ಹೆಂಡತಿ ತಾಯಿಯನ್ನು ಹೊರಗೆ ಹಾಕಲು ಹೇಳಿದಾಗ ಹೆಂಡತಿ ಮತ್ತು ತಾಯಿ ಇಬ್ಬರ ಮೇಲು ಪ್ರೀತಿ ಇರುವ ಗಂಡಸು ಏನು ಮಾಡಬೇಕು?

ಮುತ್ತು ಕೊಟ್ಟೋಳು ಬಂದಾಗ ತುತ್ತು ಕೊಟ್ಟವಳನ್ನ ಮರಿಬೇಡ, ಅನ್ನೋ ಹಾಡು ಕೇಳಿದ್ದೇವೆ.
ಹೆಂಡತಿ ನಿಮ್ಮ ತಾಯಿಯ ವಿರುದ್ಧ ತಿರುಗಿ ನಿಂತರೆ, ನೀವು ಹೆಂಡತಿ ಪರವಾಗಿಯೂ ಮಾತನಾಡಲು ಸಾಧ್ಯವಿಲ್ಲ, ಕೊನೆಗೆ ತಾಯಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ.
ನಿಮಗೆ ಸಾಧ್ಯವಾದರೆ, ನಿಮ್ಮ ತಂದೆ ತಾಯಿಯರನ್ನು ಒಂದು ಮನೆಯಲ್ಲಿ, ಹಾಗೂ ನೀವು ನಿಮ್ಮ ಮನೆಯವರು ಬೇರೆ ಮನೆಯಲ್ಲಿ ಇರಬಹುದು.
ನಿಮ್ಮ ತಂದೆ ತಾಯಿ ಅವರಿಗೆ ಊಟ, ವೆಚ್ಚಗಳ ವ್ಯವಸ್ಥೆ, ಮಾಡಿಕೊಟ್ಟು ಆದಷ್ಟು ಅವರು ನೆಮ್ಮದಿಯಾಗಿರಲು ಅಣು ಮಾಡಿಕೊಡಿ.
ನಾವು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಂಪಾದನೆ ಮಾಡಬಹುದು.
ಆದರೆ ಹೊಸ ತಂದೆ ತಾಯಿ, ಅಥವಾ ಅವರ ಪ್ರೀತಿಯನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ.
ಈ ರೀತಿ ಬೇರೆ ವ್ಯವಸ್ಥೆ ಸಾಧ್ಯವಾಗದಿದ್ದರೆ, ನೀವು ನಿಮ್ಮ ತಂದೆ ತಾಯಿಯರನ್ನು ಅವರ ಕೊನೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳಲೇಬೇಕಾದ್ದು ನಿಮ್ಮ ಕರ್ತವ್ಯ.
ಈಗಿನ ಕಾಲದ ಹೆಣ್ಣು ಮಕ್ಕಳಿಗೆ, ತಂದೆ ತಾಯಿ ಇಲ್ಲದ ವರ ಬೇಕು ಎಂದು ಕೇಳುವವರು, ನಿಮ್ಮ ತಂದೆಯು ತಾಯಿಯ ಬಗ್ಗೆ ಒಲವು ತೋರುವುದು ಕಷ್ಟ.
ಆದ್ದರಿಂದ ಮದುವೆ ಆಗುವ ಮುನ್ನವೇ, ಇದನ್ನೆಲ್ಲ ಅರಿತು, ಕುಳಿತು ಮಾತಾಡಿ, ಮದುವೆ ಆಗುವುದು ನಿಮಗೆಲ್ಲರಿಗೂ ಒಳಿತು.
ಆದರೆ ಹೆಂಡತಿಯನ್ನು ಬಿಟ್ಟುಕೊಡಲಾಗುವುದಿಲ್ಲ, ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಎಂತಾದರೆ, ಕೆಲವಷ್ಟು ದಿನ, ನಿಮ್ಮ ಊರಿನಲ್ಲಿ, ಇಬ್ಬರಿಂದಲೂ ದೂರ ಇರಿ.
ನಿಮ್ಮ ಹೆಂಡತಿ ಹಾಗೂ ತಾಯಿಯವರ ವೈಮನಸ್ಯ ಜಾಸ್ತಿಯಾದರೆ, ಕೊನೆಗೆ ಇಬ್ಬರನ್ನು ಕೂಡಿಸಿ, ಇಬ್ಬರಿಗೂ ಸಂತೋಷವಾಗುವಂತೆ, ಒಂದು ಒಪ್ಪಂದಕ್ಕೆ ನೀವು ಬರಬೇಕು.
ಯಾವಾಗಲೂ ತಿಳಿದುಕೊಳ್ಳಿ, ಗಂಡಸರು ಮನೆಯ ತಕ್ಕಡಿ ತೂಗುವ ವ್ಯಾಪಾರಿ ತರ.
ಕೆಲವು ಬಾರಿ ತಕ್ಕಡಿ ತಾಯಿಯ ಕಡೆ, ಕೆಲವು ಬಾರಿ ತಕ್ಕಡಿ ಹೆಂಡತಿಯ ಕಡೆ, ವಾಲುತ್ತದೆ.
ಆದರೆ ಎರಡು ಬದಿಗಳಲ್ಲಿ ಸರಿಯಾದ ತೂಕ ಇರುವಂತೆ ನೋಡಿಕೊಳ್ಳುವುದು, ಗಂಡಸರ ಕೆಲಸ.
ಮಾತಿನಿಂದ ಬಗೆಹರಿಯದ್ದು ಈ ಜಗತ್ತಿನಲ್ಲಿ ಏನೂ ಇಲ್ಲ.
ಆದ್ದರಿಂದ ನಿಮ್ಮ ಬುದ್ಧಿ, ಚಾಕಚಕ್ಯತೆ, ಉಪಯೋಗಿಸಿ ನಿಮ್ಮ ತಾಯಿ ಹಾಗೂ ಹೆಂಡತಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ನಿಮ್ಮ ಕೈಲೇ ಇದೆ.
ಒಂದು ಅಣುವಿನಲ್ಲಿ ಕೂಡ bonding force ಇಲ್ಲದೆ, ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಜೊತೆ ಇರಲು ಸಾಧ್ಯವಿಲ್ಲ.
ಅದೇ ರೀತಿ ನಿಮ್ಮ ಬದುಕಿನಲ್ಲಿ ಆ ಬಾಂಡಿಂಗ್ ಫೋರ್ಸ್, ಗಂಡಸರಾದ ನೀವು.
ಎಲ್ಲರನ್ನೂ ಜೊತೆ ಹೇಗೆ ಇಡುತ್ತೀರಿ ಎನ್ನುವುದು ಅರಿತು ನಂತರ ಮದುವೆ ಆಗುವುದು ಎಲ್ಲರಿಗೂ ಒಳ್ಳೆಯದು.
ಸರ್ವೇ ಜನ ಸುಖಿನೋ ಭವಂತು.