ಆಷಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು ಗಂಡು ಸೇರಬಾರದು !! ಅಸಲಿ ಸತ್ಯ ಇಲ್ಲಿದೆ ನೋಡಿ ?

ಆಷಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು ಗಂಡು ಸೇರಬಾರದು !! ಅಸಲಿ ಸತ್ಯ ಇಲ್ಲಿದೆ ನೋಡಿ ?

ಆಷಾಢ ಮಾಸವನ್ನು ಶುಭ ಕಾರ್ಯಗಳನ್ನು ಮಾಡುವುದಕ್ಕೆ ಅಶುಭ ಮಾಸವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ನವ ವಿವಾಹಿತರಿಗೆ ಅಂದರೆ ಹೊಸದಾಗಿ ವಿವಾಹವಾದ ವಧು ಮತ್ತು ವರರಿಗೆ ಆಷಾಢ ಮಾಸದ ನಿಯಮಗಳು ಹೆಚ್ಚು ಮಾನ್ಯವಾಗಿರುತ್ತದೆ. 

ಆಷಾಢ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ ಬರುವ ನಾಲ್ಕನೇ ತಿಂಗಳು. ಕರ್ನಾಟಕದಲ್ಲಿ ಜನರು ಆಷಾಢ ಮಾಸದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಯಾಕೆಂದರೆ ಈ ಮಾಸವು ಅವರಿಗೆ ಹೆಚ್ಚು ಮಹತ್ವದ್ದಾಗಿರುತ್ತದೆ. ಆಷಾಢ ಮಾಸವನ್ನು ಶುಭ ಕಾರ್ಯಗಳನ್ನು ಮಾಡುವುದಕ್ಕೆ ಅಶುಭ ಮಾಸವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ನವ ವಿವಾಹಿತರಿಗೆ ಅಂದರೆ ಹೊಸದಾಗಿ ವಿವಾಹವಾದ ವಧು ಮತ್ತು ವರರಿಗೆ ಆಷಾಢ ಮಾಸದ ನಿಯಮಗಳು ಹೆಚ್ಚು ಮಾನ್ಯವಾಗಿರುತ್ತದೆ. ಹೊಸದಾಗಿ ವಿವಾಹವಾದ ದಂಪತಿಗಳು ಆಷಾಢ ಮಾಸದಲ್ಲಿ ಯಾವೆಲ್ಲಾ ನಿಯಮಗಳನ್ನು, ಆಚರಣೆಗಳನ್ನು ಅನುಸರಿಸಬೇಕು ನೋಡಿ..


 ಆಷಾಢ ಮಾಸದ ಮುಖ್ಯ ಆಚರಣೆಗಳು ನವವಿವಾಹಿತ ದಂಪತಿಗಳಿಗೆ ಸಂಬಂಧಿಸಿವೆ. ಆಷಾಢ ಮಾಸದಲ್ಲಿ ನವವಿವಾಹಿತರು ಸಂಪೂರ್ಣವಾಗಿ ಪರಸ್ಪರ ದೂರವಿರುತ್ತಾರೆ. ದಂಪತಿಗೆ ಒಬ್ಬರನ್ನೊಬ್ಬರು ನೋಡಲು ಸಹ ಅನುಮತಿ ಇರುವುದಿಲ್ಲ. ಈ ಕಾರಣದಿಂದ ಪತ್ನಿಯನ್ನು ಆಕೆಯ ತವರು ಮನೆಗೆ ಕಳುಹಿಸಲಾಗುತ್ತದೆ.
 ಅನೇಕ ಸುಳ್ಳು ಸಂಗತಿಗಳು ಚಲಾವಣೆಯಲ್ಲಿದ್ದರೂ ಇದರ ಹಿಂದಿನ ಕಾರಣ ತುಂಬಾ ಸರಳವಾಗಿದೆ. ನವವಿವಾಹಿತರು ಆಷಾಢ ಮಾಸದಲ್ಲಿ ಬೇರೆಯಾಗಲು ಕಾರಣವೆಂದರೆ ದಂಪತಿಗಳು ಈ ತಿಂಗಳಲ್ಲಿ ಒಟ್ಟಿಗೆ ಇದ್ದರೆ, ನಂತರ ಅವರು ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ.

 ಚೈತ್ರ ಮಾಸವು ಸಾಮಾನ್ಯವಾಗಿ ಬೇಸಿಗೆಯ ಮಧ್ಯದಲ್ಲಿ ಬರುತ್ತದೆ, ಇದು ಗರಿಷ್ಠ ಸೂರ್ಯನ ಶಾಖವನ್ನು ಹೊಂದಿರುವ ಸಮಯವಾಗಿದೆ. ಬೇಸಿಗೆಯ ಸಮಯದಲ್ಲಿ ಹೆರಿಗೆಯಾಗುವಾಗ ಮಗುವಿಗೆ ಮತ್ತು ತಾಯಿಗೆ ಸಮಸ್ಯೆಗಳು ಎದುರಾಗಬಹುದು ಎನ್ನುವ ಕಾರಣಕ್ಕೆ ಆಷಾಢ ಮಾಸದಲ್ಲಿ ದಂಪತಿಗಳನ್ನು ದೂರ ಮಾಡಲಾಗುತ್ತದೆ.
 ಅಲ್ಲದೆ, ಆಷಾಢ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಟ್ಟಿಗೆ ಇರಲು ಸಹ ಅನುಮತಿಯನ್ನು ನೀಡಲಾಗುವುದಿಲ್ಲ. ಇದರಿಂದ ಇಬ್ಬರೂ ತಮ್ಮ ಸಂಬಂಧವನ್ನು ಸಮನ್ವಯಗೊಳಿಸಬಹುದು.