ನೀವು ಈಗಾಗಲೇ ಚಿನ್ನ ಖರೀದಿಸಿದ್ದರೇ ನಿಮಗೆ ಗುಡ್ ನ್ಯೂಸ್ !! ಎಷ್ಟು ಬೆಲೆ ಏರಿಕೆ ಆಗುತ್ತೆ ಗೊತ್ತಾ ?

ನೀವು ಈಗಾಗಲೇ ಚಿನ್ನ ಖರೀದಿಸಿದ್ದರೇ  ನಿಮಗೆ ಗುಡ್ ನ್ಯೂಸ್ !! ಎಷ್ಟು ಬೆಲೆ ಏರಿಕೆ ಆಗುತ್ತೆ ಗೊತ್ತಾ ?

ನಮಸ್ಕಾರ ಸ್ನೇಹಿತರೆ, ಈಗಾಗಲೇ ನೀವು ಚಿನ್ನವನ್ನು ಖರೀದಿ ಮಾಡಿದ್ದರೆ ನಿಮಗೆ ಒಂದು ಶುಭವಾರ್ತೆಯಿದೆ. ತಜ್ಞರ ಅಭಿಪ್ರಾಯದ ಪ್ರಕಾರ 2026ರಲ್ಲಿ ಚಿನ್ನದ ಬೆಲೆ ಡಬಲ್ ಆಗುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಅಪಾಯಗಳನ್ನು ಗಮನಿಸಿದರೆ, ಚಿನ್ನದ ಬೆಲೆ ಶೇಕಡಾ 15ರಿಂದ 30ರವರೆಗೆ ಏರಿಕೆ ಕಾಣಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಈ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಅಪಾಯಗಳು, ವ್ಯಾಪಾರ ಬಿಕ್ಕಟ್ಟುಗಳು ಹಾಗೂ ಇತ್ಯರ್ಥವಾಗದ ಪ್ರಾದೇಶಿಕ ಸಂಘರ್ಷಗಳು ಸೇರಿವೆ. ಇವು ಚಿನ್ನದ ಬೆಲೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಬಹುದು. ಅದೇ ರೀತಿ, ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದರೆ, ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಇಳಿಸುವ ಸಾಧ್ಯತೆ ಇದೆ. ಬಡ್ಡಿದರ ಕಡಿತವು ಚಿನ್ನದ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಬಹುದು.

ಆದರೆ, ಕೆಲವೊಂದು ಮಾಹಿತಿಗಳ ಪ್ರಕಾರ ಜಾಗತಿಕ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿ ಸುಧಾರಿಸಿದರೆ, ಚಿನ್ನದ ಬೆಲೆ ಶೇಕಡಾ 5ರಿಂದ 20ರವರೆಗೆ ಕುಸಿಯುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚಾದರೆ, ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಬಹುದು. ಇದರಿಂದ ಡಾಲರ್ ಬಲಗೊಳ್ಳುತ್ತದೆ ಮತ್ತು ಹೂಡಿಕೆದಾರರು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ. ಈ ಪರಿಸ್ಥಿತಿ ಚಿನ್ನದ ಬೆಲೆಯ ಮೇಲೆ ಇಳಿಕೆಯ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ 2026ರಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಅಥವಾ ಇಳಿಕೆ ಸಂಭವಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.