ಸೌಜನ್ಯ ಕೇಸ್ ಪ್ರಕರಣ ಕುರಿತು ದುನಿಯಾ ವಿಜಯ್ ಎಂಟ್ರಿ...! ಹೀಗೆ ಮಾಡಿದ್ದು ಸರೀನಾ ನೋಡಿ

ಸೌಜನ್ಯ ಕೇಸ್ ಪ್ರಕರಣ ಕುರಿತು ದುನಿಯಾ ವಿಜಯ್ ಎಂಟ್ರಿ...! ಹೀಗೆ ಮಾಡಿದ್ದು ಸರೀನಾ ನೋಡಿ

ಧರ್ಮಸ್ಥಳದ ಪುಣ್ಯ ಕ್ಷೇತ್ರದಲ್ಲಿ ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳದ ಸೌಜನ್ಯ ಅವರನ್ನ ಹತ್ಯೆ ಮಾಡಲಾಗಿತ್ತು. ಈ ವಿಚಾರ ಇಂದಿಗೂ ಕೂಡ ಅತ್ತ ಕೋರ್ಟಿನಲ್ಲಿ ನಡೆಯುತ್ತಿದೆ. ಸೌಜನ್ಯ ಸಾವಿಗೆ ಕಾರಣ ಯಾರು, ಸೌಜನ್ಯರನ್ನ ಅಂದು ಸಾಯಂಕಾಲ ಬಸ್ ಇಳಿದ ತಕ್ಷಣ ಎತ್ತಿಕೊಂಡು ಹೋಗಿ ನೋವನ್ನು ಕೊಟ್ಟು ಸಾಯಿಸಿದ್ದು ಯಾರು ಎಂಬುದಾಗಿ ಇಂದಿಗೂ ಕೂಡ ಪ್ರಶ್ನೆಯಾಗಿಯೇ ಈ ವಿಚಾರ ಉಳಿದುಬಿಟ್ಟಿದೆ. ಹೌದು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಎಲ್ಲಾ ಕಡೆ ಹೆಚ್ಚು ಚರ್ಚೆ ಆಗುತ್ತಿದ್ದು, ಜಸ್ಟಿಸ್ ಫಾರ್ ಸೌಜನ್ಯ ಎಂಬ ಹ್ಯಾಷ್ ಟ್ಯಾಗ್ ಮೂಲಕ ಎಲ್ಲಾ ಕಡೆ ಹೋರಾಟ ಪ್ರತಿಭಟನೆ ನಡೆಯುತ್ತಿದೆ. ಸೌಜನ್ಯ ಸಾವಿಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸಬೇಕು ಆಕೆಯನ್ನು ಹತ್ಯೆ ಮಾಡಿದವರು ಯಾರು ಎಂಬುದಾಗಿ ಎಲ್ಲರಿಗೂ ಗೊತ್ತಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸುಮಾರು 11 ವರ್ಷಗಳ ಕಾಲ ಈ ಪ್ರಕರಣದಲ್ಲಿ ಸಂತೋಷ ರಾವ್ ಎನ್ನುವ ಒಬ್ಬ ಧಾರ್ಮಿಕ ಆದ್ಯಾತ್ಮ ಹೊಂದಿದ್ದ ಅರ್ಚಕರು ಸಿಕ್ಕಿ ಹಾಕಿಕೊಂಡಿದ್ದರು. ಆದರೆ ಕೋರ್ಟ್ ಇತ್ತೀಚಿಗೆ ಇವರನ್ನು ಬಿಡುಗಡೆ ಮಾಡಿದ್ದು ಇವರಿಗೆ ಮತ್ತು ಸೌಜನ್ಯ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಯಾವ ಸಾಕ್ಷಾಧಾರಗಳು ಅತ್ತ ಉಳಿದಿವೆ, ಯಾವೆಲ್ಲ ಆಧಾರಗಳ ಮೇಲೆ ಯಾವ ಅಂಶಗಳನ್ನು ಇಟ್ಟುಕೊಂಡು ಹೇಗೆ ತನಿಖೆಯನ್ನ ಮಾಡುತ್ತಿದ್ದಾರೆ ಎಂಬುದಾಗಿ ಯಾವುದು ತಿಳಿಯುತ್ತಿಲ್ಲ. ಆದ್ರೆ ಸೌಜನ್ಯ ಪ್ರಕರಣಕ್ಕೆ ವಕೀಲರಾಗಿರುವ ಶ್ರೀನಿವಾಸ ಅವರು ಎಂಟ್ರಿ ಕೊಟ್ಟಿದ್ದಾರೆ. ಆದಷ್ಟು ಬೇಗನೆ ಇವರಿಗೆ ನ್ಯಾಯ ಸಿಗಲಿ. ಇದರೊಟ್ಟಿಗೆ ದುನಿಯಾ ಖ್ಯಾತಿಯ ನಟ ವಿಜಯ್ ಅವರು ಈ ಕುರಿತು ಒಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.  

