25000 ಕೋಟಿ ಒಡೆಯ ರಾಕೇಶ್ ಜುಂಜುನ್ ವಾಲ!! ಕೊನೆಗೂ ತನ್ನ ಜೀವ ಉಳಿಸಲು ಸಾಧ್ಯವಾಗಲಿಲ್ಲ ಯಾಕೆ ನೋಡಿ ?

25000 ಕೋಟಿ ಒಡೆಯ ರಾಕೇಶ್ ಜುಂಜುನ್ ವಾಲ!! ಕೊನೆಗೂ ತನ್ನ ಜೀವ ಉಳಿಸಲು ಸಾಧ್ಯವಾಗಲಿಲ್ಲ ಯಾಕೆ ನೋಡಿ ?

ನಮ್ಮ ಭಾರತದ ವಾರೆನ್ ಭಫೆಟ್, ದಲಾಲ್ ಸ್ಟ್ರಿಟ್ ನ ಬಿಗ್ ಬುಲ್ ಸ್ಟಾಕ್ ಮಾರಕಟ್ಟೆಯ ಕಿಂಗ್, ದೇಶದ 36 ನೇ ಶ್ರೀಮಂತನಾಗಿ ಮೆರೆದ ರಾಕೇಶ್ ಜುಂಜುನ್ ವಾಲಾ ಅವರು ಇದೀಗ ತಮ್ಮ 62ನೇ ವಯಸ್ಸಿನಲ್ಲಿ ಹಠಾತ್ ನಿಧನರಾದರು. ರಾಕೇಶ್ ಅವರದ್ದು ಸುಮಾರು 47,560 ಕೋಟಿ ಆಸ್ತಿ ಇದೆ ಎಂದು ತಿಳಿದು ಬಂದಿದೆ. ಇದೆಲ್ಲವೂ ಶೇರ್ ಮಾರ್ಕೆಟ್ ಮೂಲಕವಂತೆ..ರಾಕೇಶ್ ಜುಂಜುನ್ ವಾಲ ಅವರು ತಮ್ಮ ಅತಿ ಸಣ್ಣ ವಯಸ್ಸಿಗೆ ಈ ಶೇರು ಮಾರುಕಟ್ಟೆ ಆರಂಭಿಸಿದ್ದರು. ಅದರಲ್ಲಿನ ಇಂಟರೆಸ್ಟ್ 1985 ರಲ್ಲಿ ಸನ್ಲೆಕ್ಸ್ 150ಪಾಯಿಂಟ್ ಇದ್ದಾಗ ಷೇರು ಮಾರುಕಟ್ಟೆಗೆ ರಾಕೇಶ್ ಅವರು ಧುಮುಕುತ್ತಾರೆ.. ನಂತರ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ  ಷೇರು ಮಾರುಕಟ್ಟೆಯಲ್ಲಿ ರಾಕೇಶ್ ಅವರು ಸುಮಾರು 25 ವರ್ಷಕ್ಕೆ 25 ಸಾವಿರ ಕೋಟಿ ಒಡೆಯ ಆಗುತ್ತಾರೆ. ಜೀವನದಲ್ಲಿ ಎಲ್ಲವೂ ಇತ್ತು.. ಆದರೆ ಕೊನೆ ದಿನದಲ್ಲಿ ಇವರ ಜೀವನ ನರಕದಂತಾಗಿತ್ತು ಎಂದು ಅವರೇ ಒಂದು ವೇದಿಕೆ ಮೇಲೆ ಹೇಳಿಕೊಂಡಿದ್ದರು.

ಒಂದು ಕಾರ್ಯಕ್ರಮದಲ್ಲಿ ಈಗಿನ ಯುವ ಪೀಳಿಗೆಗೆ ಏನಾದರೂ ಹೇಳಿ ಎಂದು ರಾಕೇಶ್ ಅವರನ್ನು ಕೇಳಿಕೊಂಡಾಗ, ನನ್ನದು ಸಕ್ಸಸ್ ಸ್ಟೋರಿ ಅಲ್ಲ ಬದಲಿಗೆ ಫೇಲ್ಯೂರ್ ಸ್ಟೋರಿ ಎಂದಿದ್ದರು. ಹೌದು 25 ವರ್ಷಕ್ಕೆ 25,000 ಕೋಟಿ ಒಡೆಯನಾದೆ, ಆದರೂ ಕೂಡ ನನ್ನ ಮಕ್ಕಳ ವಿದ್ಯಾಭ್ಯಾಸ ಶಾಲೆಗೆ ಹೋಗುವ ಸಂದರ್ಭದಲ್ಲಿ ನಾನು ಅನಾರೋಗ್ಯಕ್ಕೆ ಒಳಗಾದೆ, ಈ ಷೇರು ಮಾರುಕಟ್ಟೆಯಲ್ಲಿನ ಟೆನ್ಶನ್ ತಡೆದುಕೊಳ್ಳಲು 15 ನಿಮಿಷಕೊಂದು ಸಿಗರೇಟ್ ಹೊಡೆಯುತ್ತಿದೆ, ಅತ್ತ ಎಣ್ಣೆ ದಾಸನಾಗಿದ್ದೆ ಎಂದಿದ್ದರು. ದಿನಕ್ಕೆ ಹತ್ತಾರು ಪೆಗ್, 25 ಸಿಗರೇಟ್ ಸೇದುತ್ತಿದ್ದೆ, ಆಗಿನ ನನ್ನ ಬಿಸಿನೆಸ್ ಸ್ಪೀಡ್ ಈಗ ಇಲ್ಲ, ಆರೋಗ್ಯ ತುಂಬಾನೇ ಹದಗೆಟ್ಟಿತು, ಒಬ್ಬ ಮೀನು ಹಿಡಿಯುವ ಮೀನು ಹಿಡಿದು, ಆಯಾಸಾದರೆ ಅಲ್ಲೇ ಮಲಗಿಕೊಂಡು, ಆ ಮೀನುಗಳ ಮಾರಿಕೊಂಡು ಮನೆಗೆ ಹೋಗಿ ಊಟ ಮಾಡಿ ನೆಮ್ಮದಿಯಿಂದ ಮಲಗುತ್ತಾನೆ. 

ಆತ ನೆಮ್ಮದಿಯಿಂದ ಇರುತ್ತಾನೆ. ಆದರೆ ನನಗೆ ಇಷ್ಟೆಲ್ಲ ಇದ್ದರೂ ಕೊನೆಗಳಿಗೆಯಲ್ಲಿ ಏನು ಮಾಡಲು ಆಗುತ್ತಿಲ್ಲ ಎಂದು ನೊಂದುಕೊಂಡಿದ್ದರು.. ರಾಕೇಶ್ ಜುಂಜುನ್ ವಾಲಾ ಅವರು ನನ್ನದು ಸಕ್ಸಸ್ ಸ್ಟೋರಿ ಅಲ್ಲ, ಬದಲಿಗೆ ಫೇಲ್ಯೂರ್ ಸ್ಟೋರಿ. ನಾನು ಯಾವ ರೀತಿಯಲ್ಲೂ ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗಲಿಲ್ಲ, ಅದೆಲ್ಲ ನನ್ನ ಆ ಬ್ಯಾಡ್ ಹ್ಯಾಬಿಟ್ಸ್ ಗಳಿಂದಲೇ ಎಂದು ಒಮ್ಮೆ ಹೇಳಿಕೊಂಡಿದ್ದಾರೆ. ಹೌದು 62ನೇ ವರ್ಷದಲ್ಲಿ ರಾಕೇಶ್ ಅವರು ತುಂಬಾನೇ ಅನಾರೋಗ್ಯಕ್ಕೆ ಒಳಗಾಗಿದ್ದರು,  ನಾಲ್ಕೈದು ದಿನದ ನಂತರ ರಾಕೇಶ್ ಅವರಿಗೆ ಈ ಡಯಾಲಿಸಿಸ್ ಅನಿವಾರ್ಯವಾಗಿತ್ತು, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು, ಮಧುಮೇಹದಿಂದ ಡಯಾಲಿಸಿಸ್ ಕೂಡ ಮಾಡಿಸುತ್ತಿದ್ದರು, ಹೋಗುತ್ತಾ ಹೋಗುತ್ತಾ ನಂತರ ಅವರ ಕಾಲುಗಳು ಸಹ ಸ್ವಾಧೀನ ಕಳೆದುಕೊಂಡಿದ್ದವಂತೆ.

ಆಗಲು ಕೂಡ ರಾಕೇಶ್ ಅವರು ಈ ಜೀವನದಲ್ಲಿ ಕೆಲಸ ಮಾಡುವ ಉತ್ಸಾಹ ನಿಂತಲ್ಲಿ ಸ್ಥಗಿತ ಆಗಿರಲಿಲ್ಲ. ಬದಲಿಗೆ ಇನ್ನಷ್ಟು ಎತ್ತರಕ್ಕೆ ಒಯ್ಯಬೇಕು ಎನ್ನುವದಾಗಿ ಆಕಾಶ್ ಏರ್ಲೈನ್ ಅನ್ನು ರಾಕೇಶ್ ಅವರು ತಮ್ಮ 62 ನೇ ವಯಸ್ಸಿನಲ್ಲಿ ಆರಂಭಿಸಿದರು. ಇದನ್ನೆಲ್ಲ ನೋಡಿದ ಕೆಲವರು ನೀವು ಆಕಾಶ್ ಏರ್ಲೈನ್ಸ್ ಬಗ್ಗೆ ಏನು ಹೇಳುತ್ತೀರಾ ಎಂದಾಗ ನಾನು ವೈಫಲ್ಯಕ್ಕೆ ಸಿದ್ದನಾಗಿದ್ದೇನೆ ಎಂದು ಹೇಳಿದ್ದರಂತೆ.. ರಾಕೇಶ್ ಅವರು ನಿಯಮಿತವಾಗಿ ಆಹಾರ ಸೇವಿಸಿದೆ ಹೆಚ್ಚು ಊಟವನ್ನು ಇಷ್ಟಪಡುತ್ತಿದ್ದರಿಂದ ಹೆಚ್ಚಾಗಿ ಎಲ್ಲಾ ಊಟಗಳನ್ನು ಸೇವಿಸುತ್ತಿದ್ದರು. ಈ ಸಿಗರೇಟ್, ಆಲ್ಕೋಹಾಲ್ ನ ವಿಪರೀತ ದಾಸ ಆಗಿದ್ದರಿಂದ 62ನೇ ವಯಸ್ಸಿನಲ್ಲಿ ರಾಕೇಶ್ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ನೋಡಿ ಸ್ನೇಹಿತರೆ.

ಅವರೇ ಹೇಳಿದ ಹಾಗೆ ಜೀವನದಲ್ಲಿ ದುಡ್ಡಿನ ಹಿಂದೆ ಹೋಗಬೇಡಿ, ನಿಮ್ಮ ಆರೋಗ್ಯದ ಹಿಂದೆ ಓಡಿ ಎನ್ನುವ ಸಲಹೆಯನ್ನು ನೀಡಿದ್ದರು. ಹಾಗೇನೆ ರಾಕೇಶ್ ಅವರು ಈಗ ನಿಧನರಾಗಿರಬಹುದು, ಆದರೆ ಭಾರತದ ಷೇರು ಮಾರುಕಟ್ಟೆ ಇರುವವರೆಗೂ ಇವರ ಹೆಸರು ಎಂದಿಗೂ ಅಜರಾಮರ ಎಂದು ಹೇಳಬಹುದು.. ರಾಕೇಶ್ ಜುಂಜುನ್ ವಾಲಾ ಅವರು ಮದುವೆಯಾಗಿ 17 ವರ್ಷದ ಬಳಿಕ ತಂದೆಯಾಗಿದ್ದಾರಂತೆ. ಅವರ ಮಕ್ಕಳು ಸ್ಕೂಲಿಗೆ ಹೋಗುವ ವೇಳೆಗೆ, ಅನಾರೋಗ್ಯದಿಂದ ನಾನ ಬಳಲಿದೆ, ಈ ಷೇರು ಮಾರುಕಟ್ಟೆಯಲ್ಲಿನ ಟೆನ್ಶನ್ ನಿಂದ ನಾನು ಹೆಂಡತಿ ಮಕ್ಕಳಿಗೆ ಹೆಚ್ಚು ಸಮಯವೇ ಕೊಡಲಿಲ್ಲ ಎಂದು ಕೊನೆಯ ದಿನಗಳಲ್ಲಿ ತುಂಬಾ ನೊಂದಿಕೊಂಡಿದ್ದರು ಎಂದು ತಿಳಿದು ಬಂದಿದೆ.. ಜೀವನದಲ್ಲಿ ಯಾವ ಸಮಯದಲ್ಲಿ ಎಷ್ಟು ಪ್ರೀತಿಯನ್ನು ನಿಮ್ಮವರಿಗೆ ಕೊಡೋಕೆ ಆಗುತ್ತೋ, ಅಷ್ಟು ಪ್ರೀತಿಯ ಇಂದೆ ನೀವು ಕೊಟ್ಟು ಬಿಡಿ. ನಮ್ಮ ಜೀವನ ಯಾವಾಗ ಕೊನೆಯಾಗುತ್ತದೆ ಎಂದು ಯಾರಿಗೂ ಕೂಡ ಗೊತ್ತಿಲ್ಲ ಅಲ್ಲವೇ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.. ( video credit : friday talks kannada )