ಇತ್ತಿಚೆಗೆ ಮಹಿಳೆಯರು ಸಂಗಾತಿಯ ಸಹಾಯದಿಂದ ಗಂಡನನ್ನು ಕೊಲ್ಲುವ ಸುದ್ದಿ ಏಕೆ ಜಾಸ್ತಿ ಕೇಳಿಬರುತ್ತಿದೆ?

ಇತ್ತಿಚೆಗೆ ಮಹಿಳೆಯರು ಸಂಗಾತಿಯ ಸಹಾಯದಿಂದ ಗಂಡನನ್ನು ಕೊಲ್ಲುವ ಸುದ್ದಿ ಏಕೆ ಜಾಸ್ತಿ ಕೇಳಿಬರುತ್ತಿದೆ?

೧. ಇವೆಲ್ಲವೂ ಸಹ ನಮ್ಮ ಭವಿಷ್ಯತ್ ಪುರಾಣದಲ್ಲಿ ಮತ್ತು ಶ್ರೀಮದ್ ಭಾಗವತ ಮಹಾಪುರಾಣದಲ್ಲಿ, ಋಷಿ ಮುನಿಗಳು ಮೊದಲೇ ತಮ್ಮ ದಿವ್ಯದೃಷ್ಟಿಯ ಮೂಲಕ ನೋಡಿ, ಉಲ್ಲೇಖನ ಮಾಡಿ ತಿಳಿಸಿದಂತೆ, ಈಗ ಕಲಿಯುಗವು ಘೋರವಾದ ರೂಪದಲ್ಲಿ ಎಲ್ಲಾ ಕಡೆಗಳಲ್ಲಿ ಕೂಡ ವ್ಯಾಪಕವಾಗಿ ಹರಡಿಕೊಂಡು, ನಮ್ಮ ಜನರಲ್ಲಿ ಭ್ರಷ್ಟಾಚಾರ, ಹಿಂಸಾಚಾರ, ಕೊಲೆಗಳು, ಅತ್ಯಾಚಾರ, ವಾಮಾಚಾರ, ಅಪರಾಧಗಳು, ಎಲ್ಲವೂ ಕೂಡ ಪ್ರತಿದಿನಕ್ಕೆ ಒಂದಲ್ಲಾ ಒಂದು ಘಟನೆ ನಡೆಯುತ್ತಿದೆ.

೨. ಇದೇ ರೀತಿಯಲ್ಲಿ ಶ್ರೀಮದ್ ಭಾಗವತ ಮಹಾಪುರಾಣದ ಪ್ರಕಾರ - ಒಂದು ಹೆಣ್ಣಿಗೆ ಕನಿಷ್ಠ ಪಕ್ಷ ಎರಡು ಜನ ಗಂಡಸರು ಇರುತ್ತಾರೆ ಎನ್ನುವ ಉಲ್ಲೇಖವಿದೆ. ಅದರಂತೆಯೇ ಈಗ ನಮ್ಮ ಹಿಂದೂಗಳು ಕೂಡ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ರೀತಿಯಲ್ಲೇ ಡೇಟಿಂಗ್, ಮೇಟಿಂಗ್, ಒಂದು ರಾತ್ರಿಯ ಸ್ಟ್ಯಾಂಡ್ ಗಳು, ಲಿವ್ ಇನ್ ಸಂಬಂಧಗಳು, ಇತ್ಯಾದಿ ವಿಷಯಗಳ ಮೇಲೆ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ, ಆಪ್ ಗಳು, ಟಿಂಡರ್, ಎನ್ನುವ ಹಲವಾರು ಬಗೆಯ ಬೇರೆ ರೀತಿಯ ಸಂಪರ್ಕ ಮಾಧ್ಯಮಗಳು ಇರುವುದರಿಂದ, ಈಗ ಮಹಿಳೆಯರು ತಮ್ಮ ಬಾಯ್ ಫ್ರೆಂಡ್ ಮೂಲಕ ತಮ್ಮ ಗಂಡನನ್ನು ಸಾಯಿಸುವ ಸುದ್ದಿಗಳನ್ನು ಕೇಳುತ್ತಾ ಇದ್ದೇವೆ.

೩. ಹಾಗೆಂದು ಗಂಡಸರು ಒಳ್ಳೆಯವರು ಅಂತ ಹೇಳಲು ಸಾಧ್ಯವಿಲ್ಲ, ಏಕೆಂದರೆ ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಹೊಡೆಯಲು ಸಾಧ್ಯ.

೪. ಮಹಿಳೆಯರ ಸಬಲೀಕರಣ ಕೂಡ ಒಂದು ಕಡೆ ಇದಕ್ಕೆ ಕಾರಣ ಎಂದು ಹೇಳಬಹುದು, ಏಕೆಂದರೆ ಮುಂಚೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಂಗಸರು ಸಾಮಾನ್ಯವಾಗಿ ಮನೆಗಳಿಂದ ಹೊರಗಡೆ ಹೋಗಿ ದುಡಿಯಲು ಅವಕಾಶ ಇರುತ್ತಿರಲಿಲ್ಲ. ನಮ್ಮ ಹಿರಿಯರು ಅವರಿಗೆ ಓದು ಬರಹ ಕೂಡ ಕೊಡುತ್ತಾ ಇರಲಿಲ್ಲ.

