ಆಧಾರ್ ಕಾರ್ಡ್ ಇದ್ದವರಿಗೆ ಜನವರಿ 1 ರಿಂದಲೇ ಸಿಹಿಸುದ್ದಿ !! ನಿಮಗೆ ಎಷ್ಟು ಸಾಲ ಸಿಗುತ್ತೆ ನೋಡಿ ?
ನಮಸ್ಕಾರ ಸ್ನೇಹಿತರೆ, ಈಗ ನೀವು ಕೇವಲ ಆಧಾರ್ ಕಾರ್ಡ್ ಬಳಸಿ ಯಾವುದೇ ರೀತಿಯ ಖಾತರಿ ಇಲ್ಲದೆ 80,000 ರೂಪಾಯಿವರೆಗೆ ಸಾಲವನ್ನು ಪಡೆಯಬಹುದು. ಸಾಮಾನ್ಯವಾಗಿ ಬ್ಯಾಂಕಿನಿಂದ ಸಾಲ ಪಡೆಯಲು ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರದ ಈ ವಿಶೇಷ ಯೋಜನೆಯಡಿ ಕೇವಲ ಆಧಾರ್ ಕಾರ್ಡ್ ಬಳಸಿ ಸಾಲ ಪಡೆಯುವ ಅವಕಾಶವಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಸ್ವಾನಿಧಿ ಯೋಜನೆ ಸಣ್ಣ ಪುಟ್ಟ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ. ಕೊರೋನಾ ಮಹಾಮಾರಿಯ ಸಮಯದಲ್ಲಿ ಈ ವರ್ಗದ ಜನರು ಎದುರಿಸಿದ ಸಂಕಷ್ಟವನ್ನು ನಿವಾರಿಸಲು ಈ ಯೋಜನೆ ದೇಶಾದ್ಯಂತ ಜಾರಿಗೆ ತರಲಾಯಿತು.
ಈ ಯೋಜನೆಯಡಿ ಅರ್ಜಿದಾರರು ಗರಿಷ್ಠ 80,000 ರೂಪಾಯಿವರೆಗೆ ಸಾಲ ಪಡೆಯಬಹುದು. ಸಾಲವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ – ಮೊದಲ ಹಂತದಲ್ಲಿ 10,000 ರೂಪಾಯಿ, ಎರಡನೇ ಹಂತದಲ್ಲಿ 20,000 ರೂಪಾಯಿ ಮತ್ತು ಮೂರನೇ ಹಂತದಲ್ಲಿ 50,000 ರೂಪಾಯಿ. ಮೊದಲ ಕಂತಿನ ಹಣವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಎರಡನೇ ಕಂತು ಪಡೆಯಲು ಅವಕಾಶವಿದೆ. ಅದೇ ರೀತಿಯಾಗಿ ಮೊದಲ ಎರಡು ಕಂತುಗಳನ್ನು ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಮೂರನೇ ಕಂತಿನ ಹಣವನ್ನು ಪಡೆಯಬಹುದು.
ಸಾಲ ಪಡೆದ ಹಣವನ್ನು ಮಾಸಿಕ ಕಂತುಗಳ ಮೂಲಕ ಒಂದು ವರ್ಷದೊಳಗೆ ಮರುಪಾವತಿ ಮಾಡಬೇಕು. ಜೊತೆಗೆ, ಯೋಜನೆಯಡಿ ಸಾಲಗಾರರು ವಾರ್ಷಿಕವಾಗಿ 1200 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಬಡ್ಡಿದರದ ವಿಷಯಕ್ಕೆ ಬಂದರೆ, ಈ ಯೋಜನೆಯಡಿ ನೀಡಲಾಗುವ ಸಾಲಕ್ಕೆ ಶೇಕಡಾ 7% ಬಡ್ಡಿ ವಿಧಿಸಲಾಗುತ್ತದೆ.
ಬೀದಿ ವ್ಯಾಪಾರಸ್ಥರು ಮತ್ತು ಸಣ್ಣ ವ್ಯಾಪಾರಸ್ಥರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಹತ್ತಿರದ ಸಾರ್ವಜನಿಕ ಬ್ಯಾಂಕ್‌ಗೆ ಭೇಟಿ ನೀಡಿ ಅಗತ್ಯ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕು. ಅರ್ಜಿದಾರರ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿರುವುದು ಕಡ್ಡಾಯ. ಆಧಾರ್ ಕಾರ್ಡ್ ಹೊರತುಪಡಿಸಿ ಇತರ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಿಎಂ ಸ್ವಾನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬಹುದು.




