ರಾಜ್ಯಾದ್ಯಂತ ಜೂನ್ 16ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ!! ಸಿದ್ದರಾಮಯ್ಯ ಘೋಷಣೆ ?

ರಾಜ್ಯಾದ್ಯಂತ ಜೂನ್ 16ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ!! ಸಿದ್ದರಾಮಯ್ಯ ಘೋಷಣೆ ?

ಕರ್ನಾಟಕದಲ್ಲಿ ಶಾಲೆಗಳು ಆರಂಭವಾದ ಕೆಲವೇ ದಿನಗಳಲ್ಲಿ, ಶಾಲಾ ಮಕ್ಕಳಿಗೆ ಸಾಲು ಸಾಲು ರಜೆಗಳು ಲಭಿಸುತ್ತಿವೆ. ರಾಜ್ಯದ ಮುಂಗಾರು ಪ್ರವೇಶ ಮತ್ತು ಭಾರಿ ಮಳೆಯ ಪರಿಣಾಮ ಹಲವು ಜಿಲ್ಲೆಗಳಲ್ಲಿ ಶಾಲಾ ರಜೆಗೆ ಕಾರಣವಾಗಿದೆ. 14 ದಿನಗಳ ಒಳಗೆ ಕೆಲವು ಜಿಲ್ಲೆಗಳ ಶಾಲೆಗಳು ರಜೆ ಘೋಷಣೆ ಮಾಡಿಕೊಂಡಿದ್ದು, ಜೂನ್ 16 (ಸೋಮವಾರ) ಕೂಡ ಶಾಲಾ ರಜೆ ಘೋಷಣೆಯಾಗುವ ಸಾಧ್ಯತೆ ಇದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಎರಡು ದಿನಗಳ ರಜೆ ಘೋಷಿಸಲಾಗಿದೆ. ಮುಂಗಾರು ಹೆಚ್ಚುತ್ತಿರುವ ಕಾರಣ, ಜೂನ್ 16ರಂದು ಈ ಜಿಲ್ಲೆಗಳ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಣೆಯಾಗಬಹುದು.

ಇದೇ ರೀತಿಯಲ್ಲಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ರಜೆಯ ನಿರೀಕ್ಷೆ ಇದೆ. ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾನುವಾರ (ಜೂನ್ 15) ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಬೆಂಗಳೂರು, ಬೆಳಗಾವಿ, ಧಾರವಾಡ, ರಾಮನಗರ ಸೇರಿದಂತೆ ನಗರ ಪ್ರದೇಶಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಜೂನ್ 16ರಂದು ಬೆಂಗಳೂರಿನ ಶಾಲೆಗಳಿಗೂ ರಜೆ ಘೋಷಣೆಯಾಗುವ ಸಾಧ್ಯತೆ ಇದೆ. ಈ ಕುರಿತು ಅಧಿಕೃತ ಮಾಹಿತಿ ಭಾನುವಾರ (ಜೂನ್ 15) ಪ್ರಕಟವಾಗಲಿದೆ.