ರಾಜ್ಯಾದ್ಯಂತ ಮತ್ತೆ 2 ದಿನ ರಜೆ ಘೋಷಣೆ .. ಕಾರಣ ಇಲ್ಲಿದೆ !!

ರಾಜ್ಯಾದ್ಯಂತ ಮತ್ತೆ 2 ದಿನ ರಜೆ ಘೋಷಣೆ ..  ಕಾರಣ  ಇಲ್ಲಿದೆ !!

 ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಈಗ ರಾಜ್ಯದಲ್ಲಿರುವ ಕಾರ್ಮಿಕರಿಗೆ ಒಂದು ಸಿಹಿ ಸುದ್ದಿಯನ್ನ ನೀಡಲು ಮುಂದಾಗಿದೆ. ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಕಾರ್ಮಿಕರಿಗೆ ವಾರಕ್ಕೆ ಎರಡು ದಿನ ರಜೆಯನ್ನ ಘೋಷಣೆ ಮಾಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನ ದಿನಕ್ಕೆ ಒಂಬತ್ತರಿಂದ 10 ಗಂಟೆಗೆ ಹೆಚ್ಚಳವನ್ನ ಮಾಡಿ ವಾರಕ್ಕೆ ಎರಡು ದಿನ ರಜೆಯನ್ನ ಘೋಷಣೆ ಮಾಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ.

ಸ್ನೇಹಿತರೆ ಕರ್ನಾಟಕದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಸೆಕ್ಷನ್ ಏಳರ ಪ್ರಕಾರ ಕೆಲಸದ ಅವಧಿಯು ದಿನಕ್ಕೆ ಒಂಬತ್ತು ಗಂಟೆ ಮೀರಬಾರದು ಅಷ್ಟೇ ಮಾತ್ರವಲ್ಲದೆ ಗರಿಷ್ಠ ಓಟಿ 10 ಗಂಟೆಗಳನ್ನ ಮೀರಬಾರದು ಅನ್ನುವ ನಿಯಮವಿದೆ ಸದ್ಯ ಈ ಕಾನೂನು ಸೆಕ್ಷನ್ ಅನ್ನ ಸರ್ಕಾರ ತಿದ್ದುಪಡಿ ಮಾಡಲು ಈಗ ಮುಂದಾಗಿದೆ ಇನ್ನು ಕಾನೂನು ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಕೆಲಸದ ಅವಧಿಯನ್ನ ದಿನಕ್ಕೆ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನ ದಿನಕ್ಕೆ ಗರಿಷ್ಠ 12 ಗಂಟೆಗೆ ವಿಸ್ತರಣೆ ಮಾಡಲು ಈಗ ನಿರ್ಧಾರವನ್ನ ಮಾಡಿದೆ.

ಇನ್ನು ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚ ಹಂತದಲ್ಲಿದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ವಿಕಾಸ ಸೌದದಲ್ಲಿ ಕೈಗಾರಿಕ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆಯನ್ನು ಕೂಡ ಕರೆದಿದೆ. ಕಾರ್ಮಿಕರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಿ ಅವರಿಗೆ ಶನಿವಾರ ಮತ್ತು ಭಾನುವಾರ ಅಂದರೆ ವಾರಕ್ಕೆ ಎರಡು ದಿನ ರಜೆಯನ್ನ ನೀಡಬೇಕು ಅಂತ ಸರ್ಕಾರ ಈಗ ಚಿಂತನೆಯನ್ನ ಮಾಡಿದೆ. ಆದರೆ ಸರ್ಕಾರ ಈಗ ಕೆಲಸದ ಅವಧಿಯನ್ನ ಹೆಚ್ಚಳ ಮಾಡಿ ವಾರಕ್ಕೆ ಎರಡು ದಿನ ರಜೆಯನ್ನು ನೀಡುತ್ತಿರುವುದು ಕೆಲವು ಕಾರ್ಮಿಕ ಸಂಘಟನೆಗಳ ವಿರೋಧಕ್ಕೂ ಕೂಡ ಕಾರಣವಾಗಿದೆ.

ಆದರೆ ಕೆಲಸದ ಅವಧಿಯನ್ನ ಏರಿಸುವ ಸರ್ಕಾರದ ಪ್ರಸ್ತಾಪಕ್ಕೆ ಹೋಟೆಲ್ ಮಾಲಿಕರ ಸಂಘ ಈಗ ಬೆಂಬಲವನ್ನ ವ್ಯಕ್ತಪಡಿಸಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ವಾರಕ್ಕೆ 48 ಗಂಟೆ ಮಾತ್ರ ಕೆಲಸವನ್ನ ಮಾಡುತ್ತಾರೆ. ದಿನದ ಕೆಲಸದ ಅವಧಿಯನ್ನ 10 ಗಂಟೆಗೆ ಏರಿಕೆ ಮಾಡಿದರೆ ಅವರಿಗೆ ಏನು ವ್ಯತ್ಯಾಸ ಆಗುವುದಿಲ್ಲ ಅಂತ ಸಾಕಷ್ಟು ಜನರು ತಮ್ಮ ಅಭಿಪ್ರಾಯವನ್ನು ಕೂಡ ಹೊರಹಾಕಿದ್ದಾರೆ. ಸ್ನೇಹಿತರೆ ನೀವು ಕೂಡ ಕಾರ್ಮಿಕರಾಗಿದ್ದು ಸರ್ಕಾರ ಮಾಡುತ್ತಿರುವ ಈ ಕಾನೂನು ತಿದ್ದುಪಡಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ.