀತಿಯಲ್ಲಿ ಅವರ ಒಂದು ಧ್ವನಿ ಕೇಳಿದರೂ ಅಂತರಂಗಕ್ಕೆ ತೃಪ್ತಿ ಸಿಗುತ್ತದೆ.
ನಿಜವಾದ ಪ್ರೀತಿ ಮಾಡುವವರು ಫೈವ್ ಸ್ಟಾರ್ ಹೋಟೆಲ್ಗೆ ಹೋಗಿ ಊಟ ಮಾಡಬೇಕು, ಬೆಲೆಬಾಳುವ ಗಿಫ್ಟ್ ಕೊಡಬೇಕು ಅಂತೇನೂ ಬಯಸುವುದಿಲ್ಲ. ಒಂದು ಚಹಾ ಅಂಗಡಿಯಲ್ಲಿ ಇಬ್ಬರು ಜೊತೆಯಾಗಿ ನಗುನಗುತ್ತಾ ಚಹಾ ಕುಡಿದರೂ ಅವರಿಗೆ ಸ್ವರ್ಗದ ಅನುಭವವಾಗುತ್ತದೆ. ನಿಜವಾದ ಪ್ರೀತಿಯಲ್ಲಿ ನೀವು ಪ್ರೀತಿಸಿದ ವ್ಯಕ್ತಿ ನಿಮ್ಮ ಹಣೆಬರಹದಲ್ಲಿ ಇಲ್ಲ, ಎಂದಿಗೂ ಸಿಗುವುದಿಲ್ಲ ಎಂಬುದನ್ನು ತಿಳಿದಿದ್ದರೂ ಜೀವನ ಪೂರ್ತಿ ಅವರನ್ನು ಪ್ರೀತಿಸುತ್ತಲೇ ಇರುತ್ತೀರಿ.
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡುವುದಕ್ಕೆ ಸಾಧ್ಯ. ಸಿಗುವುದಿಲ್ಲ ಎಂದು ಗೊತ್ತಿದ್ದರೂ ನಾವು ಅದನ್ನೇ ಇಷ್ಟಪಡುತ್ತೇವೆ. ಸಿಗುವ ನೂರು ವಸ್ತುಗಳಿಗಿಂತ ಸಿಗದೆ ಇರುವ ಒಂದು ವಸ್ತು ಮಾತ್ರ ಮನಸ್ಸನ್ನು ಗೆಲ್ಲುತ್ತದೆ. ನೀವು ಎಷ್ಟು ಹೆಚ್ಚು ಪ್ರೀತಿಸುತ್ತೀರೋ ಅಷ್ಟು ಹೆಚ್ಚು ಅಳುತ್ತೀರಿ. ನಿಜವಾದ ಪ್ರೀತಿ ಪ್ರತಿದಿನ ಹೆಚ್ಚಾಗುತ್ತದೆ, ಕಡಿಮೆಯಾಗುವುದಿಲ್ಲ. ನಿಜವಾದ ಪ್ರೀತಿಯಾಗಿದ್ದರೆ ಸದಾ ಅವರ ಖುಷಿಯನ್ನು ಬಯಸುತ್ತೀರಿ, ನಿಮ್ಮ ಆಸೆ ಕನಸುಗಳನ್ನು ಮರೆತು ಅವರಿಗೆ ಪ್ರಾಮುಖ್ಯತೆಯನ್ನು ನೀಡುತ್ತೀರಿ.
ಪ್ರೀತಿಯಲ್ಲಿ ಕೆಲವೊಮ್ಮೆ ಜಗಳ, ಮನಸ್ತಾಪ ಇರುತ್ತದೆ. ಆದರೆ ನಿಜವಾದ ಪ್ರೀತಿ ಮಾಡುವವರು ನಿಮ್ಮ ನೂರು ತಪ್ಪುಗಳನ್ನು ಕ್ಷಮಿಸಿ ನಿಮ್ಮ ಜೊತೆ ಜೀವನ ಸಾಗಿಸಲು ಬಯಸುತ್ತಾರೆ. ನಕಲಿ ಪ್ರೀತಿಯಲ್ಲಿ ಮಾತ್ರ ದೂರ ಹೋಗಲು ಕಾರಣಗಳನ್ನು ಹುಡುಕುತ್ತಾರೆ. ನಿಜವಾದ ಪ್ರೀತಿಯಲ್ಲಿ ಹೊಂದಾಣಿಕೆ, ತ್ಯಾಗ, ಕಾಳಜಿ ಇರುತ್ತದೆ. ಅವರು ನಿಮ್ಮ ಖುಷಿಗೆ ಆದ್ಯತೆ ನೀಡುತ್ತಾರೆ.
ನಿಜವಾದ ಪ್ರೀತಿ ಮಾಡುವವರು ನಿಮ್ಮನ್ನು ಗೌರವಿಸುತ್ತಾರೆ, ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಸುಳ್ಳು ಪ್ರೀತಿಯಲ್ಲಿ ಮಾತ್ರ ನಿಮ್ಮನ್ನು ಗೌರವಿಸುವುದಿಲ್ಲ, ನಿಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ನಿಜವಾದ ಪ್ರೀತಿಯಲ್ಲಿ ಪರಸ್ಪರ ಕಾಳಜಿ ಇರುತ್ತದೆ. ತಾನು ಪ್ರೀತಿಸುವ ವ್ಯಕ್ತಿಗೆ ಏನಾದರೂ ತೊಂದರೆಯಾಗಬಹುದೆಂಬ ಭಯ ಇರುತ್ತದೆ. ಸುಳ್ಳು ಪ್ರೀತಿಯಲ್ಲಿ ಕಾಳಜಿ ಇಲ್ಲ, ಕೇವಲ ಹಾಸಿಗೆಗಾಗಿ ನಿಮ್ಮ ಜೊತೆ ಇರುತ್ತಾರೆ.
ನಿಜವಾದ ಪ್ರೀತಿ ಮಾಡುವವರು ತಮ್ಮ ಸಂಗಾತಿಯನ್ನು ಚೀಟ್ ಮಾಡುವುದಿಲ್ಲ. ಅವರು ತಮ್ಮ ಪ್ರೀತಿಸಿದ ವ್ಯಕ್ತಿಯ ಜೊತೆ ಮಾತ್ರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರೀತಿ ಎಂಬುದು ಚಿಕ್ಕ ಪದವಾಗಿದ್ದರೂ ಅದನ್ನು ಪಡೆದವರು ದೃಷ್ಟವಂತರು. ಪ್ರೀತಿಯಲ್ಲಿ ಗೆದ್ದರೆ ಅವರು ಉಳಿಯುತ್ತಾರೆ, ಸೋತರೆ ಬದುಕಿದ್ದರೂ ಇಲ್ಲದಂತೆ ಬದುಕುತ್ತಾರೆ.
ಪ್ರೀತಿಯಲ್ಲಿ ಸೋತವರು ಸಹ ತಮ್ಮ ಪ್ರೀತಿಯನ್ನು ಮುಂದುವರಿಸುತ್ತಾರೆ. ನಿಜವಾದ ಪ್ರೀತಿಯಲ್ಲಿರುವವರಿಗೆ ಈ ಜಗತ್ತು ಸುಂದರವಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿ ಸೋತವರಿಗೆ ಅದೇ ಸುಂದರವಾದ ಜಗತ್ತು ಶೂನ್ಯವಾಗಿ ಕಾಣುತ್ತದೆ.




