ಬಿಪಿಎಲ್ ಕಾರ್ಡ್‌ದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ !! ಇದರ ಲಾಭ july 31 ರ ಒಳಗೆ ಪಡೆದು ಕೊಳ್ಳಿ !!

ಬೆಂಗಳೂರು: ಆಹಾರ ಭದ್ರತೆ ಮತ್ತು ಬಡವರಿಗೆ ನೆರವು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ತಮ್ಮ ಅನ್ನಭಾಗ್ಯ ಯೋಜನೆಯನ್ನು (Anna Bhagya Scheme) ಇನ್ನಷ್ಟು ಬಲಪಡಿಸಿದೆ.ಇದರ ಭಾಗವಾಗಿ ಬಿಪಿಎಲ್ (BPL Ration Card), ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಜುಲೈ ತಿಂಗಳಲ್ಲಿ ಹೆಚ್ಚುವರಿ ಆಹಾರ ಧಾನ್ಯ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಈ ಯೋಜನೆಯಡಿ ಪಡಿತರ ವಿತರಣೆಯು ಜುಲೈ 31, 2025ರೊಳಗೆ ಪೂರ್ಣಗೊಳ್ಳಬೇಕೆಂಬ ಸೂಚನೆ ನೀಡಲಾಗಿದೆ. ಫಲಾನುಭವಿಗಳು ತಮ್ಮ ನೋಂದಾಯಿತ ನ್ಯಾಯಬೆಲೆ ಅಂಗಡಿಗೆ ತೆರಳಿ ಧಾನ್ಯವನ್ನು ಪಡೆಯಬೇಕಾಗಿದ್ದು, ವಿಳಂಬವಾದರೆ ಯೋಜನೆಯ ಲಾಭ ಕೈ ತಪ್ಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಬಿಪಿಎಲ್ ಕಾರ್ಡ್ ಕುರಿತಾದ ಹಲವು ಗೊಂದಲಗಳಿಗೂ ಸರ್ಕಾರ ಸ್ಪಷ್ಟತೆ ನೀಡಿದೆ. ಕಳೆದ ಕೆಲ ತಿಂಗಳುಗಳಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಕಾರ್ಡ್ ಪಡೆದಿದ್ದವರ ಕಾರ್ಡ್‌ಗಳನ್ನು ರದ್ದುಪಡಿಸಲು ಪ್ರಕ್ರಿಯೆ ನಡೆಯಿತು. ಆದರೆ ಇದರಿಂದಾಗಿ ಹಲವಾರು ಬಡ ಕುಟುಂಬಗಳ ಕಾರ್ಡ್‌ಗಳು ತಪ್ಪಾಗಿ ರದ್ದುಪಟ್ಟು ಪ್ರತಿಭಟನೆಗಳು ಕೂಡ ಉಂಟಾದವು. ನಂತರ ಸರ್ಕಾರ ಎಚ್ಚೆತ್ತು, ಅರ್ಹರಿಗೆ ಪುನಃ ಕಾರ್ಡ್‌ಗಳನ್ನು ನೀಡಲು ಕ್ರಮಕೈಗೊಂಡಿದೆ.
ಈ ಪಡಿತರ ಯೋಜನೆಯಡಿಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವವರಲ್ಲಿ 1 ರಿಂದ 3 ಸದಸ್ಯರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 21 ಕೆ.ಜಿ. ಅಕ್ಕಿ ಮತ್ತು ರಾಗಿ ವಿತರಣೆ ಮಾಡಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಾರ ವಿತರಣಾ ಪ್ರಕ್ರಿಯೆ ನಿರಂತರವಾಗಿ ಯಶಸ್ವಿಯಾಗಿ ಸಾಗುತ್ತಿದೆ.
ಇನ್ನು ಪಡಿತರ ವಿತರಣೆಯಲ್ಲಿ ಪೋರ್ಟ್‌ಬಿಲಿಟಿ (portability) ಸೌಲಭ್ಯವೂ ಲಭ್ಯವಿದ್ದು, ಫಲಾನುಭವಿಗಳು ತಮ್ಮ ಧಾನ್ಯವನ್ನು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದುಕೊಳ್ಳಬಹುದು. ಇದರಲ್ಲಿ ಅಂತರ್‌ಜಿಲ್ಲಾ ಮತ್ತು ಅಂತರ್‌ರಾಜ್ಯ ತಂತ್ರಜ್ಞಾನ ಸಹಕಾರವಿರುವುದು ವಿಶೇಷವಾಗಿದೆ ಹೆಚ್ಚುವರಿ ಆಹಾರ ಧಾನ್ಯ ವಿತರಣೆ ಹಾಗೂ ಉಚಿತ ಪಡಿತರ ವ್ಯವಸ್ಥೆಯು ಹಸಿವಿನಿಂದ ಬಳಲುವ ಬಡಕುಟುಂಬಗಳಿಗೆ ನೇರ ನೆರವು ನೀಡುವ ಉದ್ದೇಶ ಹೊಂದಿದೆ. ಈ ಸೇವೆ ಹೆಚ್ಚು ಜನರಿಗೆ ತಲುಪುತ್ತಿರುವುದು ಸಮಾಜದಲ್ಲಿ ಸಮಾನತೆಯತ್ತ ದಿಟ್ಟ ಹೆಜ್ಜೆಯಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಹಾರ ಇಲಾಖೆ ಕಚೇರಿ ಅಥವಾ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬಹುದು.