ಮಾಡೆಲಿಂಗ್ ನಲ್ಲಿ ಸಾಧನೆ ಮಾಡಿದ್ದ ಈಕೆ ನಂತರ ಗಂಡನ ಕಾಟಕ್ಕೆ ಏನಾದಳು ಗೊತ್ತಾ..?

ಮಾಡೆಲಿಂಗ್ ನಲ್ಲಿ ಸಾಧನೆ ಮಾಡಿದ್ದ ಈಕೆ ನಂತರ ಗಂಡನ ಕಾಟಕ್ಕೆ ಏನಾದಳು ಗೊತ್ತಾ..?

ಸ್ನೇಹಿತರೆ 27 ವರ್ಷದ ಜ್ಯೋತಿ ಮಲಾನಿ ಎನ್ನುವ ಯುವತಿ 2006ರಲ್ಲಿ ಗ್ವಾಲಿಯರ್ ನಿಂದ ಬೆಂಗಳೂರಿಗೆ ಎಂಟ್ರಿ ಕೊಡುತ್ತಾಳೆ. ಕಾರಣ ಆಕೆ ಈ ಮಾಡಲಿಂಗ್ ಕ್ಷೇತ್ರದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎನ್ನುವ ಹತಾಶೆ ಆಕೆಗಿರುತ್ತದೆ, ಮತ್ತು ಮಹಾದಾಸೆಯ ಹೊಂದಿದ್ದು ಅದಕ್ಕೆ ಬಾಂಬೆಗಿಂತ ಬೆಂಗಳೂರಿನಲ್ಲಿ ಕಾಂಪಿಟೇಶನ್ ಕಡಿಮೆ ಎಂದು ತಿಳಿದು ಬೆಂಗಳೂರಿಗೆ ಜ್ಯೋತಿ ಮಲಾನಿ ಬಂದಿದ್ದರು. ಅದೇ ವೇಳೆ ಬ್ಯೂಟಿ ಕಂಟೆಸ್ಟ್ ನಲ್ಲಿ ಪಾಲ್ಗೊಂಡ ಜ್ಯೋತಿ ಅವರಿಗೆ ಐರನ್ ವೇರ್ ಬಿಸಿನೆಸ್ ಮ್ಯಾನ್ ಆಗಿ ಪಂಕಜ್ ಎಂಬಾತ ಪರಿಚಯ ಆಗುತ್ತಾನೆ.

ದಿನೇ ದಿನೇ ಇವರ ಸ್ನೇಹ ಬೆಳೆದು ನಂತರ ಆ ಸ್ನೇಹ ಪ್ರೀತಿಗೆ ತಿರುಗುವಂತೆ ಆಗಿಬಿಡುತ್ತದೆ. ನಂತರ ಜ್ಯೋತಿ ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪಂಕಜ್ ಗೆ ಇಷ್ಟ ಇರುವುದಿಲ್ಲ. ಮೊದಲು ಮದುವೆ ಆಗೋಣ ಎಂದು ಪುಸಲಾಯಿಸಿ ನಂಬಿಸಿ ಪಂಕಜ್ ಜ್ಯೋತಿಯನ್ನ ಮದುವೆಯಾಗುತ್ತಾನೆ. ಹೌದು ಈ ಜ್ಯೋತಿ ಅವರು ನೋಡಲು ಸುರದ್ರೂಪಿಯಾಗಿದ್ದರು. ಜ್ಯೋತಿ ಅವರು ಪಂಕಜ್ ಮಾತಿಗೆ ಮರುಳಾಗಿ ಮದುವೆಯಾಗಿಯೇ ಬಿಡುತ್ತಾರೆ. ಆರಂಭದಲ್ಲಿ ಇವರ ಸಂಸಾರ ಚೆನ್ನಾಗಿಯೇ ಇರುತ್ತದೆ. ಮುದ್ದಾದ ಒಂದು ಹೆಣ್ಣು ಮಗು ಇರುತ್ತದೆ.

ನಂತರ ಜೆಪಿ ನಗರದಲ್ಲಿ ಒಂದು ಅಪಾರ್ರ್ಟ್ಮೆಂಟಲ್ಲಿ ಒಂದು ಮನೆ ಕೂಡ ಇವರು ಖರೀದಿ ಮಾಡಿದ್ದರು. ಬರು ಬರುತ್ತಾ ಹೆಂಡತಿಯ ಮಾಡಲಿಂಗ್ ಕ್ಷೇತ್ರದ ಬೆಳವಣಿಗೆ ನೋಡಿ, ಮತ್ತು ಆಕೆ ಹಾಕಿಕೊಳ್ಳುವ ಬಟ್ಟೆಗಳ ನೋಡಿ ಪಂಕಜ್ ಗೆ ತಡೆದುಕೊಳ್ಳಲು ಆಗುವುದಿಲ್ಲ. ದಿನೇ ದಿನೇ ಆಕೆಯನ್ನು ನಿಂದಿಸುತ್ತಾ ಅನುಮಾನ ಮಾಡುತ್ತಲೆ ಬಂದಿದ್ದನು. ಜ್ಯೋತಿ ಸಂಸಾರ ಅಂದಮೇಲೆ ಇದೆಲ್ಲ ಕಾಮನ್ ಎಂದು ಎಲ್ಲಾ ತಿಳಿದಿದ್ದ ಜ್ಯೋತಿ ಅವರು ಗಂಡನ ಕೆಟ್ಟ ಆಲೋಚನೆಯ ತಿದ್ದುಪಡಿ ಮಾಡುತ್ತಾ ಅರ್ಥೈಸಿ ಹೇಳುವ ಪ್ರಯತ್ನ ಕೂಡ ಮಾಡಿದ್ದರು.   

