52 ಎಕರೆಯ ಸ್ವಂತ ಸ್ಟುಡಿಯೋದಲ್ಲೆ ಪ್ರಾಣ ಕಳೆದುಕೊಂಡ ಬಾಲಿವುಡ್ ನಿರ್ದೇಶಕ..! ಯಾರು ನೋಡಿ ?

52 ಎಕರೆಯ ಸ್ವಂತ ಸ್ಟುಡಿಯೋದಲ್ಲೆ ಪ್ರಾಣ ಕಳೆದುಕೊಂಡ ಬಾಲಿವುಡ್ ನಿರ್ದೇಶಕ..! ಯಾರು ನೋಡಿ ?

ಭಾರತ ಚಲನಚಿತ್ರರಂಗದ ಖ್ಯಾತ ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡ ನಿತಿನ್ ದೇಸಾಯಿ ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಈಗ ಮಾದ್ಯಮ ಮೂಲಕ ಲಭ್ಯವಾಗಿದೆ. ವರದಿಗಳ ಪ್ರಕಾರ ಕರ್ಜತ್ ಎನ್ನುವ ಪ್ರದೇಶದ ಮುಂಬೈನಲ್ಲಿ ಈ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರು ತಮ್ಮದೇ ಆದ ಒಂದು ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಹೌದು ನಿತಿನ್ ದೇಸಾಯಿ ಅವರು ಇಷ್ಟರಲ್ಲಿಯೇ ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುಲಿದ್ದರು. ಹೌದು ಇದೆ ಆಗಸ್ಟ್ 9ನೇ ತಾರೀಕು 58ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇರಬೇಕಾಗಿದ್ದ ಇವರು, ಒಂದು ವಾರ ಮುಂಚೆಯೇ ನಿತಿನ್ ಅವರು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. 

ನಿತಿನ್ ದೇಸಾಯಿ ಅವರು ತಮ್ಮ ಕೆಲಸಗಳಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಂತಹ ನಿರ್ದೇಶಕರು. ತಮ್ಮಲ್ಲಿರುವ ಅಪಾರವಾದ ಬುದ್ಧಿವಂತಿಕೆ ಮತ್ತು ಕಲಾ ನೈಪುಣ್ಯದ ಮುಖಾಂತರ ಹೆಸರು ಮಾಡಿದಂತಹ ಕಲೆಗಾರ ಇವರು..ಯಾವುದೇ ಬ್ಯಾಕ್ ಬೋನ್ ಇಲ್ಲದೆ ಗಾಡ್ ಫಾದರ್ ಇಲ್ಲದೆ ತಮ್ಮದೇ ಆದ ಚಾಣಾಕ್ಷತನದ ಹಾಗೂ ನೈಪುಣ್ಯತೆಯಿಂದ ಸಿನಿಮಾ ಜಗತ್ತಿನಲ್ಲಿ ದೊಡ್ಡದಾಗಿ ಬೆಳೆದವರು ಎಂದು ಹೇಳಬಹುದು. ಹೌದು ಇವರಿಗೆ ಒಟ್ಟು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅಪ್ರತಿಮ ಕಲಾವಿದರಾಗಿದ್ದ ನಿತಿನ್ ಅವರು ದೊಡ್ಡ ದೊಡ್ಡ ಹಿಟ್ ಸಿನಿಮಾಗಳಿಗೆ ಸೆಟ್ ನಿರ್ಮಿಸಿಕೊಟ್ಟ ಕೀರ್ತಿಗೆ ಭಜನಾ ಆಗಿದ್ದಾರೆ.   

'ಜೋಧಾ ಅಕ್ಬರ್, ಲಗಾನ್, ಬಾಜಿರಾವ್ ಮಸ್ತಾನಿ, ಹಮ್ ದಿಲ್ ದೇ ಚುಕ್ಕೆ ಸನಂ, ಹಾಗೆ ದೇವದಾಸ್ ಸಿನಿಮಾಗಳಿಗೆ ಅದ್ದೂರಿ ಸೆಟ್ ನಿರ್ಮಿಸಿದ ಖ್ಯಾತಿಯೂ ಸಹ ಇವರಿಗೆ ಲಭಿಸಿದೆ. ಹಾಗೆ ಬಾಲಿವುಡ್ ಸಿನಿಮಾರಂಗದ ಮಹಾರತಿಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಕೂಡ ಹೊಂದಿದ್ದಾರೆ. ಸಿನಿ ಜಗತ್ತಿನಲ್ಲಿ ಎರಡು ದಶಕಗಳನ್ನು ಕೂಡ ಪೂರೈಸಿರುವ ನಿತಿನ್ ದೇಸಾಯಿ ಅವರು ರಾಜಕುಮಾರ್, ಹಿರಾನೆ, ಸಂಜಯ್ ಲೀಲಾ ಬನ್ಸಾಲಿ, ಇನ್ನೂ ಕೆಲ ನಿರ್ಮಾಪಕರೊಟ್ಟಿಗೆ ಕೆಲಸ ಮಾಡಿರುವ ಖ್ಯಾತಿ ಹೊಂದಿದ್ದಾರೆ..ಸಿನಿಮಾ ಜಗತ್ತಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡ ದೇಸಾಯಿ ಅವರು ತಮ್ಮ ಕನಸನ್ನು ಹೊತ್ತುಕೊಂಡು ಹೆಚ್ಚು ಪರಿಶ್ರಮ ಪಟ್ಟವರು.

