ನಿಮ್ಮ ಪತಿಯ ಮನಸ್ಸು ಬೇರೆ ಹೆಣ್ಣಿನ ಕಡೆಗೆ ವಾಲಬಾರದು ಎಂದ್ರೆ !!ಪತ್ನಿಯರೇ ಈ ನಾಲ್ಕು ಸಲಹೆ ಪಾಲಿಸಿ

ಹೌದು ಮದುವೆಯಾದ ಗಂಡಸು ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು, ವಿವಾಹಿತ ಮಹಿಳೆ ಬೇರೆ ಪುರುಷರತ್ತ ಆಕರ್ಷಿತರಾಗುವುದು ಇದೆಲ್ಲಾ ಹೆಚ್ಚಾಗುತ್ತಿವೆ. ಹೀಗಿರುವಾಗ ನಿಮ್ಮ ಗಂಡನ ಮನಸ್ಸು ಬೇರೆ ಹೆಣ್ಣಿನ ಕಡೆ ವಾಲಬಾರದು ಎಂದಾದರೆ, ಸುಖ ದಾಂಪತ್ಯ ಜೀವನವನ್ನು ಸಾಗಿಸಬೇಕು ಎಂದಾದರೆ ಹೆಂಡತಿಯಾದವಳು ಈ ಕೆಲವೊಂದು ಕೆಲಸಗಳನ್ನು ಮಾಡಲೇಬೇಕು.
1) ಸಂವಹನದ ಕೊರತೆಯಿಂದಲೂ ಸಂಬಂಧದಲ್ಲಿ ಅಂತರ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಗಂಡ ಮನೆಗೆ ಬಂದಾಗ ಕೋಪಿಸಿಕೊಳ್ಳದೆ ಪ್ರೀತಿಯಿಂದ ಮಾತನಾಡಿಸಿ, ಹೀಗೆ ಮುಕ್ತವಾಗಿ ಸಂವಹನ ನಡೆಸುತ್ತಾ, ಪ್ರೀತಿ ತೋರಿಸಿದರೆ ಗಂಡನ ಮನಸ್ಸು ಯಾವತ್ತೂ ಬೇರೆ ಹೆಣ್ಣಿನ ಕಡೆ ವಾಲುವುದಿಲ್ಲ.ಪ್ರತಿ ಬಾರಿ ಸಣ್ಣಪುಟ್ಟ ವಿಷಯಗಳಿಗೂ ಗಂಡನ ಮೇಲೆ ಕೋಪ ಮಾಡಿಕೊಳ್ಳುವುದು, ರೇಗಾಡುವ ಬದಲು ರೊಮ್ಯಾಂಟಿಕ್ ಆಗಿರಿ. ಹೆಂಡತಿ ರೊಮ್ಯಾಂಟಿಕ್ ಆಗಿಲ್ಲ, ಪ್ರತಿನಿತ್ಯ ಜಗಳವಾಡ್ತಾಳೆ ಎಂಬ ಕಾರಣಕ್ಕೆ ಕೆಲ ಪುರುಷರು ಬೇರೆ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಹಾಗಾಗಿ ನಿಮ್ಮ ಸಂಬಂಧವನ್ನು ರೊಮ್ಯಾಂಟಿಕ್ ಆಗಿರಿಸಲು ಪ್ರಯತ್ನಿಸಿ. ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಿರಿ
2) ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಎನ್ನುವಂತಹದ್ದು ಅತ್ಯಂತ ಮುಖ್ಯ. ನೀವು ಯಾವಾಗಲೂ ಅನುಮಾನಿಸುತ್ತಿದ್ದರೆ, ಅದು ನಿಮ್ಮ ಗಂಡನನ್ನು ಅಸಮಾಧಾನಗೊಳಿಸಬಹುದು. ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇಡಿ, ಅನುಮಾನ ಪಟ್ಟು ಜಗಳವಾಡಲು ಹೋಗಬೇಡಿ ಗಂಡನ ಜೊತೆ ಮೂವಿಗೆ, ಲಂಚ್ ಡೇಟ್, ಡಿನ್ನರ್ ಡೇಟ್‌ಗೆ ಹೋಗುವ ಮೂಲಕ ಪರಸ್ಪರ ಸಮಯವನ್ನು ಕಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧವೂ ಆರೋಗ್ಯಕರವಾಗಿರುತ್ತದೆ ಮತ್ತು ಗಂಡ ಇತರೆ ಮಹಿಳೆಯರತ್ತ ಆಕರ್ಷಿತನಾಗುವುದಿಲ್ಲ.
3) ಇಬ್ಬರ ಮಧ್ಯೆ ಹೊಂದಾಣಿಕೆ ಎನ್ನುವಂತಹದ್ದು ಇರಲಿ. ಸಣ್ಣಪುಟ್ಟ ತಪ್ಪು ನಡೆದರೆ, ಅದಕ್ಕಾಗಿ ದೊಡ್ಡ ಜಗಳವನ್ನು ಮಾಡಬೇಡಿ. ಪ್ರೀತಿಯಿಂದ ಮಾತನಾಡಿಸಿ, ಆ ತಪ್ಪುಗಳು ಮತ್ತೆ ನಡೆಯದಂತೆ ತಿಳಿ ಹೇಳಿ. ಹೀಗೆ ಒಬ್ಬರನ್ನೊಬ್ಬರು ಅರ್ಥ ಮಅಡಿಕೊಂಡು ಜೀವನ ಸಾಗಿಸಿ. ಇದು ಖಂಡಿತವಾಗಿಯೂ ನಿಮ್ಮ ಸಂಬಂಧವನ್ನು ಬಲ ಪಡಿಸುತ್ತದೆ.
4) ಅವರಿಷ್ಟದಂತೆ ಸ್ವಲ್ಪ ಬದಲಾಗಿ: ನಿಮ್ಮ ಇಷ್ಟದ ಜೊತೆಗೆ ನಿಮ್ಮ ಗಂಡನ ಇಷ್ಟದ ಪ್ರಕಾರವೂ ಜೀವನವನ್ನು ನಡೆಸಿ, ಹೌದು ಅವರಿಷ್ಟದಂತೆ ಬಟ್ಟೆಯನ್ನು ತೊಡುವುದು, ಅವರ ಇಷ್ಟದಂತೆ ಬದುಕುವುದು ಹೀಗೆಲ್ಲಾ ಮಾಡಿದರೆ ಖಂಡಿತವಾಗಿಯೂ ಗಂಡನಾದವನು ಬೇರೆ ಹೆಣ್ಣಿನ ಕಡೆಗೆ ಆಕರ್ಷಿತನಾಗುವುದಿಲ್ಲ.
5) ಅವರಿಷ್ಟದಂತೆ ಸ್ವಲ್ಪ ಬದಲಾಗಿ: ನಿಮ್ಮ ಇಷ್ಟದ ಜೊತೆಗೆ ನಿಮ್ಮ ಗಂಡನ ಇಷ್ಟದ ಪ್ರಕಾರವೂ ಜೀವನವನ್ನು ನಡೆಸಿ, ಹೌದು ಅವರಿಷ್ಟದಂತೆ ಬಟ್ಟೆಯನ್ನು ತೊಡುವುದು, ಅವರ ಇಷ್ಟದಂತೆ ಬದುಕುವುದು ಹೀಗೆಲ್ಲಾ ಮಾಡಿದರೆ ಖಂಡಿತವಾಗಿಯೂ ಗಂಡನಾದವನು ಬೇರೆ ಹೆಣ್ಣಿನ ಕಡೆಗೆ ಆಕರ್ಷಿತನಾಗುವುದಿಲ್ಲ.