ಆದರೆ ಸಣ್ಣತನದ ಕೆಟ್ಟ ವಿಚಾರಗಳು ಪಂಕಜ್ ತಲೆಯಿಂದ ಹೋಗುವುದೇ ಇಲ್ಲ. ಅದೇ ವೇಳೆ 2019 ರಲ್ಲಿ ಜ್ಯೋತಿ ಮಲಾನಿ ಅವರು ಕರ್ನಾಟಕದಿಂದ, ಮಿಸೆಸ್ ಇಂಡಿಯಾ ಕರ್ನಾಟಕದ ಶೈನಿಂಗ್ ಸ್ಟಾರ್ ಎಂಬ ಬಿರುದನ್ನು ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಗೆದ್ದು ಬಿಡುತ್ತಾರೆ. ಇದಾದ ನಂತರ ಹೆಂಡತಿಯ ಫೋಟೋ ಶೂಟ್ ಆಗುತ್ತದೆ, ಹೆಂಡತಿಯ ಹೆಚ್ಚು ಆಫರ್ ಗಳನ್ನು ನೋಡಿದ ಪಂಕಜ್ ತುಂಬಾನೇ ಕೀಳು ಮಟ್ಟದ ರೀತಿ ನೀನು ಆ ರೀತಿ ಬಟ್ಟೆ ಹಾಕುತ್ತಿದ್ದೀಯ, ನೀನು ಬೇರೆಯವರ ಜೊತೆ ಸಂಬಂಧ ಹೊಂದಿದ್ದೀಯ ಎಂದು ತುಂಬಾನೇ ಕಠೋರ ಮಾತಿನಿಂದ ಹೆಂಡತಿಯನ್ನು ಪಂಕಜ್ ನಿಂದಿಸುತ್ತಿದ್ದನಂತೆ.

ಅದೇ 2019 ಆಗಸ್ಟ್ ಏಳನೇ ತಾರೀಕು ರಾತ್ರಿ ಗಂಡ ಹೆಂಡತಿ ಮಗು ಎಲ್ಲರು ಊಟ ಮಾಡಿ ಮುಗಿಸುತ್ತಾರೆ. ಮತ್ತದೇ ವಿಚಾರಕ್ಕೆ ಪಂಕಜ್ ನಿಂದ ಜಗಳ ಶುರು ಆಗುತ್ತದೆ., ಅದೇ ವಿಚಾರಕ್ಕಾಗಿ ನೀನು ಮಾಡಲಿಂಗ್ ಆಗಿದ್ದು, ನನ್ನನ್ನು ಮೋಸ ಮಾಡಿ ಮದುವೆಯಾಗಿ, ಈಗ ಬೇರೆಯವರ ಜೊತೆ ಸಂಬಂಧ ಹೊಂದಿದೆ ಎಂದು ಮತ್ತದೇ ರಗಳೆಯನ್ನು ಪಂಕಜ ತೆಗೆದಿದ್ದಾನೆ..ಮಾತಿಗೆ ಮಾತು ಬೆಳೆದು ನಂತರ ಏನಾಯ್ತು? ಜ್ಯೋತಿ ಮತ್ತು ಮಗು ಹೇಗೆ ಬೆಂಗಳೂರಿನ ಜೆಪಿ ನಗರದ ಅದೊಂದು ಅಪಾರ್ಟ್ಮೆಂಟ್ ನಿಂದ ಕೆಳಗೆ ಬಿದ್ದರು. ಇದೀಗ ಪಂಕಜ್ ಎಲ್ಲಿದ್ದಾನೆ ಆತ ಮಾಡಿದ ಕೆಲಸ ಎಂತದ್ದು ಗೊತ್ತಾ..? ನಿಮ್ಮನ್ನು ಒಂದು ಕ್ಷಣ ಕಣ್ಣಲ್ಲಿ ನೀರು ತರಿಸುವಂತೆ ಈ ವಿಡಿಯೋ ಮಾಡುತ್ತದೆ. ಲವ್ ಮಾಡಿ ಮದುವೆ ಆಗುವ ಮುನ್ನ ಈ ವಿಡಿಯೋ ನೋಡಿ.. ಧನ್ಯವಾದಗಳು  ( video credit : KANNADA TECH FOR YOU )