ಅದೇ ರೀತಿ 2005ರಲ್ಲಿ ಮುಂಬೈನ ಕರ್ಜತ್ ನಲ್ಲಿ ತಮ್ಮ ಬಹುದಿನದ ಆಸೆಯ ಎನ್ ಡಿ ಸ್ಟುಡಿಯೋವನ್ನು ಕೂಡ ನಿರ್ಮಾಣ ಮಾಡಿ ತಮ್ಮ ಗುರಿಯನ್ನು ಮುಟ್ಟಿದರು. ಎನ್ ಡಿ ಸ್ಟುಡಿಯೋ ಸುಮಾರು 52 ಎಕರೆಯಷ್ಟು ಇದೆ. ಈ ಸ್ಟುಡಿಯೋದಲ್ಲಿ ಸಾಕಷ್ಟು ಸಿನಿಮಾಗಳು ನಿರ್ಮಾಣ ಆಗಿವೆ.ಐತಿಹಾಸಿಕ ಸಿನಿಮಾ ಆದಂತಹ ಜೋಧ ಅಕ್ಬರ್ ಕೂಡ ಇದೇ ಸೆಟ್‌ನಲ್ಲಿ ನಿರ್ಮಾಣ ಆಗಿತ್ತು. ಕೇವಲ ಸಿನಿಮಾಗಳು ಮಾತ್ರ ಅಲ್ಲದೆ ಬಿಗ್ ಬಾಸ್ ಕೂಡ ಇದೇ ಸೆಟ್ನಲ್ಲಿ ನಿರ್ಮಿಸಲಾಗಿದೆ. ಈ ಸೆಟ್ ನ ವಿಶೇಷತೆಯೆ ಇದಾಗಿದೆ ಎನ್ನಬಹುದು. ಕಲಾ ನಿರ್ದೇಶಕರಾಗಿ ಮಾತ್ರ ಅಲ್ಲದೆ ಪ್ರೊಡಕ್ಷನ್ ಡಿಸೈನರ್ ಆಗಿಯೂ ಸಹ ಇವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಚಿತ್ರದ ನಿರ್ದೇಶನದಲ್ಲೂ ಮತ್ತು ನಿರ್ಮಾಣದಲ್ಲೂ ಕೂಡ ದೇಸಾಯಿ ಅವರು ಮುನ್ನುಡಿಯಲ್ಲಿದ್ದರು.

ಅನೇಕ ಟಿ ವಿ ಸಿರಿಯಲ್ಗಳಲ್ಲಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ, ಮರಾಠಿ ಸೀರಿಯಲ್ ಆದ ರಾಜ ಶಿವ ಛತ್ರಪತಿಯಂತಹ ಬ್ಲಾಕ್ಬಸ್ಟರ್ ಸೀರಿಯಲ್ ಗಳಿಗೆ ಇವರೇ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಿತಿನ್ ಅವರು ಬಾಲಗಂಧರ್ವ ಎಂಬ ಬಯೋಪಿಕ್ ಅನ್ನು ಕೂಡ ನಿರ್ಮಿಸಿದ ಖ್ಯಾತಿ ಇವರೇ ಹೊಂದಿದ್ದು, ಅದು 2011ರಲ್ಲಿ...ಹಲೋ ಜೈ ಹಿಂದ್, ಅಜಿಂತಾ ಚಿತ್ರಗಳನ್ನ ನಿರ್ದೇಶನ ಮಾಡಿದ ಖ್ಯಾತಿಯೂ ಇವರಿಗಿದೆ...

52 ಎಕರೆಯ ಸ್ವಂತ ಸ್ಟುಡಿಯೋದಲ್ಲೆ ಪ್ರಾಣ ಕಳೆದುಕೊಂಡ ಬಾಲಿವುಡ್ ನಿರ್ದೇಶಕ..! ಯಾರು ನೋಡಿ ?