೫. ಹಳೆಯ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡದೇ, ಬೇಗ ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸುತ್ತಾ ಇದ್ದರು. ಇದನ್ನು ಪುರುಷ ಪ್ರಧಾನ ಸಮಾಜ ಎಂದು ಬಿಂಬಿಸಿ, ಈಗ ಹೆಂಗಸರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಇದರಿಂದ ನಮ್ಮ ದೇಶದಲ್ಲಿ ಈಗ ಅಪರಾಧಗಳು ಹೆಚ್ಚಾಗಿ ಹೋಗಿವೆ.

೬. ಮುಂಚೆ ಎಲ್ಲಾ, ಭಾರತದ ಗಂಡಸರು ಹದಗೆಟ್ಟು ಹೋಗಿ ಎರಡು ಮೂರು ಹೆಂಗಸರ ಸಂಪರ್ಕ ಇಟ್ಟುಕೊಂಡು ಇರುತ್ತಾ ಇದ್ದರು. ಇದರಿಂದ ಜನಸಂಖ್ಯಾ ಸ್ಫೋಟ ಆಗಿ ಭಾರತದ ಜನಗಣತಿ ಹೆಚ್ಚಾಗಿ ಇತ್ತು. ಆದರೆ ಈಗ ಇದರ ಉಲ್ಟಾ ಆಗಿದೆ. ಆದ್ದರಿಂದ ಎರಡೂ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ಏನಾದರೂ ಕಿತಾಪತಿ ಮಾಡುತ್ತಾ ಬಂದಿದ್ದಾರೆ.

೭. ಗಂಡ ಬೇರೆ ಹೆಂಗಸರ ಸಹವಾಸ ಮಾಡಿ ಮನೆಯಲ್ಲಿ ಇರುವ ನಿರಪರಾಧಿ ಹೆಂಡತಿಯ ಸಾಯಿಸುವುದು ಎಷ್ಟು ಕೆಟ್ಟದ್ದೋ, ಅಷ್ಟೇ ಕೆಟ್ಟದ್ದು ಹೆಂಡತಿ ಪರಪುರುಷನ ಒಡನೆ ಸೇರಿಕೊಂಡು, ತನ್ನ ಸಂಗಾತಿಯ ಒಡನೆ ಗಂಡನನ್ನು ಸಾಯಿಸುವುದು ಕೂಡ. ಇವೆರಡೂ ಕೂಡ ಖಂಡನೀಯ.

೮. ಈಗ ಆಸ್ತಿಯಲ್ಲಿ ಸಮಪಾಲು ಕೊಡುವ ಕಾರಣದಿಂದ, ಕೆಲವರು ತಮ್ಮ ಮಾಜಿ ಗಂಡನಿಂದ ಧಮಕಿ ಕೊಟ್ಟು ಆಸ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ.

೯. ಸಾಮಾಜಿಕ ಜಾಲತಾಣಗಳಲ್ಲಿ, ಸಾಮಾನ್ಯ ಜನರು ತಮ್ಮ ಚೆನ್ನಾಗಿ ಇರುವ ವೈಯಕ್ತಿಕ ಚಿತ್ರಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ, ನೋಡುವ ಜನರ (ಗಂಡಸರ) ಮನಸ್ಸಿನಲ್ಲಿ ಕೆಟ್ಟ ಭಾವನೆಗಳು, ಕೆಟ್ಟ ಯೋಚನೆಗಳು ಸಹಜವಾಗಿ ಬಂದೇ ಬರುತ್ತವೆ. ಇದರಲ್ಲಿ ಅವರ ಫೋನ್ ನಂಬರ್, ಈಮೇಲ್ ಐಡಿ, ಎಲ್ಲಾ ಹಾಕಿಬಿಟ್ಟರೆ ಅವರಿಗೆ ಲೈಕ್ ಗಳು, ಪ್ರತಿಕ್ರಿಯೆ, ಸಂಭಾಷಣೆಗಳು ಎಲ್ಲವೂ ಶುರುವಾಗುತ್ತದೆ.

೧೦. ಇದೇ ಮುಂದುವರೆದು ಒಂದು ರೀತಿಯ ಚಟವಾಗಿ, ಮಾದಕವಾಗಿ, ಮುಂದೆ ಆಗಬಹುದು. ಒಂದೇ ಸಂಗಾತಿ ಇರುವ ಸಂಸ್ಕೃತಿ ಮುಂಚೆ ಭಾರತದಲ್ಲಿ ಇತ್ತು. ಏಕಪತ್ನೀ ವ್ರತಸ್ಥ ಶ್ರೀ ರಾಮಚಂದ್ರ ದೇವರ ಹಾಗೆ ಇರಲು ಈಗ ಹಲವಾರು ಗಂಡಸರಿಗೆ ಸಾಧ್ಯವಿಲ್ಲ ಏಕೆಂದರೆ ಅವರು ವಿಕೃತ ಕಾಮಿಗಳು. ಅದೇ ಸಮಯದಲ್ಲಿ ಪತಿವ್ರತೆ ಶ್ರೀ ಸೀತಾದೇವಿಯ ಹಾಗೆ ಇರುವ ಹೆಂಗಸರು ಕೂಡ ಈಗ ಕಾಣುವುದು ಬಹಳ ಅಪರೂಪದ ಸಂಗತಿ - ಇದಕ್ಕೇ ಕಲಿಯುಗ ಎಂದು ಕರೆಯುವುದು. ಕಲಿಯುಗದಲ್ಲಿ ಜನರಿಗೆ ನೈತಿಕತೆ ಬಹಳ ಕಡಿಮೆ.