ಪೋಷಕರೇ ಎಚ್ಚರ ! ನಿಮ್ಮ ಮಕ್ಕಳಿಗೆ ನೀವು ಇದನ್ನು ಕೊಟ್ಟರೆ ನಿಮಗೆ 25000 /-ರು ದಂಡ ಮತ್ತು ಜೈಲ್ ಶಿಕ್ಷೆ ಖಚಿತ

ಪೋಷಕರೇ ಎಚ್ಚರ ! ನಿಮ್ಮ ಮಕ್ಕಳಿಗೆ ನೀವು ಇದನ್ನು ಕೊಟ್ಟರೆ ನಿಮಗೆ 25000 /-ರು ದಂಡ ಮತ್ತು ಜೈಲ್ ಶಿಕ್ಷೆ ಖಚಿತ

ನಗರದಲ್ಲಿ ದಿನದಿಂದ ದಿನಕ್ಕೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ಮಕ್ಕಳು ಕಾರು, ಬೈಕ್ ಓಡಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗಿ ಸಾವು-ನೋವುಗಳು ಸಂಭವಿಸುತ್ತಿವೆ. ಈ ಪರಿಸ್ಥಿತಿಗೆ ತಡೆ ಹಾಕಲು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಟ್ಟರೆ ಪೋಷಕರಿಗೆ ಅಥವಾ ವಾಹನ ಮಾಲೀಕರಿಗೆ ₹25,000 ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 18 ವರ್ಷ ತುಂಬದಿದ್ದರೂ ಬೈಕ್, ಕಾರು ಓಡಿಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳಿಗೆ ವಾಹನ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಯಾವುದೇ ಅಂಡರ್-ಏಜ್ಡ್ ವ್ಯಕ್ತಿ ವಾಹನ ಚಲಾಯಿಸಿದರೆ ಅವರಿಗೆ ₹5,000 ದಂಡ ಹಾಗೂ ಮೂರು ತಿಂಗಳವರೆಗೆ ಸಾದಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅವರಿಗೆ ವಾಹನ ನೀಡಿದವರು — ಪೋಷಕರಾಗಲಿ, ವಾಹನ ಮಾಲೀಕರಾಗಲಿ — ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಹಾಲು ತರುವುದಕ್ಕೆ, ನೀರು ತರಲು, ಶಾಲೆ-ಕಾಲೇಜಿಗೆ ಹೋಗಲು ಪೋಷಕರು ಮಕ್ಕಳಿಗೆ ಬೈಕ್ ಅಥವಾ ಕಾರು ಕೊಡುತ್ತಾರೆ. ಆದರೆ ಮಕ್ಕಳು ಜೋಶ್ನಲ್ಲಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಪೋಷಕರನ್ನೂ, ವಾಹನ ಮಾಲೀಕರನ್ನೂ ಹೊಣೆಗಾರರನ್ನಾಗಿ ಸಾರಿಗೆ ಇಲಾಖೆ ಮಾಡುತ್ತಿದೆ.

ಪೋಷಕರು ಕೂಡ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಏಕೆಂದರೆ ಅಪ್ರಾಪ್ತ ಮಕ್ಕಳಿಗೆ ಅನುಭವವಿಲ್ಲ, ನಿಯಮಗಳ ಅರಿವು ಕಡಿಮೆ. ಇದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಪೋಷಕರು ತುಂಬಾ ಎಚ್ಚರಿಕೆಯಿಂದ ಇರಬೇಕು, ಮಕ್ಕಳ ಕೈಗೆ ವಾಹನ ಕೊಡಬಾರದು.

ಒಬ್ಬ ಪೋಷಕ ತಮ್ಮ ಅನುಭವ ಹಂಚಿಕೊಂಡು ಹೇಳುತ್ತಾರೆ: “ನನಗೆ ಒಂದೇ ಮಗಳು ಇದ್ದರು. 18 ವರ್ಷ ತುಂಬುವವರೆಗೂ ನಾವು ಅವರಿಗೆ ವಾಹನ ಕೊಡಲಿಲ್ಲ. 18 ವರ್ಷವಾದ ನಂತರ ಮಾತ್ರ ಸ್ಕೂಟಿ ಕೊಟ್ಟೆವು. 18 ವರ್ಷ ತುಂಬದಿದ್ದರೂ ಮಗನಿಗೆ ಬೈಕ್ ಅಥವಾ ಕಾರು ಓಡಿಸಲು ಗೊತ್ತಿದೆ ಎಂದು ವಾಹನ ಕೊಟ್ಟರೆ, ಅಪಘಾತದಲ್ಲಿ ಮಕ್ಕಳು ಸಿಕ್ಕಿಬಿದ್ದರೆ ಅದರ ಹೊಣೆ ಪೋಷಕರಿಗೆ ಬರುವುದು. ದಂಡದ ಭಾರವೂ ಅವರ ಮೇಲೇ ಬೀಳುತ್ತದೆ.”