ಮದುವೆಗೆ ಹೆಣ್ಣು ಸಿಗದಿರುವುದಕ್ಕೆ "ಲಿವ್ ಇನ್ ರಿಲೇಷನ್ ಶಿಪ್" ಸಂಬಂಧ ಎಷ್ಟು ಸರಿ ? ನಿಮ್ಮ ಅನಿಸಿಕೆ ಏನು
ಪಾಪಿಷ್ಟರು ಪಾಪಿ ಸಲಹೆಗಳನ್ನು ನೀಡುತ್ತಾರೆ. ಪಾಪ ಕಾರ್ಯಗಳನ್ನು ಮಾಡಿಸುತ್ತಾರೆ.
ಲಿವಿಂಗ್ ಟುಗೆದರ್ ಎಂಬುದು ಒಬ್ಬ ವ್ಯಕ್ತಿ ಮದುವೆ ಆಗದೇ ಒಂದು ಹೆಣ್ಣಿನ ಜೊತೆ, ಜೀವನ ಮಾಡುವುದು. ಒಂದು ಹೆಣ್ಣು ಒಂದು ಗಂಡು ಮದುವೆ ಮಾಡಿಕೊಳ್ಳದೆ ಗಂಡ ಹೆಂಡತಿ ತರಹ ಜೀವನ ನಡೆಸುವುದು. ಈ ವ್ಯವಸ್ಥೆಯಲ್ಲಿ, ಗಂಡು ಹೆಣ್ಣು ಯಾವುದೇ ಸಮಯದಲ್ಲಿ ಹೊಂದಾಣಿಕೆ ಸಾದ್ಯವಾಗದೆ ಇದ್ದರೆ , ಬೇರೆ ಸಂಗಾತಿ ಸಿಕ್ಕರೆ, ಅಥವಾ ಯಾವುದೇ ಕಾರಣ ನೀಡದೇ ಸಂಭಂದ ಕಡಿದುಕೊಳ್ಳಬಹುದು.
ಇದನ್ನು ಸಮಾಜ, ಧರ್ಮ, ಕಾನೂನು ಮಾನ್ಯ ಮಾಡಿರುವುದಿಲ್ಲ. ಒಂದು ರೀತಿಯ ಅನುಕೂಲ ಸಿಂದು ಅನೈತಿಕ ಸಂಭಂದ. ನೀತಿಗೆಟ್ಟ ಬಾಳುವೆ.
ನಿಮ್ಮ ಮಿತ್ರನ ಸಲಹೆ ಬಹಳ ವಿಚಿತ್ರವಾಗಿದೆ. ಮದುವೆ ಆಗಲು ಹೆಣ್ಣು ಸಿಗುವುದಿಲ್ಲ ಎಂದ ಮೇಲೆ ಒಟ್ಟಿಗೆ ಇರಲು ಹೆಣ್ಣು ಸಿಗುತ್ತಾಳೆಯೇ ಅರ್ಥಾತ್ ಕಟ್ಟಿಕೊಳ್ಳಲು ಸಿಗದವಳು ಇಟ್ಟುಕೊಳ್ಳಲು ಸಿಗುತ್ತಾಳೆಯೇ. ಈ ಅಡ್ಡ ದಾರಿ ಸಲಹೆ ಮಾಡಿದವನು ನಿಜವಾಗಿ ಮಿತ್ರನೆ. ಬದುಕುವುದನ್ನು ಹೇಳಿಕೊಡುವವನು ಮಿತ್ರ. ಹೊಂಡಕ್ಕೆ ಬೀಳುವುದನ್ನು ಹೇಳುವವನು ಏನು ಎಂದು ನೀವೆ ಹೇಳಬೇಕು.
