ಕರ್ನಾಟಕ ಬ್ಯಾಂಕಿನಲ್ಲಿ ಎಫ್ ಡಿ ಮತ್ತು ಅಕೌಂಟ್ ಇಟ್ಟವರಿಗೆ ಮಹತ್ವದ ಸೂಚನೆ!!

101 ವರ್ಷಗಳ ಇತಿಹಾಸವಿರುವ ಕರ್ನಾಟಕ ಬ್ಯಾಂಕ್ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ “ದಿವಾಳಿ ಆಗುತ್ತಿದೆ” ಎಂಬ ಸುದ್ದಿ ಗ್ರಾಹಕರಲ್ಲಿ ಆತಂಕ ಉಂಟುಮಾಡಿದೆ. ಈ ಸುದ್ದಿಗೆ ತಕ್ಷಣ ಸ್ಪಂದಿಸಿದ ಬ್ಯಾಂಕಿನ ಕಸ್ಟಮರ್ ಹೆಡ್ ರಂಜಿತ್ ಶೆಟ್ಟಿ ಅವರು, ಬ್ಯಾಂಕ್ ಸಂಪೂರ್ಣವಾಗಿ ಸುಭದ್ರವಾಗಿದೆ ಮತ್ತು ಯಾವುದೇ ಆರ್ಥಿಕ ನಷ್ಟವಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ, ಗ್ರಾಹಕರಲ್ಲಿ ಇನ್ನೂ ಅನುಮಾನಗಳು ಮುಂದುವರೆದ ಹಿನ್ನೆಲೆಯಲ್ಲಿ ಬ್ಯಾಂಕಿನ ಚೇರ್ಮನ್ ಪ್ರದೀಪ್ ಕುಮಾರ್ ಅವರು ಮಾಧ್ಯಮದ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ.
ಚೇರ್ಮನ್ ಅವರ ಪ್ರಕಾರ, ಬ್ಯಾಂಕಿನ ಆರ್ಥಿಕ ಸ್ಥಿತಿ ಬಲಿಷ್ಠವಾಗಿದೆ ಮತ್ತು ಗ್ರಾಹಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಇತ್ತೀಚೆಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ ನಡೆದಿದ್ದು, ಇದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿದೆ. ಈ ಬದಲಾವಣೆಯಿಂದ ಬ್ಯಾಂಕಿನ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೆಲವರು ಈ ಬದಲಾವಣೆಯನ್ನು ತಪ್ಪಾಗಿ ಅರ್ಥಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಅವರು ಖಂಡಿಸಿದರು.
ಪ್ರದೀಪ್ ಕುಮಾರ್ ಅವರು ಸ್ಪಷ್ಟಪಡಿಸಿದಂತೆ, ಕರ್ನಾಟಕ ಬ್ಯಾಂಕ್ ಕಳೆದ ಹಲವು ವರ್ಷಗಳಿಂದ ಲಾಭದಲ್ಲಿದೆ. ಬ್ಯಾಂಕಿನ Capital Adequacy Ratio (CAR) 19.85% ಆಗಿದ್ದು, ಇದು RBI ನ ನಿಯಮಿತ ಮಟ್ಟವಾದ 11.5% ಗಿಂತ ಬಹಳ ಹೆಚ್ಚು. ಈ ಅಂಶವೇ ಬ್ಯಾಂಕಿನ ಆರ್ಥಿಕ ಬಲವನ್ನು ತೋರಿಸುತ್ತದೆ. ಇತ್ತೀಚೆಗೆ ₹400 ಕೋಟಿ ಠೇವಣಿಯನ್ನು ಒಂದು ಸಂಸ್ಥೆ ಇಟ್ಟಿರುವುದು ಕೂಡ ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಬ್ಯಾಂಕಿನಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂಬುದನ್ನು ಚೇರ್ಮನ್ ಪುನಃ ಪುನಃ ಸ್ಪಷ್ಟಪಡಿಸಿದ್ದಾರೆ. ಕೆಲವು ಮಾಧ್ಯಮಗಳು ಬ್ಯಾಂಕನ್ನು ಸಂಪರ್ಕಿಸದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. ಆದರೆ ಗ್ರಾಹಕರು ತಮ್ಮ ಠೇವಣಿಗಳ ಬಗ್ಗೆ ಯಾವುದೇ ರೀತಿಯ ಭಯ ಅಥವಾ ಅನುಮಾನವಿಲ್ಲದೆ ನಿಶ್ಚಿಂತವಾಗಿರಬಹುದು ಎಂದು ಅವರು ಭರವಸೆ ನೀಡಿದ್ದಾರೆ. ನಿಮ್ಮ ಸೇವಿಂಗ್ಸ್ ಬ್ಯಾಂಕಲ್ಲಿ ಇಟ್ಟಿರುವ ಹಣ ಮತ್ತು ಎಫ್ ಡಿ ಹಣ ಯಾವತ್ತಿಗೂ ಮೋಸ ಆಗೋದಿಲ್ಲ ಎಂದು ಹೇಳಿದ್ದಾರೆ.
ಅಂತಿಮವಾಗಿ, ಚೇರ್ಮನ್ ಪ್ರದೀಪ್ ಕುಮಾರ್ ಅವರು ಗ್ರಾಹಕರಿಗೆ ಮನವಿ ಮಾಡಿದ್ದು, ಯಾವುದೇ ಸುಳ್ಳು ವದಂತಿಗಳಿಗೆ ಬಲಿಯಾಗದೆ, ಅಧಿಕೃತ ಮಾಹಿತಿಗಳನ್ನೇ ನಂಬಬೇಕು. ಬ್ಯಾಂಕ್ ತನ್ನ ಗ್ರಾಹಕರ ಹಣದ ಸುರಕ್ಷತೆಗೆ ಬದ್ಧವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.