ಇನ್ಮುಂದೆ ಬೈಕು ಕಾರು ಓಡಿಸುವರು ಈ ತಪ್ಪುಗಳನ್ನು ಮಾಡಿದರೆ ನಿಮಗೆ ಬೀಳುತ್ತೆ 3000 /- ರೂ ದಂಡ ! ಯಾವುದು ನೋಡಿ ?
ಸ್ನೇಹಿತರೇ, ಬೈಕ್ ಅಥವಾ ಕಾರು ಹೊಂದಿರುವವರು ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನವೆಂಬರ್ 20ರಿಂದ ರಾಜ್ಯ ಆರ್ಟಿಓ ಇಲಾಖೆ ಹೊಸದಾಗಿ ಕಟ್ಟುನಿಟ್ಟಿನ ಚೆಕಿಂಗ್ ಆರಂಭಿಸಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕೆಲವು ಸಾಮಾನ್ಯ ತಪ್ಪುಗಳಿಗೂ ನೇರವಾಗಿ ₹3000 ದಂಡ ವಿಧಿಸಲಾಗುತ್ತದೆ.
ಮೊದಲನೆಯದಾಗಿ, ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿ ಇರಬೇಕು. ಮಣ್ಣು, ಸ್ಟಿಕ್ಕರ್, ಸ್ಮಾಲ್ ಫಾಂಟ್ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್ ಇದ್ದರೆ ತಕ್ಷಣ ದಂಡ ಬೀಳುತ್ತದೆ.
ಎರಡನೆಯದಾಗಿ, ಪಿಯುಸಿ (Pollution Under Control) ಪ್ರಮಾಣಪತ್ರವನ್ನು ಅಪ್ಡೇಟ್ ಮಾಡದೇ ವಾಹನ ಓಡಿಸಿದರೆ, ಅದಕ್ಕೂ ₹3000 ದಂಡ ವಿಧಿಸಲಾಗುತ್ತದೆ.
ಮೂರನೆಯದಾಗಿ, ಎಲ್ಇಡಿ ಫೋಕಸ್ ಲೈಟ್ಸ್ ಬಳಸಿ ಇತರರಿಗೆ ತೊಂದರೆ ಕೊಟ್ಟರೆ, ಇದನ್ನು ಕೂಡಾ ಆರ್ಟಿಓ ಇಲಾಖೆ ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸುತ್ತದೆ.
ನಾಲ್ಕನೆಯದಾಗಿ, ಮೌಲ್ಡ್ ಸೌಂಡ್ ಸೈಲೆನ್ಸರ್ ಅಂದರೆ ಅಧಿಕ ಶಬ್ದ ಮಾಡುವ ಸೈಲೆನ್ಸರ್ ಬಳಸಿದರೆ, ನೇರವಾಗಿ ₹3000 ದಂಡ ಬೀಳುತ್ತದೆ.
ಇದೇ ರೀತಿ, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿದರೆ, ಅಥವಾ ಚಾಲಕರ ಮಾಹಿತಿ ಡಾಕ್ಯುಮೆಂಟ್‌ನಲ್ಲಿ ಸರಿಯಾಗಿ ಹೊಂದಿಕೆಯಾಗದಿದ್ದರೆ, ಅವುಗಳಿಗೂ ದಂಡ ವಿಧಿಸಲಾಗುತ್ತದೆ.
ಹೀಗಾಗಿ, ವಾಹನವನ್ನು ಸುರಕ್ಷಿತವಾಗಿ ಮತ್ತು ನಿಯಮಾನುಸಾರವಾಗಿ ಚಲಾಯಿಸುವುದು ಅತ್ಯಂತ ಅಗತ್ಯ.