ಅನೇಕರು ಇಂತಹ ಸಂಬಂಧ ಹುಡುಕಿ Honey trap ಗೆ ಸಿಕ್ಕಿ, ಇದ್ದುದನ್ನು ಕಳೆದುಕೊಂಡಿದ್ದಾರೆ. ನಿಮ್ಮಖಾಸಗಿ ಕ್ಷಣಗಳ ಚಿತ್ರೀಕರಣ ಮಾಡಿ ಅದನ್ನು dark web ಗೆ ಹಾಕಿ ನಿಮ್ಮ ಮಾನ ಮರ್ಯಾದೆ ಕಳೆದು ಕೊಳ್ಳಬಹುದು. ಅನೇಕರು ಇಂತಹ ಸಂಬಂಧಗಳಿಂದ , ಬಹಳ ಕಷ್ಟ ಅನುಭವಿಸಿದ್ದಾರೆ. ಖಿನ್ನತೆಗೆ ಜಾರಿದ್ದಾರೆ. ಬದುಕಿನ ಮಹತ್ವದಿಂದ ವಂಚಿತರಾಗಿ ದುಃಖಿಗಳಾಗಿದ್ದಾರೆ. ನಿಮಗಿಂತ ಒಳ್ಳೆಯ/ ಸ್ಥಿತಿವಂತ ಸಿಕ್ಕಾಗ ನಿಮ್ಮನ್ನು ಬಿಟ್ಟು ಹೋದರೆ ಆಗ ನಿಮ್ಮ ಮನಸ್ಥಿತಿಯನ್ನು ಯಾವುದಾದರೂ, ಮರದ ಕೆಳಗೆ ಕುಳಿತು ಯೋಚಿಸಿ. ನಿಮಗೆ ಬುದ್ದನ ಹಾಗೆ ಜ್ಞಾನೊದಯ ಆಗಬಹುದು.
ತಾಳಿದವನು ಬಾಳಿಯಾನು ಎಂಬಂತೆ, ನಿಮಗೆ ಯೋಗ್ಯ ಹೆಣ್ಣು ಸಿಗಬಹುದು. ನಿಮಗೆ ತಂದೆ ತಾಯಿ ಬಂಧುಗಳು ಯಾರು ಇಲ್ಲವೇ. ಅವರೆಲ್ಲಾ ಇದ್ದರೆ ಖಂಡಿತವಾಗಿ , ನಿಮಗೆ ಅನುರೂಪ ಹೆಣ್ಣನ್ನು ಹುಡುಕುತ್ತಾರೆ. ಭಾರತದಲ್ಲಿ ಜನಸಂಖ್ಯೆಗೆನೂ ಬರ ಇಲ್ಲ. ಹೆಣ್ಣು ಸಿಗುತ್ತದೆ. ಮದುವೆಯಾಗಿ, ಮರ್ಯಾದಸ್ಥ ಜೀವನ ನಡೆಸಿ. ಮದುವೆಯ ಮದ್ಯಸ್ಥಗಾರರು ಇದ್ದಾರೆ. ಅವರ ಸಹಾಯ ಸಹ ಪಡೆಯಿರಿ
ಮದುವೆ ಸಂಬಂಧ ಇಂದು ಶಾಶ್ವತ ವಾಗಿ ಉಳಿಯುವುದಿಲ್ಲ. ವಿಛ್ಛೇಧನ ಪಡೆಯುತ್ತಾರೆ. ಇನ್ನು living together ಶಾಶ್ವತವೇ ?
ಬದುಕು ನಿಮಗೆ ಬಿಟ್ಟದ್ದು. ಹೊಂಡಕ್ಕೆ ಬೀಳುವ ಹಾಗಿದ್ದರೆ, ನಾನಂತು ತಡೆಯುವುದಿಲ್ಲ. ಆಳವಾದ ಗುಂಡಿಗೆ ಬಿದ್ದು ನೆರಳಾಟ ಅನುಭವಿದರೆ ನೀವಾಗೆ ಮಾಡಿಕೊಂಡ ಕರ್ಮ, ನಮ್ಮ ಆಕ್ಷೇಪಣೆ ಇಲ್ಲ. " ಶೀಘ್ರ ಮೇವ ನರಕ ಪ್ರಾಪ್ತಿ ಸಿದ್ದಿರಸ್ತು " ಎಂದು ಹೇಳಿ ಲೇಖನ ಮುಗಿಸುತ್ತೇನೆ.