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಯಾವ ಬೆಳವಣಿಗೆಗಳು ಸಹ ಕಾಣುತ್ತಿಲ್ಲ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ ದುನಿಯಾ ವಿಜಯ್. ಹೌದು ಪ್ರತಿ ವರ್ಷ ಮಂಜುನಾಥ ದೇವಸ್ಥಾನಕ್ಕೆ, ಮಂಜುನಾಥನ ದರ್ಶನ ಪಡೆಯುವುದಕ್ಕೆ, ನಟ ದುನಿಯಾ ವಿಜಯ್ ಹೋಗಿ ಬರುತ್ತಿದ್ದರು. ಆದರೆ ಈಗ ಮತ್ತೆ ಎದ್ದಿರುವ ನಮ್ಮ ಸೌಜನ್ಯ ಪ್ರಕರಣಕ್ಕೆ ಕುರಿತು ಸ್ಪಂದಿಸಿದ್ದು ನಾನು ಸೌಜನ್ಯ ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ಭೇಟಿ ನೀಡುವುದಿಲ್ಲ ಎಂದಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದಿಲ್ಲ ಎಂಬುದಾಗಿ ಹೇಳಿದ್ದಾರೆ..ಸತ್ಯದ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್ ಯಾವ ರೀತಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಗೊತ್ತಾ ಮುಂದೆ ಓದಿ.."ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.

ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು - ಬುದ್ಧ" ಎಂದು ನಟ ದುನಿಯಾ ವಿಜಯ್ ಬರೆದುಕೊಂಡಿದ್ದಾರೆ. ಇವರ ಈ ನಡೆಯನ್ನು ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ಕುಟುಕಿದ್ದಾರೆ..ಅ ದೇವರು ಏನು ಮಾಡಬೇಕು, ನಾವು ಸರ್ಕಾರಕ್ಕೆ ಹೆಚ್ಚು ಒತ್ತಡ ಹೇರಬೇಕು. ಸರ್ಕಾರಕ್ಕೆ ಕೇಸ್ ಬಗ್ಗೆ ಹರಿಸುವಂತೆ ಮನವಿ ಮಾಡಬೇಕು ಎಂದಿದ್ದಾರೆ. ಆದ್ರೆ ಇನ್ನು ಕೆಲವರು ನೀವು ಹೇಗೆ ಸೌಜನ್ಯ ಪ್ರಕರಣ ಕುರಿತು ಇಂತಹ ನಿರ್ಧಾರ ಮಾಡಿದ್ದಿರೋ, ಅ ಸೌಜನ್ಯ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಬೆಂಬಲವ ನೀಡುತ್ತಿದ್ದಿರೋ, ಅದೇ ರೀತಿ ಕನ್ನಡದ ಎಲ್ಲಾ ಸ್ಟಾರ್ ನಟರು ಇದೇ ರೀತಿ ಬೆಂಬಲ ಕೊಟ್ಟರೆ ಸೌಜನ್ಯ ಅವರಿಗೆ ಖಂಡಿತ ನ್ಯಾಯ ದೊರಕುತ್ತದೆ ಎಂದು ಮೆಚ್ಚುಗೆಯ ಮಾತಾಡಿ ಕಮೆಂಟ್ ಮಾಡುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..