ಬೆಳ್ಳುಳ್ಳಿ ಕಬಾಬ್ ಫೇಮಸ್ ಆದ ನಂತರ ರಾಹುಲ್ಲಾನ ಕೆಲ್ಸ ಇಂದ ತೆಗೆದ್ರ ಚಂದ್ರು! ಇಲ್ಲಿದೆ ಅವರ ಸ್ಪಷ್ಟನೆ?

ಬೆಳ್ಳುಳ್ಳಿ ಕಬಾಬ್ ಫೇಮಸ್ ಆದ ನಂತರ ರಾಹುಲ್ಲಾನ ಕೆಲ್ಸ ಇಂದ ತೆಗೆದ್ರ ಚಂದ್ರು! ಇಲ್ಲಿದೆ ಅವರ ಸ್ಪಷ್ಟನೆ?

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಮನೋರಂಜನೆಗೆ ಎಂದು ಬಳಸುವ ಒಂದು ವೇದಿಕೆ ಎಂದು ಹೇಳಬಹುದು. ಹಾಗೆಯೇ ಅವಕಾಶಗಳಿಂದ ವಂಚಿತರದವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿ ನಿರ್ಮಾಣ ಆಗಿದೆ ಎಂದರೆ ತಪ್ಪಾಗಲಾರದು. ಆದರೆ ದಿನದಿಂದ ದಿನಕ್ಕೆ ಇದರಿಂದ ಹೆಚ್ಚಿನ ಉಪಯೋಗದ ಜೊತೆಗೆ ಅತಿರೇಕದ ವರ್ತನೆ ಕೊಡ ಹೆಚ್ಚಾಗುತ್ತಾ ಬರುತ್ತಿದೆ ಎನ್ನಬಹುದು. ಇನ್ನೂ ಇದ್ರಿಂದ ಒಬ್ಬ ವ್ಯಕ್ತಿ ಹೇಗೆ ನಿಮಿಷಗಳಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆಯಬಹುದು ಹಾಗೆಯೇ ಅವರ ಗೌರವವನ್ನು ಕೊಡ ಅಷ್ಟೇ ಬೇಗನೇ ಕಳೆದುಕೊಳ್ಳುವ ಕನೆಕ್ಟ್ ಇಲ್ಲಿದೆ. ಇನ್ನೂ ನಿಮಿಷಗಳಲ್ಲಿ ಇಡೀ ದೇಶವನ್ನೇ ತಲುಪುವ ಟೆಕ್ನಾಲಜಿ ಈ ಸಾಮಾಜಿಕ ಜಾಲತಾಣಗಳಲ್ಲಿ ಇದೆ ಎಂದು ಹೇಳಬಹುದು. 

ಹೀಗೆ ಕೆಲವು ತಿಂಗಳುಗಳಿಂದ ಹೆಚ್ಚಿನ ವೈರಲ್ ಪಡೆದಿರುವ ರಾಹುಲ್ಲಾ ಎಂಬ ಹೆಸರಿನ ಪರಿಚಯ ನಾವು ಹೊಸದಾಗಿ ಮಾಡಬೇಕಿಲ್ಲ. ಏಕೆಂದರೆ ಈ ಹೆಸರು ಹೇಳಿದಂತೆ ನಾವು ಯಾವ ವಿಚಾರದ ಬಗ್ಗೆ ಮಾತನಾಡಲು ಹೊರಟ್ಟಿದೇವೆ ಎಂದು ನಿಮಗೆ ಈಗಾಗಲೇ ತಿಳಿದೇ ಇರುತ್ತದೆ. ಇನ್ನೂ ತೊಂಬತ್ತರ ದಶಕದಲ್ಲಿ ನಮ್ಮ ಸ್ಯಾಂಡಲ್ ವುಡ್ ನ ಆಕ್ಷನ ಕ್ವೀನ್ ಆಗಿದ್ದ ಮಾಲಾಶ್ರೀ ಅವರ ಮೇಕಪ್ ಮ್ಯಾನ್ ಆಗಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿ ಇಂದು ಬೆಳ್ಳುಳ್ಳಿ ಕಬಾಬ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ವೈರಲ್ ಆಗಿದ್ದಾರೆ. ಈ ಬೆಳ್ಳುಳ್ಳಿ ಕಬಾಬ್ ಜೊತೆಗೆ ಆ ಸಮಯದಲ್ಲಿ ಇವರೇ ಸಹಾಯಕ್ಕೆ ಕರೆಯುತ್ತಿದ್ದ ರಾಹುಲ್ಲಾ ಇನ್ನೂ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಿದ್ದಾರೆ ಎಂದರೆ ತಪ್ಪಾಗಲಾರದು.

ಹೀಗೆ ಒಂದೇ ವಿಡಿಯೋ ಮೂಲಕ ಪ್ರಸಿದ್ದಿ ಪಡೆದ ಈ ಇಬ್ಬರು ಸುಮಾರು ಎರಡು ತಿಂಗಳಿಂದಲೂ ಟ್ರೆಂಡ್ ನಲ್ಲಿ ಇದ್ದಾರೆ ಎಂದು ಹೇಳಬಹುದು. ಆದರೆ ಬೆಳ್ಳುಳ್ಳಿ ಕಬಾಬ್ ಜೊತೆಗೆ ಮತ್ತಷ್ಟು ಅಡುಗೆ ಹಾಗೂ ಪ್ರಮೋಷನ್ ಇಂಟರ್ವ್ಯೂ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆದರೆ ರಾಹುಲ್ಲಾ ಮಾತ್ರ ಮತ್ತೆ ಎಲ್ಲಿಯೂ ಕಾಣಿಸುತ್ತಿಲ್ಲ ಯಾಕೆ ಕೆಲ್ಸದಿಂದ ತೆಗೆದುಹಾಕಿದರ ಎಂದು ಸಾಕಷ್ಟು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿತ್ತು. ಈಗ ಇಂಟರ್ವ್ಯೂ ಕೊಡುವ ಮೂಲಕ ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅದೇನೆಂದರೆ ಕೆಲವರು ಅಭಿಮಾನಕ್ಕೆ ಎಂದು ಅವನಿಗೆ ಕೆಟ್ಟ ಚಟಗಳನ್ನು ಕಲಿಸುತ್ತಾ ಇರುವುದು ನನ್ನ ಕಣ್ಣಿಗೆ ಬಿತ್ತು ಹಳ್ಳಿಯಿಂದ ನನ್ನನ್ನು ನಂಬಿ ಬಂದ ಹುಡುಗ ಅವನು ಹಾಗಾಗಿ ಅವನ ಜವಾಬ್ದಾರಿ ನನ್ನ ಮೇಲಿದೆ ಅವನು ನನ್ನ ಬಳಿಯಲ್ಲಿ ಕೆಲ್ಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.