ಹೆಂಡತಿ ಇತರನು ಕೆಲಸನು ಮಾಡ್ತಾರಾ!! ಹಾಟ್ ವೈ ಫಿಂಗ್ ಅಂದರೇನು?

ಇತ್ತೀಚೆಗೆ ಭಾರತದಲ್ಲಿ 'ಹಾಟ್ವೈಫಿಂಗ್' ಎಂಬ ಹೊಸ ಸಂಬಂಧದ ಸಂಸ್ಕೃತಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಸಂಸ್ಕೃತಿಯ ಅರ್ಥವೆಂದರೆ – ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಒಪ್ಪಿಗೆಯೊಂದಿಗೆ ಇತರ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದುವುದು. ಇದು ಪತಿ–ಪತ್ನಿಯ ಪರಸ್ಪರ ಒಪ್ಪಿಗೆಯೊಂದಿಗೆ ನಡೆಯುವ ಸಂಬಂಧವಾಗಿದ್ದು, ಕೆಲವೊಮ್ಮೆ ಪತಿಗಳು ಈ ಸಂಬಂಧದಲ್ಲಿ ನೇರವಾಗಿ ಭಾಗವಹಿಸುವುದೂ ಕಂಡುಬರುತ್ತದೆ.
ಹಾಟ್ವೈಫಿಂಗ್ ಸಂಸ್ಕೃತಿ ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಪ್ರಸಾರದಲ್ಲಿದ್ದು, ಇದೀಗ ಭಾರತದ ಮೆಟ್ರೋ ನಗರಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಈ ಸಂಬಂಧದ ಮಾದರಿಯನ್ನು ಕೆಲವರು ವೈವಾಹಿಕ ಜೀವನದಲ್ಲಿ ಹೊಸತನ, ನಂಬಿಕೆ ಮತ್ತು ಲೈಂಗಿಕ ಉತ್ಸಾಹ ಹೆಚ್ಚಿಸಲು ಅನುಸರಿಸುತ್ತಿದ್ದಾರೆ. ಆದರೆ, ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಕುಟುಂಬ ಮೌಲ್ಯಗಳಿಗೆ ಧಕ್ಕೆಯೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಈ ಸಂಸ್ಕೃತಿಯ ಪ್ರಮುಖ ಅಂಶವೆಂದರೆ – ಪರಸ್ಪರ ಒಪ್ಪಿಗೆ. ಯಾವುದೇ ವ್ಯಕ್ತಿಯು ಬಲವಂತದಿಂದ ಅಥವಾ ಮೋಸದಿಂದ ಈ ಸಂಬಂಧಕ್ಕೆ ಒಳಗಾಗಬಾರದು. ತಜ್ಞರ ಅಭಿಪ್ರಾಯದಂತೆ, ಈ ರೀತಿಯ ಸಂಬಂಧಗಳು ನಂಬಿಕೆ ಮತ್ತು ಸ್ಪಷ್ಟ ಸಂವಹನದ ಮೇಲೆ ಆಧಾರಿತವಾಗಿರಬೇಕು. ಆದರೆ, ಈ ಸಂಸ್ಕೃತಿಯ ಪರಿಣಾಮವಾಗಿ ಸಂಬಂಧಗಳಲ್ಲಿ ಅಸ್ಥಿರತೆ, ಅಸಹನೆ ಮತ್ತು ಭಾವನಾತ್ಮಕ ತೊಂದರೆಗಳು ಉಂಟಾಗುವ ಸಾಧ್ಯತೆಗಳೂ ಇವೆ.
ಭಾರತದಲ್ಲಿ ಮದುವೆ ಮತ್ತು ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿರುವುದರಿಂದ, ಹಾಟ್ವೈಫಿಂಗ್ ಸಂಸ್ಕೃತಿಯ ಬೆಳವಣಿಗೆಗೆ ವಿರೋಧವೂ ಹೆಚ್ಚುತ್ತಿದೆ. ಕೆಲವರು ಇದನ್ನು ವೈಯಕ್ತಿಕ ಆಯ್ಕೆ ಎಂದು ಪರಿಗಣಿಸಿದರೆ, ಇತರರು ಇದನ್ನು ನೈತಿಕವಾಗಿ ತಪ್ಪು ಎಂದು ತಿರಸ್ಕರಿಸುತ್ತಿದ್ದಾರೆ. ಈ ಸಂಸ್ಕೃತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಿಳಿಯಲು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿವೆ.